ವಿದ್ವತ್ ಮೇಲೆ ಹಲ್ಲೆ : ಮೊಹಮ್ಮದ್ ನಲಪಾಡ್ ಹೇಳಿದ ಘಟನೆಯ ವಿವರ

Posted By: Gururaj
Subscribe to Oneindia Kannada
   ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಲ್ಲೆ ಪ್ರಕರಣ : ಯು ಬಿ ಸಿಟಿಯಿಂದ ಜೈಲಿನವರೆಗೆ | Oneindia Kannada

   ಬೆಂಗಳೂರು, ಮಾರ್ಚ್ 12 : ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಸೋಮವಾರ ನಡೆಯಲಿದೆ. ನಲಪಾಡ್ ಪೊಲೀಸರಿಗೆ ನೀಡಿದ ಹೇಳಿಕೆ ಈಗ ಬಹಿರಂಗವಾಗಿದೆ.

   ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಫೆ.17ರಂದು ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಇತರ 6 ಆರೋಪಿಗಳನ್ನು ಬಂಧಿಸಲಾಗಿದೆ. ಎಲ್ಲರೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

   ಮೊಹಮ್ಮದ್ ನಲಪಾಡ್‌ ಪ್ರಕರಣ : ವಿದ್ವತ್ ನೀಡಿದ ಘಟನೆಯ ವಿವರ

   ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 63ನೇ ಸೆಷನ್ಸ್ ಕೋರ್ಟ್‌ ತಿರಸ್ಕರಿಸಿದೆ. ಕರ್ನಾಟಕ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಾಗಿದ್ದು, ಇಂದು ವಿಚಾರಣೆ ನಡೆಯಲಿದೆ. ಸದ್ಯ, ಈ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದಾರೆ.

   ವೈದ್ಯರಿಗೇ ತಿರುಗುಬಾಣವಾದ ವಿದ್ವತ್ ಡಿಸ್ಚಾರ್ಜ್ ವರದಿ

   ಫೆ.17ರಂದು ವಿದ್ವತ್ ಮೇಲೆ ಹಲ್ಲೆ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ ಮೊಹ್ಮಮದ್ ನಲಪಾಡ್ ಫೆ.19ರಂದು ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಶರಣಾಗಿದ್ದರು. ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಘಟನೆ ಬಗ್ಗೆ ಮೊಹ್ಮಮದ್ ನಲಪಾಡ್ ನೀಡಿದ ಹೇಳಿಕೆ ಈಗ ಬಹಿರಂಗವಾಗಿದೆ. ನಲಪಾಡ್ ಹೇಳಿದ್ದೇನು? ಮುಂದೆ ಓದಿ.

   ಊಟಕ್ಕೆಂದು ಫರ್ಜಿ ಕೆಫೆಗೆ ಹೋಗಿದ್ದೆವು

   ಊಟಕ್ಕೆಂದು ಫರ್ಜಿ ಕೆಫೆಗೆ ಹೋಗಿದ್ದೆವು

   ಫೆ.17ರಂದು ನಾನು ಕಾರು ಚಾಲಕ ಅರುಣ್, ಸ್ನೇಹಿತರಾದ ಮಂಜುನಾಥ್, ಬಾಲಕೃಷ್ಣ, ಮೊಹಮ್ಮದ್ ಅಪ್ರಾಸ್, ಅಭಿಷೇಕ್ ಮತ್ತು ನಫಿ ಊಟಕ್ಕೆಂದು ಫರ್ಜಿ ಕೆಫೆಗೆ ಹೋಗಿದ್ದೆವು.

   ವಿದ್ವತ್ ಹೇಳಿಕೆ : ಫೆ.17ರಂದು ರಾತ್ರಿ 8 ಗಂಟೆಗೆ ಸ್ನೇಹಿತರ ಜೊತೆ ಊಟಕ್ಕಾಗಿ ಬಂದೆ. ರಾತ್ರಿ 10 ಗಂಟೆ ವೇಳೆಗೆ ಊಟ ಮುಗಿಸಿ ಹೊರಡಲು ಸಿದ್ಧರಾದೆವು. ಆಗ ನಲಪಾಡ್ ಮತ್ತು ಆತನ ಸ್ನೇಹಿತರು ಫರ್ಜಿ ಕೆಫೆಗೆ ಬಂದರು.

   ವಿದ್ವತ್ ನಿಂತುಕೊಂಡು ಮದ್ಯ ಕುಡಿಯುತ್ತಿದ್ದ

   ವಿದ್ವತ್ ನಿಂತುಕೊಂಡು ಮದ್ಯ ಕುಡಿಯುತ್ತಿದ್ದ

   23ರಿಂದ 24 ವರ್ಷದ ಅಪರಿಚಿತ ಯುವಕ (ವಿದ್ವತ್) ಸ್ನೇಹಿತರ ಜೊತೆ ನಿಂತುಕೊಂಡು ಮದ್ಯ ಕುಡಿಯುತ್ತಿದ್ದ. ನಾವು ಒಳಗೆ ಹೋದಾಗ ಆತ ಅರುಣ್‌ನನ್ನು ತಳ್ಳಿದ. ಅದನ್ನು ಪ್ರಶ್ನಿಸಿದ್ದಕ್ಕೆ ಜಗಳ ತೆಗೆದ. ಜಗಳ ಬಿಡಿಸಲು ಮುಂದಾದೆ.

   ವಿದ್ವತ್ : ನನ್ನ ಕಾಲು ನಲಪಾಡ್‌ಗೆ ತಾಕಿತು. ಆಗ ನಾನು ಕ್ಷಮೆ ಕೇಳಿದೆ. ಆದರೆ, ಸ್ನೇಹಿತನೊಬ್ಬ ಅಣ್ಣನ ಎದುರೇ ಕಾಲು ಚಾಚಿಕೊಂಡು ಕುಳಿತಿದ್ದೀಯಾ? ಎಂದು ಗಲಾಟೆ ಆರಂಭಿಸಿದರು. ಕಾಲು ಮೂಳೆ ಮುರಿದಿದೆ ಎಂದು ಹೇಳಿದೆ. ತಕ್ಷಣ ಗಲಾಟೆ ಆರಂಭಿಸಿದರು.

   ಜಗಳ ಆರಂಭವಾದಾಗ ಒಂದು ಏಟು ಹೊಡೆದೆ

   ಜಗಳ ಆರಂಭವಾದಾಗ ಒಂದು ಏಟು ಹೊಡೆದೆ

   ಜಗಳ ಬಿಡಿಸಲು ಆರಂಭಿಸಿದೆ. ಆಗ, ವಿದ್ವತ್ ನನ್ನ ಜೊತೆಯೂ ಜಗಳವಾಡಲು ಆರಂಭಿಸಿದ. ಆಗ ಒಂದು ಏಟು ಹೊಡೆದೆ. ವಿದ್ವತ್ ನನಗೆ ಹೊಡೆಯಲು ಬಂದ. ಅದನ್ನು ನೋಡಿದ ಅರುಣ್ ಕುಮಾರ್
   ಐಸ್‌ ಕ್ಯೂಬ್‌ ಬಕೆಟ್‌ನಿಂದ ಆತನಿಗೆ ಹೊಡೆದ.

   ವಿದ್ವತ್ : ‘ಅಣ್ಣನ ಎದುರೇ ಮಾತನಾಡುತ್ತೀಯಾ' ಎಂದು ಒಬ್ಬ ಕೆನ್ನೆಗೆ ಹೊಡೆದ. ನನ್ನ ಸ್ನೇಹಿತರು ರಕ್ಷಣೆಗೆ ಬಂದರು. ಆಗ ಎಲ್ಲರೂ ಸೇರಿ ಹಲ್ಲೆ ಮಾಡಿದರು.

   ಬಾಟಲಿಗಳನ್ನು ಎಸೆದರು

   ಬಾಟಲಿಗಳನ್ನು ಎಸೆದರು

   ವಿದ್ವತ್ ಮೇಲೆ ನಫಿ ಹಾಗೂ ಶ್ರೀಕೃಷ್ಣ ಬಾಟಲಿಗಳನ್ನು ಎಸೆದರು.ಆತನ ಮುಖ, ಕಪಾಳ, ಎದೆ ಹಾಗೂ ಬೆನ್ನಿಗೆ ಮಂಜುನಾಥ್ ಹೊಡೆದ. ನಂತರ ನಾವೆಲ್ಲರೂ ಕೆಫೆಯಿಂದ ಹೊರಗೆ ಬಂದೆವು.

   ವಿದ್ವತ್ : ಬಾಟಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದರು. ಆಗ ಮೂಗಿನಿಂದ ರಕ್ತ ಬರಲು ಆರಂಭವಾಯಿತು. ಅಷ್ಟಕ್ಕೂ ಸುಮ್ಮನಾಗದೇ ಬಟ್ಟೆ ಹರಿದರು. ಕಾಲಿನಿಂದ ಒದ್ದರು. ಸ್ನೇಹಿತರು ನನ್ನನ್ನು ಆಸ್ಪತ್ರೆಗೆ ಸೇರಿಸಲು ಮುಂದಾದರು.

   ಆಸ್ಪತ್ರೆಗೆ ನೋಡಲು ಹೋದೆವು

   ಆಸ್ಪತ್ರೆಗೆ ನೋಡಲು ಹೋದೆವು

   ಕೆಲವು ಹೊತ್ತು ಯ.ಬಿ.ಸಿಟಿಯಲ್ಲಿಯೇ ಓಡಾಡಿ ರಾತ್ರಿ 11.30ಕ್ಕೆ ಗೇಟ್ ಬಳಿ ಬಂದೆವು. ವಿದ್ವತ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂಬುದನ್ನು ತಿಳಿದು ಅಲ್ಲಿಗೆ ಹೋದೆವು.

   ವಿದ್ವತ್ : ಸ್ನೇಹಿತರು ನನ್ನನ್ನು ಕಾರಿನ ಬಳಿ ಕರೆದುಕೊಂಡು ಹೋದರು. ಅಲ್ಲಿಗೂ ಬಂದ ನಲಪಾಡ್ ಮತ್ತು ಸ್ನೇಹಿತರು ನನ್ನ ಮೇಲೆ ಹಲ್ಲೆ ನಡೆಸಿದರು.

   ಸಂಬಂಧಿಕರು ಬಂದಿದ್ದರು

   ಸಂಬಂಧಿಕರು ಬಂದಿದ್ದರು

   ಆಸ್ಪತ್ರೆಗೆ ಹೋಗುವಷ್ಟರಲ್ಲಿ ಗಾಯಾಳು ಸಂಬಂಧಿಕರು ಹಾಗೂ ಇತರೆ ವ್ಯಕ್ತಿಗಳು ಅಲ್ಲಿ ಸೇರಿದ್ದರು. ನಮಗೆ ಗಾಯಾಳು ವ್ಯಕ್ತಿಯನ್ನು ಮಾತನಾಡಿಲು ಆಗಲಿಲ್ಲ. ಆದ್ದರಿಂದ, ವಾಪಸ್ ಬಂದೆವು.

   ವಿದ್ವತ್ : ಮೊಹಮ್ಮದ್ ನಲಪಾಡ್‌ನನ್ನು ಹಿಂದೆ ಪಾರ್ಟಿಗಳಲ್ಲಿ ನೋಡಿದ್ದೆ. ಆದರೆ, ಒಮ್ಮೆಯೂ ಅವರ ಜೊತೆ ಮಾತನಾಡಿರಲಿಲ್ಲ. ಆ ದಿನದ ಕೌರ್ಯ ನೆನಪು ಮಾಡಿಕೊಂಡರೆ ಇಂದಿಗೂ ಭಯವಾಗುತ್ತದೆ ಎಂದು ವಿದ್ವತ್ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

   ಗಲಾಟೆ ಆದ ಜಾಗವನ್ನು ತೋರಿಸುತ್ತೇನೆ

   ಗಲಾಟೆ ಆದ ಜಾಗವನ್ನು ತೋರಿಸುತ್ತೇನೆ

   ಫೆ.19ರಂದು ಖುದ್ದಾಗಿ ಠಾಣೆಗೆ ಹಾಜರಾಗಿದ್ದೇನೆ. ನನ್ನನ್ನು ಕರೆದುಕೊಂಡು ಹೋದರೆ ನಾವು ಗಲಾಟೆ ಮಾಡಿದ ಜಾಗವನ್ನು ತೋರಿಸುತ್ತೇನೆ.

   ವಿದ್ವತ್ : ಮಲ್ಯ ಆಸ್ಪತ್ರೆಗೆ ನನ್ನನ್ನು ಕರೆದುಕೊಂಡು ಬಂದರು. ನಲಪಾಡ್ ಮತ್ತು ಸ್ನೇಹಿತರು ಅಲ್ಲಿಗೂ ಬಂದು ಬೆದರಿಕೆ ಹಾಕಿದರು. ರಾಜ್ ಕುಮಾರ್ ಅವರ ಮೊಮ್ಮಗ ಗುರು ಆಸ್ಪತ್ರೆಗೆ ಬಂದರು. ಆಗ ನಲಪಾಡ್ ಮತ್ತು ಆತನ ಸ್ನೇಹಿತರು ಅಲ್ಲಿಂದ ಹೋದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Shantinagar Congress MLA N.A.Haris son Mohammed Nalapad attacked on Vidvat. Cubbon Park police recorded the statement of the Mohammed Nalapad, who is on judicial custody and in Parappana Agrahara jail.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ