ದೇಶದ ಅತೀ ದೊಡ್ಡ ಶಾಸಕಾಂಗ ಭವನ 'ವಿಧಾನಸೌಧ':ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್!

Posted By:
Subscribe to Oneindia Kannada

1951... ಬೆಂಗಳೂರಿನ ಹೃದಯಭಾಗದಲ್ಲಿ 1.75 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕಟ್ಟಡವೊಂದು ನಿರ್ಮಾಣವಾಗುತ್ತಿದೆ ಎಂದಾಗ, "ಅಷ್ಟೆಲ್ಲ ಹಣ ವೆಚ್ಚ ಮಾಡಿ ಈ ಕಟ್ಟಡ ಕಟ್ಟುವ ಅಗತ್ಯವಾದರೂ ಏನಿತ್ತು?" ಎಂಬ ಪ್ರಶ್ನೆ ಸರ್ವೇ ಸಾಮಾನ್ಯವಾಗಿತ್ತು.

ಗ್ಯಾಲರಿ:ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ

ಆದರೆ ಇದ್ಯಾವುದರೆಡೆಗೂ ತಲೆಕೆಡಿಸಿಕೊಳ್ಳದೆ ದಿ.ಕೆಂಗಲ್ ಹನುಮಂತಯ್ಯ(ಮಾಜಿ ಮುಖ್ಯಮಂತ್ರಿ) ಕಟ್ಟಡ ನಿರ್ಮಾಣಕ್ಕಾಗಿ ಟೊಂಕಕಟ್ಟಿ ನಿಂತಿದ್ದರು.

ಸುಮಾರು 60 ಎಕರೆ ಜಾಗದಲ್ಲಿ, ಸಾವಿರಾರು ಕಾರ್ಮಿಕರ ಬೆವರಿನ ಫಲವಾಗಿ 1956 ರಲ್ಲಿ 'ವಿಧಾನ ಸೌಧ' ಎಂಬ ಭವ್ಯ ಭವನ ತಲೆಯೆತ್ತಿನಿಂತಿತು. ಕೆಂಗಲ್ ಹನುಮಂತಯ್ಯ ಅವರನ್ನು ಟೀಕಿಸಿದವರಿಗೂ ಗೊತ್ತಿರಲಿಲ್ಲ, ಆಗ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದ್ದುದು 'ದೇಶದ ಅತೀ ದೊಡ್ಡ ಶಾಸಕಾಂಗ ಭವನ' ಎಂಬುದು!

ಕಂಗೊಳಿಸುತ್ತಿದೆ ವಿಧಾನಸೌಧ: ವಜ್ರಮಹೋತ್ಸವದ ಕಾರ್ಯಕ್ರಮ ಪಟ್ಟಿ

ಟೀಕೆ, ಬೆಂಬಲಗಳ ಮಿಶ್ರಣದೊಂದಿಗೆ ಅಂದು ನಿರ್ಮಾಣವಾದ ವಿಧಾನ ಸೌಧಕ್ಕೆ ಇದೀಗ 60 ರ ಸಂಭ್ರಮ! ರಾಜ್ಯದ ಪ್ರತಿಯೊಂದು ಮಹತ್ವದ ಆಗುಹೋಗುಗಳಿಗೂ ಮೌನಸಾಕ್ಷಿಯಾಗಿ ನಿಂತ, ಶಕ್ತಿಕೇಂದ್ರ ವಿಧಾನ ಸೌಧ ಇಂದು(ಅ.25) ವಜ್ರಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಈ ಶುಭಘಳಿಗೆಯಲ್ಲಿ ಹಾಜರಿದ್ದಾರೆ. ವಿಧಾನ ಸೌಧದ ವಜ್ರಮಹೋತ್ಸವದ ಹಿನ್ನೆಲೆಯಲ್ಲಿ, 'ವಿಧಾನ ಸೌಧ' ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿದೆ. ರಂಗು ರಂಗಿನ ಬೆಳಕಿನಲ್ಲಿ ಕಂಗೊಳಿಸುತ್ತಿರುವ ಈ ಸುಂದರ ಕಟ್ಟಡ ನಮ್ಮ ಹೆಮ್ಮೆ ಎಂದು ಹಲವು ಕನ್ನಡಿಗರು ಟ್ವೀಟ್ ಮಾಡಿದ್ದಾರೆ.

ಮಿಸ್ ಮಾಡಿಕೊಳ್ಳಬೇಡಿ!

ಎಂಥ ಅದ್ಭುತ ವಾಸ್ತುಶಿಲ್ಪ! ರಮಣೀಯ ಬೆಳಕಿನ ಹಿನ್ನೆಲೆ! ಈ ದೃಶ್ಯವನ್ನು ಯಾರೂ ಮಿಸ್ ಮಾಡಿಕೊಳ್ಳಬೇಡಿ. ವಿಧಾನ ಸೌಧಕ್ಕೆ ವಜ್ರಮಹೋತ್ಸವದ ಶುಭಾಶಯಗಳು ಎಮದು ಅನಿಲ್ ಕುಮಾರ್ ಎಂ. ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕಂಗೊಳಿಸಿತು ವಿಧಾನ ಸೌಧ

ವಜ್ರಮಹೋತ್ಸವಕ್ಕಾಗಿ ಬಣ್ಣ ಬಣ್ಣದ ಬೆಳಕಿನಲ್ಲಿ ವಿಧಾನ ಸೌಧ ಕಂಗೊಳಿಸಿದ್ದು ಹೀಗೆ ಎಂದು ವಿಡಿಯೋ ಸಮೇತ ಸಂದೇಶ್ ಮೈಸೂರು ಎನ್ನುವವರು ಟ್ವೀಟ್ ಮಾಡಿದ್ದಾರೆ.

ಚೆಂದದ ಚಿತ್ತಾರ

ರಾಜ್ಯದ ಆಡಳಿತದ ಕೇಂದ್ರವಾದ ವಿಧಾನ ಸೌಧ ವಜ್ರಮಹೋತ್ಸವದಂದು ಸುಂದರ ಬೆಳಕಿನ ಚಿತ್ತಾರದೊಂದಿಗೆ ಕಂಡಿದ್ದು ಹೀಗೆ ಎಂದು ಚೆಂದದ ಚಿತ್ರದೊಂದಿಗೆ ಟ್ವೀಟ್ ಮಾಡಿದ್ದಾರೆ ರಶೀದ್ ಕಪ್ಪನ್.

ಪ್ರಜಾಪ್ರಭುತ್ವದ ದೇವಾಲಯ

ಸರ್ಕಾರದ ಕೆಲಸ ದೇವರ ಕೆಲಸ ಎಂಬ ಸಂದೇಶ ಹೊಂದಿರುವ ಪ್ರಜಾಪ್ರಭುತ್ವದ ದೇವಾಲಯ ವಿಧಾನ ಸೌಧಕ್ಕೆ ಈಗ 60 ರ ಸಂಭ್ರಮ ಎಂದು ಶಿವಕುಮಾರ್ ಬಿ.ಎನ್ನುವವರು ಟ್ವೀಟ್ ಮಾಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vidhana soudha, the largest legislative building in India is celebrating it's 60th anniversary as Diamond Jubilee on Oct 25th 2017. For this sreason Vidhana Soudha is becoming a trending hashtag in twitter.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ