ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ಕಿನ ಮೇಲ್ಸೇತುವೆ ಸಮರ್ಥನೆಗೆ ಜಾರ್ಜ್ ಬಿಟ್ರು 3ಡಿ ವಿಡಿಯೋ

ಕರ್ನಾಟಕ ಸರ್ಕಾರ ಉದ್ದೇಶಿಸಿರುವ ಉಕ್ಕು ಸೇತುವೆಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರು ಜನರಿಗೆ ವಸ್ತುಸ್ಥಿತಿ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ

By Mahesh
|
Google Oneindia Kannada News

ಬೆಂಗಳೂರು, ಅಕ್ಟೋಬರ್ 24: ಕರ್ನಾಟಕ ಸರ್ಕಾರ ಉದ್ದೇಶಿಸಿರುವ ಉಕ್ಕು ಸೇತುವೆಗೆ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರು ಜನರಿಗೆ ವಸ್ತುಸ್ಥಿತಿ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಚಿವ ಜಾರ್ಜ್ ಆರಂಭಿಸಿದ್ದಾರೆ.[ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]

ಜನರಿಗೆ ಸಾಮಾಜಿಕ ಜಾಲತಾಣದ ಮೂಲಕವೂ ಯೋಜನೆ ಕುರಿತು ವಸ್ತುಸ್ಥಿತಿ ತಿಳಿಸುತ್ತಿದ್ದೇವೆ. ಜೂನ್ ತಿಂಗಳಲ್ಲಿ ಅಭಿಪ್ರಾಯ ಸಂಗ್ರಹಿಸಿದಾಗ ಶೇ. 73ರಷ್ಟು ಮಂದಿ ಯೋಜನೆ ಪರವಾಗಿದ್ದರು, ಎಂದು ತಿಳಿಸಿದ ಮುಖ್ಯಮಂತ್ರಿಗಳು, ಸರ್ಕಾರ ಬಹುಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಲ್ಲವೇ ಎಂದು ಪ್ರಶ್ನಿಸಿದರು. ಆದರೂ, ಯೋಜನೆ ಬಗ್ಗೆ ತಪ್ಪು ತಿಳಿವಳಿಕೆಗಳಿದ್ದರೆ ಅದನ್ನು ಸರಿಪಡಿಸಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.[KIAಗೆ 3 ಪರ್ಯಾಯ ಮಾರ್ಗಗಳು, 300 ಕೋಟಿ ರು ಅನುದಾನ]

ಕೇಂದ್ರ ಸಚಿವ ಸದಾನಂದಗೌಡರಿಗೆ ಯೋಜನೆ ಕುರಿತು ಸಚಿವ ಜಾರ್ಜ್ ಅವರು ವಿವರಿಸಿದ್ದಾರೆ. ಬೆಂಗಳೂರಿನ ಎಲ್ಲ ಶಾಸಕರಿಗೂ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ‌ ವಿವರಗಳನ್ನು ನೀಡಲಾಗುತ್ತದೆ. ಸಾರ್ವಜನಿಕರಿಗಾಗಿ ಎರಡು ಭಾಗಗಳಲ್ಲಿ 3ಡಿ ವಿಡಿಯೋ ಪ್ರಾತ್ಯಕ್ಷಿಕೆ ನೀಡಲಾಗಿದೆ.

ಪ್ರತಿದಿನ ಸಂಚಾರ ದಟ್ಟಣೆ ಕಿರಿಕಿರಿ

ಪ್ರತಿದಿನ ಸಂಚಾರ ದಟ್ಟಣೆ ಕಿರಿಕಿರಿ

ಕೆಲವರು 854 ಮರಗಳನ್ನು ಕತ್ತರಿಸಿ ಈ ಉಕ್ಕಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ನಾನು ಅವರಲ್ಲಿ ಕೇಳುವುದಿಷ್ಟೆ:- ಹೆಬ್ಬಾಳದಲ್ಲಿರುವ 80,000 ಅಧಿಕ ಜನರು ಪ್ರತಿದಿನ ಸಂಚಾರ ದಟ್ಟಣೆ ಕಿರಿಕಿರಿ, ಒತ್ತಡ, ಪರಿಸರ ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿದ್ದಾರಲ್ಲಾ, ಅದು ಮುಖ್ಯವಲ್ಲವೇ ಎಂದು ಹೆಬ್ಬಾಳದ ನಾಗರಿಕರು ಪ್ರಶ್ನಿಸಿದ್ದಾರೆ. ಈ ಕುರಿತ ಮನವಿ ಪತ್ರ ಸಚಿವರ ಕೈ ಸೇರಿದೆ.

ಸಾಮಾನ್ಯ ಜನರು ಪ್ರತಿನಿತ್ಯ ಬಸ್ ನಲ್ಲಿ ಪ್ರಯಾಣ

ಸಾಮಾನ್ಯ ಜನರು ಪ್ರತಿನಿತ್ಯ ಬಸ್ ನಲ್ಲಿ ಪ್ರಯಾಣ

ಹವಾನಿಯಂತ್ರಿತ ಕಾರಿನಲ್ಲಿ ಪ್ರಯಾಣಿಸುವವರು ಮತ್ತು ಯಾವತ್ತೋ ಒಂದು ದಿನ ಈ ರಸ್ತೆಯನ್ನು ಬಳಸುವವರು ಮಾತ್ರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಮ್ಮಂತಹ ಸಾಮಾನ್ಯ ಜನರು ಪ್ರತಿನಿತ್ಯ ಬಸ್ ನಲ್ಲಿ ಪ್ರಯಾಣ ಮಾಡುತ್ತೇವೆ. ಈ ವೇಳೆ ಧೂಳು, ಹೊಗೆಯಂತಹ ಪರಿಸರ ಮಾಲಿನ್ಯದಿಂದ ಬಳಲುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಫ್ಲೈಓವರ್ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ಸ್ಥಳೀಯರಿಂದ ವ್ಯಕ್ತವಾಗಿದೆ

ಸಂಚಾರ ದಟ್ಟಣೆ ಹೇಗೆ ಕಡಿಮೆಯಾಗುತ್ತದೆ

ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ತನಕ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಅಗತ್ಯ ಏನಿದೆ? ಬಹುಕೋಟಿ ವೆಚ್ಚದ ಈ ಯೋಜನೆ ಎಷ್ಟು ಪಾರದರ್ಶಕ? ಯಾರಿಗೆ ಉಪಯುಕ್ತ? ಸಂಚಾರ ದಟ್ಟಣೆ ಹೇಗೆ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ವಿಡಿಯೋ

ಪರ್ಯಾಯ ಮಾರ್ಗಗಳನ್ನು ಸರ್ಕಾರ ಪರಿಗಣಿಸಿದೆ

ಉಕ್ಕು ಸೇತುವೆ ಜೊತೆಗೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕವನ್ನೂ ಕಲ್ಪಿಸಲಾಗುವುದು. ಅದಕ್ಕಾಗಿ 9 ಮಾರ್ಗಗಳನ್ನು ಗುರುತಿಸಿ ವೆಬ್‍ ಸೈಟ್‍ಗೆ ಹಾಕಲಾಗಿದೆ. ಅದಕ್ಕೂ ಜನಾಭಿಪ್ರಾಯ ಕೇಳಲಾಗುವುದು. ಬೆಂಗಳೂರಿನಲ್ಲಿ ಹತ್ತು ಲಕ್ಷ ಗಿಡಗಳನ್ನು ನೆಡಲು ಬಿಬಿಎಂಪಿಗೆ ಸೂಚಿಸಲಾಗಿದೆ. ನಮಗೂ ಪರಿಸರದ ಬಗ್ಗೆ ಕಾಳಜಿ ಇದೆ. ಪರಿಸರ ಉಳಿಸುವ ಬಗ್ಗೆ ಬದ್ಧತೆ ಇದೆ. ಪರಿಸರ ನಾಶವಾಗಲಿ ಎಂದು ನಾವು ಹೇಳುವುದಿಲ್ಲ ಎಂದು ಸಮರ್ಥಿಸಿಕೊಂಡ ಸಚಿವ ಜಾರ್ಜ್

English summary
Steel Flyover Beku: Watch Video and know the answer. Why the elevated road project from Basaveshwara Circle-Hebbal? why it is viable and a better option; how it will benefit the people and the environment in a longer run?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X