ಹಂಗಾಮಿ ಕುಲಪತಿ ಇರುವ ವಿವಿಗಳಲ್ಲಿ ಶೀಘ್ರವೇ ಕುಲಪತಿ ನೇಮಕ: ರಾಯರೆಡ್ಡಿ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 07 : ಕಳೆದ ಎಂಟು-ಹತ್ತು ತಿಂಗಳಿನಿಂದ ಹಂಗಾಮಿ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಹಂಗಾಮಿ ಕುಲಪತಿಗಳಿರುವ ವಿವಿಗಳಲ್ಲಿ ಆದಷ್ಟು ಬೇಗ ವಿಸಿಗಳ ನೇಮಕ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿದರು.

ವಿಧಾನಸೌಧದಲ್ಲಿ ಗುರುವಾರ ಮಾತನಾಡಿದ ಅವರು, ನನಗೆ ರಾಜ್ಯಪಾಲರ ಮೇಲೆ ಅಪಾರ ಗೌರವವಿದೆ. ನನ್ನನ್ನು ಸಿಎಂ ವಿವಿಗಳ ವಿಸಿ ಹುದ್ದೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಿಲ್ಲ. ರಾಜ್ಯಪಾಲರು ನನ್ನ ವಿರುದ್ಧ ಏನು ಹೇಳಿದ್ದಾರೆ ಎಂಬುದು ತಿಳಿದಿಲ್ಲ. ಶೀಘ್ರದಲ್ಲಿ ನಾನು ಖುದ್ದಾಗಿ ಹೋಗಿ ರಾಜ್ಯಪಾಲರನ್ನು ಭೇಟಿ ಮಾಡುತ್ತೇನೆ ಎಂದರು.

ಅಂಕಪಟ್ಟಿ ದರ ನಿಗದಿ ವಿಚಾರ ಹಿನ್ನೆಲೆ ಎನ್ ಎಸ್ ಯು ಐ ಅಧ್ಯಕ್ಷರು ಕೆ.ಸಿ. ವೇಣುಗೋಪಾಲ್ ಅವರಿಗೆ ದೂರು ನೀಡಿದ್ದರು. ವೇಣುಗೋಪಾಲ್ ಅವರು ನನ್ನಿಂದ ಸ್ಪಷ್ಟನೆ ಕೇಳಿದ್ದಾರೆ ನಾನು ಸ್ಪಷ್ಟನೆ ನೀಡುತ್ತೇನೆ ಎಂದರು. ದೂರು ಕೊಡುವುದನ್ನೂ ಮುನ್ನ ಯೋಚಿಸಬೇಕು.

Vice Chancellors will appoint soon: Rayareddy promise

ಸರಿಯಾದ ದಾಖಲೆಗಳಿಲ್ಲದೆ ದೂರು ದಾಖಲಿಸಬಾರದು. ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಬಂದಿರುವುದು ಸತ್ಯಕ್ಕೆ ದೂರವಾಗಿದೆ. ಅಂಕಪಟ್ಟಿ ಮುದ್ರಣ ನಮ್ಮ ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಸಿಂಡಿಕೇಟ್ ಸಭೆಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ ಎಂದು ಹೇಳಿದರು.

ನೀಡಿದಂತಹ ದೂರಿನಲ್ಲಿ ಹೊರಗುತ್ತಿಗೆದಾರರ ಕೈವಾಡವಿದೆ ಅನಿಸುತ್ತದೆ. ನಾನು ೩೫ವರ್ಷದಿಂದ ರಾಜಕೀಯದಲ್ಲಿದ್ದೇನೆ. ಭ್ರಷ್ಟಾಚಾರ ಮಾಡಲು ರಾಜಕೀಯಕ್ಕೆ ಬಂದಿಲ್ಲ. 2016ರ ಜೂನ್ ನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಮಂತ್ರಿಯಾದೆ. ಆಗ ತಕ್ಷಣವೇ ಸಿಂಡಿಕೇಟ್ ಸಭೆ ಕರೆದಿದ್ದೇ. ಅಂಕಪಟ್ಟಿ ಮುದ್ರಣ ಯಾವುದರಲ್ಲಿ ಮಾಡಬೇಕು ಎಂಬ ಪ್ರಶ್ನೆ ಬಂತು.

ಆಗ ಸಭೆಯಲ್ಲಿ ಒಕ್ಕೂರಲಿನಿಂದ ಲೇಖಕ್ ಬ್ರಾಂಡ್ ಚೆನ್ನಾಗಿರುತ್ತೆ ಎಂಬ ಅನಿಸಿಕೆ ಬಂತು. ಅಂದು ಎಂ.ಎಸ್.ಐ.ಎಲ್. ಗೆ ಅಂಕಪಟ್ಟಿಗೆ ಪೇಪರ್ ತರುವುದು ಎಂದು ತೀರ್ಮಾನ ಆಯ್ತು. ಎಂ.ಎಸ್.ಐ.ಎಲ್. ಸರ್ಕಾರದ ಸ್ವಾಮ್ಯದ ಸಂಸ್ಥೆ. ಎಂ.ಎಸ್.ಐ.ಎಲ್. ಖಾಸಗಿ ಸಂಸ್ಥೆ ಅಲ್ಲ. ಇದರಲ್ಲಿ ಅವ್ಯವಹಾರ ಆಗುವ ಮಾತೇ ಬರುವುದಿಲ್ಲ. ಅಂಕಪಟ್ಟಿಗಳು ಸರ್ವ ಶ್ರೇಷ್ಠ ಪೇಪರ್ ಬೇಕು ಎಂದು ನಿರ್ಧಾರಿಸಿ ಎಂ.ಎಸ್.ಐ.ಎಲ್.ಗೆ ಕೊಟ್ಟಿದ್ದೇವೆ. ಎಂ.ಎಸ್.ಐ.ಎಲ್. ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟಿದೆ.

ನಮ್ಮ ಪಾತ್ರ ಇದರಲ್ಲಿ ಏನೂ ಇಲ್ಲ. ಮುಂಬೈ ಮೂಲದ ಸಂಸ್ಥೆಗೆ ನಾವು ಗುತ್ತಿಗೆ ಕೊಟ್ಟಿಲ್ಲ. ಬಸವರಾಜ್ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯ ಮಧ್ಯೆ ಅಂಕಪಟ್ಟಿಯ ಸ್ಯಾಂಪಲ್ ಪ್ರದರ್ಶಿಸಿದರು. ಅಂಕಪಟ್ಟಿಯ ಸ್ಯಾಂಪಲ್ ಗಳನ್ನು ನಿರ್ಧರಿಸಿದ್ದು ವಿವಿಗಳು, ನಮ್ಮ ಇಲಾಖೆಯಲ್ಲ ಎಂದು ಸ್ಪಷ್ಟಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Higher education minister Basavaraj Rayareddy has clarified that the department is not printing any marks cards of any University. He also said that the NSUI organisation which complained against him is condemnable which is base less and away from truth.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ