ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್ ಗಯಾರ್ ಶಾಲೆ ಮಾನ್ಯತೆ ರದ್ದತಿಗೆ ಪತ್ರ

|
Google Oneindia Kannada News

ಬೆಂಗಳೂರು, ಜು. 19 : ಬೆಂಗಳೂರಿನ ಹೊರವಲಯದ ಮಾರತ್ ಹಳ್ಳಿಯ ವಿಬ್‌ ಗಯಾರ್ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ನಡೆದ ಅತ್ಯಾಚಾರ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಶಾಲೆಯ ಮಾನ್ಯತೆ ರದ್ದುಪಡಿಸುವಂತೆ ಐಸಿಎಸ್ ಸಿ ಮಂಡಳಿಗೆ ಪತ್ರ ಬರೆದಿದೆ.

ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಸಿನ್ ಪತ್ರಿಕಾ ಹೇಳಿಕೆ ನೀಡಿದ್ದು, ಮಿಬ್ ಗಯಾರ್ ಶಾಲೆಗೆ ನೋಟಿಸ್ ಜಾರಿಗೊಳಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಿಮ್ಮ ಶಾಲೆಗೆ ನೀಡಲಾಗಿರುವ ನಿರಕ್ಷೇಪಣಾ ಪತ್ರವನ್ನು ಹಿಂದಕ್ಕೆ ಪಡೆಯಬಾರದೇಕೆ ಎಂದು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. [ಅತ್ಯಾಚಾರ ಪ್ರಕರಣ : ವರದಿ ಕೇಳಿದ ಕೇಂದ್ರ]

Vibgyor school

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಅಪರಾಧ. ಹೀಗಾಗಿ ನಿಮ್ಮ ಶಾಲೆಗೆ ನೀಡಲಾಗಿರುವ ನಿರಾಕ್ಷೇಪಣಾ ಪತ್ರವನ್ನು ಹಿಂದಕ್ಕೆ ಪಡೆದು ನಿಮ್ಮ ಶಾಲೆಯ ಮಾನ್ಯತೆ ರದ್ದುಪಡಿಸಬಾರದೇಕೆ ಎಂದು ಕಾರಣ ಕೇಳಲಾಗಿದೆ. [ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ]

ಆ ಶಾಲೆಗೆ ಹೋಗಲ್ಲ : ಅತ್ಯಾಚಾರದಿಂದ ಆಘಾತಕ್ಕೆ ಒಳಗಾಗಿರುವ ಬಾಲಕಿ ಮತ್ತೆ ಆ ಶಾಲೆಗೆ ಹೋಗಲ್ಲ, ಶಿಕ್ಷಕರು ತುಂಬಾ ಕೆಟ್ಟವರು, ಶಾಲೆಗೆ ಹೋಗಲ್ಲ ಎಂದು ಕನವರಿಸುತ್ತಿದ್ದಾಳೆ ಎಂದು ಫೋಷಕರು ತಿಳಿಸಿದ್ದಾರೆ. [ಕಾಮನಬಿಲ್ಲು ಶಾಲೆಯಲ್ಲಿ 'ಕಾಮುಕ']

ಇಂದು ಪ್ರತಿಭಟನೆ : VIBGYOR HIGH ಶಾಲೆಯಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಫೋಷಕರು ಶನಿವಾರ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಶಾಲೆಯ ಮುಂಭಾಗದಲ್ಲಿ ನಡೆಯಲಿದೆ.

English summary
Bangalore Vibgyor school where a six-year-old girl was raped, may be staring at more troubles as the Education Department. On Friday department asked the management why the school’s No Objection Certificate (NOC) should not be withdrawn and urged the ICSE Board to de recognized the school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X