ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಬ್‌ಗಯಾರ್‌ ಅತ್ಯಾಚಾರ ಪ್ರಕರಣ: 5 ವರ್ಷವಾದರೂ ಆರಂಭವಾಗದ ವಿಚಾರಣೆ

|
Google Oneindia Kannada News

ಬೆಂಗಳೂರು, ಜನವರಿ 10: ಐದು ವರ್ಷಗಳ ಹಿಂದೆ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ವಿಬ್‌ಗಯಾರ್ ಶಾಲೆ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಇನ್ನೂ ಆರಂಭವಾಗಿಲ್ಲ.

2014ರ ಜುಲೈನಲ್ಲಿ ವರ್ತೂರಿನಲ್ಲಿರುವ ವಿಬ್‌ಗಯಾರ್ ಶಾಲೆಯಲ್ಲಿ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು, ಮಾಧ್ಯಮಗಳು ಕೂಡ ವರದಿ ಮಾಡಿತ್ತು, ಇದರ ವಿರುದ್ಧವಾಗಿ ಸಾಕಷ್ಟು ಪ್ರತಿಭಟನೆಗಳು ಕೂಡ ನಡೆದಿದ್ದವು.

ವಿಬ್‌ಗಯಾರ್‌ ಶಾಲೆ ಆರಂಭ: ಆತಂಕದಲ್ಲಿ ಪೋಷಕರು ವಿಬ್‌ಗಯಾರ್‌ ಶಾಲೆ ಆರಂಭ: ಆತಂಕದಲ್ಲಿ ಪೋಷಕರು

ಆದರೆ ಪೋಷಕರು ಕೆಲವು ದಿನಗಳ ಬಳಿಕ ಊರನ್ನೇ ಬಿಟ್ಟು ಹೋಗಿದ್ದ ಕಾರಣ ವಿಚಾರಣೆ ಅಲ್ಲಿಯೇ ನಿಂತಿತ್ತು. ಆದರೆ ಇದೀಗ ಸತತ 5 ವರ್ಷಗಳ ಬಳಿಕ ವಿಚಾರಣೆ ಮತ್ತೆ ಆರಂಭವಾಗಿದೆ.

Vibgyor child rape: Five years later, trial yet to begin

ಈ ಘಟನೆ ಬೆಳಕಿಗೆ ಬಂದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಮರುದಿನವೇ ಈತ ನಿಜವಾದ ಆರೋಪಿ ಅಲ್ಲ ನಮ್ಮಿಂದ ತಪ್ಪಾಗಿತ್ತು ಎಂದು ಆತನನ್ನು ಪೊಲೀಸರು ಕಳುಹಿಸಿದ್ದರು. ಹಾಗೆಯೇ ಶಾಲೆಯ ಜಿಮ್ ಇನ್‌ಸ್ಟ್ರಕ್ಟರ್‌ಗಳಾದ ಲಾಲ್‌ಗಿರಿ ಹಾಗೂ ವಾಸಿಮ್ ಪಾಷಾ ಅವರನ್ನು ಐಪಿಸಿ ಸೆಕ್ಷನ್ 376 ಹಾಗೂ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಅಪರಾಧಿಯ ಬಗ್ಗೆ ಸುಳ್ಳು ಮಾಹಿತಿ ಹಾಗೂ ದಾಖಲೆಗಳ ನಾಶಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಸ್ಥ ರುಸ್ತುಮ್ ಕರ್ವಾಲಾ ಅವರ ಮೇಲೆ ಸೆಕ್ಷನ್ 21, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ವಿಬ್‌ಗಯಾರ್ ಶಾಲೆ ಆರಂಭ, ಕುಣಿಯುತ ಬಂದ ಮಕ್ಕಳು ವಿಬ್‌ಗಯಾರ್ ಶಾಲೆ ಆರಂಭ, ಕುಣಿಯುತ ಬಂದ ಮಕ್ಕಳು

ಅತ್ಯಾಚಾರ ವಿಚಾರಣೆ ಏನಾಯಿತು?
-ಪ್ರೊಟೆಕ್ಷನ್ ಆಫ್ ಚಿಲ್ಡ್ರನ್ ಫ್ರಂಮ್ ಸೆಕ್ಷುವಲ್ ಅಫೆನ್ಸ್ ಆಕ್ಟ್ (ಪೋಕ್ಸೊ) ಕಾಯ್ದೆಯಲ್ಲಿ ಒಂದು ವರ್ಷದೊಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸಬೇಕಿತ್ತು.
-ಮೂರು ವರ್ಷಗಳ ಹಿಂದೆ ಮೂರನೇ ಆರೋಪಿಯಾಗಿದ್ದ ರುಸ್ತುಮ್ ವಿಚಾರಣೆಗೆ ತಡೆಯಾಜ್ಞೆ ತಂದಿದ್ದರು
-ಕೋರ್ಟ್‌ಗೆ ಸಂತ್ರಸ್ತೆ ಹಾಜರಾಗದ ಕಾರಣ ಆರೋಪಿಗಳು ಜಾಮೀನು ಪಡೆದು ಬಿಡುಗಡೆಯಾಗಿದ್ದರು
-ವಸೀಮ್ ಪಾಷಾ ಅವರಿಗೆ ಕಾಲಿಗೆ ಗಾಯವಾಗಿದ್ದರಿಂದ ಡಿಸೆಂಬರ್ 11ರಂದು ನಡೆದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.

ವಿಚಾರಣೆ ತಡ ಏಕೆ?
-ಬೆಂಗಳೂರಲ್ಲಿರುವ ಸುಮಾರು 1200 ಪೋಕ್ಸೊ ಪ್ರಕರಣಗಳ ವಿಚಾರಣೆ ಬಾಕಿ ಇದೆ
-2018ರಲ್ಲಿ 207 ಪೋಕ್ಸೊ ಪ್ರಕರಣಗಳು ವರದಿಯಾಗಿವೆ
-ಅದರಲ್ಲಿ 132 ವಿಚಾರಣೆ ಬಾಕಿ ಇದೆ ಹಾಗೂ ಕೆಲವು ತನಿಖೆ ನಡೆಯುತ್ತಿದೆ
-2014ರಲ್ಲಿ 293 ಪೋಕ್ಸೊ ಪ್ರಕರಣಗಳು ವರದಿಯಾಗಿವೆ, ಅದರಲ್ಲಿ 28 ಪ್ರಕರಣಗಳು ಇತ್ಯರ್ಥವಾಗಿದೆ. 96 ಪ್ರಕರಣಗಳಿಗೆ ಸಾಕ್ಷಿ ಇಲ್ಲದೆ ಮುಚ್ಚಿಹೋಗಿದೆ. ಹಾಗೆಯೇ ವಿಬ್‌ಗಯಾರ್ ಶಾಲೆ ಬಾಲಕಿ ಅತ್ಯಾಚಾರ ಪ್ರಕರಣ ಸೇರಿದಂತೆ 160 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ.

English summary
In July 2014, residents of Bengaluru were shocked when news of a six-year-old girl’s rape in the affluent Vibgyor school in Varthur, was reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X