ನೂತನ ವ್ಯಂಗ್ಯಚಿತ್ರ ಜಾಲತಾಣ, ಸಾಮಾಜಿಕ ಸ್ಥಿತಿಗಳ ಅನಾವರಣ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 18 : ನಮ್ಮ ಸುತ್ತಮುತ್ತಲಿನ ಆಗುಹೋಗುಗಳ ಬಗೆಗೆ ಹಾಸ್ಯ, ವ್ಯಂಗ್ಯ. ವಿಡಂಬನೆ ಹಾಗೂ ಚಿಕಿತ್ಸಕ ದೃಷ್ಟಿಯಿಂದ ಪ್ರತಿಕ್ರಯಿಸುವ ವ್ಯಂಗ್ಯಚಿತ್ರ ಸಮಕಾಲೀನ ಜಗತ್ತಿನ ಮಾಧ್ಯಮದ ಮುಖ್ಯವಾಹಿನಿಯಲ್ಲಿ ಗುರುತರ ಸ್ಥಾನ ಪಡೆದಿದೆ. ಭಾರತೀಯ ಪ್ರಸಿದ್ಧ ವ್ಯಂಗ್ಯಚಿತ್ರಕಾರರಲ್ಲಿ ಸತೀಶ್ ಆಚಾರ್ಯ ಕೂಡ ಒಬ್ಬರು. ಇದೀಗ ಸತೀಶ್ ಆಚಾರ್ಯ ಅವರು ವ್ಯಂಗ್ಯಚಿತ್ರಗಳಿಗಾಗಿ ಕಾರ್ಟೂನ್ ಸತೀಶ್ ಡಾಟ್ ಕಾಮ್‌ ಎನ್ನುವ ವಿಶೇಷ ಜಾಲತಾಣವನ್ನು ಪ್ರಾರಂಭಿಸಿದ್ದಾರೆ.

ಧಾರವಾಡದ ಟೆಕ್ಕಿಗಳಿಂದ ಫೇಸ್ಬುಕ್ಕಿಗೆ ಪರ್ಯಾಯವಾಗಿ ಅಮೇಝ್ವಿಂಗ್

ಸತೀಶ್ ಆಚಾರ್ಯ ಅವರ ಹಿನ್ನಲೆ: ಸತೀಶ್ ಆಚಾರ್ಯ ಅವರು ವ್ಯಂಗ್ಯಚಿತ್ರ ರಚಿಸುವುದನ್ನು ಯಾರಿಂದಲೂ ಕಲಿತವರಲ್ಲ, ತಮ್ಮದೇ ಆದ ವಿಚಾರಗಳ ಮೇಲೆ ವ್ಯಂಗ್ಯಚಿತ್ರವನ್ನು ರಚಿಸುತ್ತಾರೆ. ಅವರು ವಿದ್ಯಾರ್ಥಿಯಾಗಿರುವಾಗ ಪಾಕೆಟ್ ಮನಿಗಾಗಿ ತರಂಗ, ಸುಧಾ, ತುಷಾರಾ ಮಾಸ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಕಳುಹಿಸುತ್ತಿದ್ದರು. ಎಂಬಿಎ ವಿದ್ಯಾಭ್ಯಾಸದ ನಂತರ ಮುಂಬೈಗೆ ತೆರಳಿ ಇಂಗ್ಲಿಷ್ ಟ್ಯಾಬ್ಲಾಯಿಡ್ "ಮಿಡ್ಡೆ'ಯಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಿದರು.

Cartoonist Satish Acharya started new Cartoon Website!

ಕಾರ್ಟೂನ್ ಸತೀಶ್ ಡಾಟ್ ಕಾಮ್ ಪರಿಚಯ: ಸತೀಶ್ ಆಚಾರ್ಯ ಅವರು ಸಮಾಜದಲ್ಲಿ ನಡೆಯುತ್ತಿರುವ ವಿಷಗಳನ್ನು ವ್ಯಂಗ್ಯಚಿತ್ರಗಳ ಮೂಲಕ ವಿವರಿಸುತ್ತಾರೆ. ಜಾಲತಾಣದಲ್ಲಿ ವಿವಿಧ ವಿಭಾಗಗಳನ್ನು ಮಾಡಲಾಗಿದೆ. ಅದರಲ್ಲಿ ಎಡಿಟೋರಿಯಲ್ ಕಾರ್ಟೂನ್ಸ್, ಕ್ರಿಕೆಟ್ ಕಾರ್ಟೂನ್ಸ್, ಬಾಲಿವುಡ್ ಕಾರ್ಟೂನ್ಸ್, ಕ್ಯಾರಿಕೇಷರ್ ಹೀಗೆ ವಿಭಾಗಗಳನ್ನು ಮಾಡಿದ್ದಾರೆ.

Cartoonist Satish Acharya started new Cartoon Website!

ಅದರಲ್ಲಿ ಪ್ರಸ್ತುತ ನಡೆಯುತ್ತಿರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವ್ಯಂಗ್ಯಚಿತ್ರವನ್ನು ಚಿತ್ರಿಸಿದ್ದಾರೆ. ದೀಪಿಕಾ ಪಡುಕೋಣೆಯ ಮೂಗನ್ನು ಕತ್ತರಿಸುವುದಾಗಿ ಕರಣಿ ಸೇನಾ ಹೇಳಿದ್ದು, ಜಿಎಸ್ ಟಿ ಇಳಿಕೆಯಿಂದ ತಿಂಡಿತಿನಿಸುಗಳು ಅಗ್ಗ ಎನ್ನುವ ವಿಚಾರ, ರಾಜಕೀಯ ಬೆಳವಣಿಗೆಗಳು, ಸರ್ಕಾರದ ನಡವಳಿಕೆ, ಇನ್ನಿತರೆ ವಿಚಾರಗಳನ್ನು ವ್ಯಂಗ್ಯಚಿತ್ರದಲ್ಲಿ ಬಿಂಬಿಸಿದ್ದಾರೆ. ಹೊಸ ಅಲೆಯ ಸಾಮಾಜಿಕ ಜಾಲತಾಣದಲ್ಲೂ ವ್ಯಂಗ್ಯಚಿತ್ರ ಮುನ್ನೆಲೆಗೆ ಬರುತ್ತಿರುವುದು ಅದರ ಪ್ರಸ್ತುತತೆಗೆ ಹಿಡಿದ ಕೈಗನ್ನಡಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A well known Indian Cartoonist Satish Acharya Started new website for cartoons. He separated Editorial, Bollywood, cricket cartoons in the web.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ