ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರದ ಮೆಟ್ರೋ ಪಿಲ್ಲರ್ ಗಳ ಮೇಲೆ ವರ್ಟಿಕಲ್ ಗಾರ್ಡನ್

By Sachhidananda Acharya
|
Google Oneindia Kannada News

ಬೆಂಗಳೂರು, ಜೂನ್ 21: ಸಾಮಾನ್ಯವಾಗಿ ನೆಲದ ಮೇಲೆ ಉದ್ಯಾನಗಳನ್ನು ನಿರ್ಮಿಸುವುದು ರೂಢಿ. ಆದರೆ ಮೆಟ್ರೋ ರೈಲಿನ ಕಂಬದ ಅಂಚುಗಳಲ್ಲಿ ಗಿಡ ನೆಡುವುದಕ್ಕೆ ಮುಂದಾಗಿದೆ 'ಬಿಎಂಆರ್ ಸಿಎಲ್'. ಮೊದಲಿಗೆ ನಗರದ ಜಯನಗರದಲ್ಲಿ ಈ ವರ್ಟಿಕಲ್ ಗಾರ್ಡನ್ ನಿರ್ಮಾಣಕ್ಕೆ ನಮ್ಮ ಮೆಟ್ರೋ ಸಿದ್ಧತೆ ಮಾಡಿಕೊಂಡಿದೆ.

ಈ ರೀತಿ ಕಂಬಗಳ ಸುತ್ತಾ ಗಿಡಗಳನ್ನು ನೆಡುವುದಕ್ಕೆ ವರ್ಟಿಕಲ್ ಗಾರ್ಡನ್ ಎಂದು ಕರೆಯುತ್ತಾರೆ. ಭೂಮಿಗೆ ಲಂಬವಾಗಿ ಕಂಬಗಳ ಸುತ್ತಾ ಇದನ್ನು ಬೆಳೆಯುತ್ತಾರೆ. ವಿದೇಶಗಳಲ್ಲಿ ಇದೆಲ್ಲಾ ಸಾಮಾನ್ಯವಾದರೂ ಭಾರತೀಯರು ಅದರಲ್ಲೂ ಬೆಂಗಳೂರಿಗರ ಪಾಲಿಗೆ ಈ ವರ್ಟಿಕಲ್ ಗಾರ್ಡನ್ ಹೊಸದು.

ಈ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಈ ವರ್ಟಿಕಲ್ ಗಾರ್ಡನ್ ಮಾಡಲಾಗಿತ್ತು. ಪ್ರಯೋಗಾರ್ಥವಾಗಿ ಇಲ್ಲಿನ ಫ್ಲೈ ಓವರ್ ನ ಒಂದು ಕಂಬದ ಮೇಲೆ ವರ್ಟಿಕಲ್ ಗಾರ್ಡನ್ ಅನ್ನು ಸೇಟ್ರೀಸ್ (SayTrees) ಎನ್ನುವ ಸರಕಾರೇತರ ಸಂಸ್ಥೆಯೊಂದು ಪ್ರತಿಷ್ಠಾಪಿಸಿತ್ತು. ಇದೇ ರೀತಿ ಎಂಜಿ ರಸ್ತೆ ಮೆಟ್ರೋ ಕಂಬಗಳ ಮೇಲೆ ಮತ್ತು ಯಶವಂತಪುರ ಫ್ಲೈಓವರ್ ಕಂಬಗಳ ಮೇಲೆಯೂ ವರ್ಟಿಕಲ್ ಗಾರ್ಡನ್ ಪ್ರಯೋಗ ನಡೆದಿತ್ತು.

Vertical garden in the Metro pillars of Jayanagar

ಇದರಿಂದ ಪ್ರೇರಣೆ ಪಡೆದು ನಮ್ಮ ಮೆಟ್ರೋ ವರ್ಟಿಕಲ್ ಗಾರ್ಡನ್ ಸ್ಥಾಪನೆಗೆ ಮುಂದಾಗಿದೆ. ಜಯನಗರದ ನ್ಯಾಷನಲ್ ಕಾಲೇಜು ಮತ್ತು ಆರ್.ವಿ.ರಸ್ತೆ ನಡುವಿನ ಮೆಟ್ರೋ ರಸ್ತೆಯಲ್ಲಿ ನಾಲ್ಕಕ್ಕೆ 1ರಂತೆ ಕಂಬಗಳು ವರ್ಟಿಕಲ್ ಗಾರ್ಡನ್ ಹೊಂದಲಿವೆ.

ಈ ಸಂಬಂಧ ಬುಧವಾರ 'ಬಿಎಂಆರ್ ಸಿಎಲ್' ಕಂಬಗಳ ಮೇಲೆ ವರ್ಟಿಕಲ್ ಗಾರ್ಡನ್ ಸ್ಥಾಪನೆ ಮಾಡಿ ಅವುಗಳನ್ನು ನಿರ್ವಹಣೆ ಮಾಡುವಂತೆ ಮತ್ತು ಜಾಹೀರಾತು ನೀಡಲು ಆಹ್ವಾನ ನೀಡಿದೆ. ಒಟ್ಟು ಈ ಮಾರ್ಗದಲ್ಲಿ 161 ಕಂಬಗಳ ಮೇಲೆ ಜಾಹೀರಾತು ಮತ್ತು 34 ಕಂಬಗಳ ಮೇಲೆ ವರ್ಟಿಕಲ್ ಗಾರ್ಡನ್ ಬರಲಿದೆ.

ಈ ವರ್ಟಿಕಲ್ ಗಾರ್ಡನ್ ಗಳಲ್ಲಿ ಬೇರೆ ಬೇರೆ ತಳಿಯ ಗಿಡಗಳು ಇರಲಿವೆ. ಈ ಗಿಡಗಳಿಂದ ಪರಿಸರಕ್ಕೆ ಬೇರ ಬೇರೆ ರೀತಿಯ ಉಪಯೋಗಗಳಿವೆ. ಕೆಲವು ಗಿಡಗಳು ವಾತಾವರಣದ ಉಷ್ಣಾಂಶವನ್ನು ಕಡಿಮೆ ಮಾಡುವ ಗುಣ ಹೊಂದಿವೆ. ಇನ್ನು ಕೆಲವು ಗಿಡಗಳು ವಾತಾವರಣದಲ್ಲಿರುವ ಕಲುಷಿತ ಅಂಶವನ್ನು ಹೀರಿಕೊಳ್ಳುವ ಕೆಲಸ ನಿರ್ವಹಿಸುತ್ತವೆ.

ಈ ವರ್ಟಿಕಲ್ ಗಾರ್ಡನಿನ ಪ್ರಮುಖ ಲಾಭವೆಂದರೆ ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಯಬಹುದು. ನಗರ ಪ್ರದೇಶಗಳು ಹೆಚ್ಚಿನ ವಾಯು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿವೆ. ಜತೆಗೆ ನಗರಗಳಲ್ಲಿ ಸ್ಥಳಾವಕಾಶವು ಕಡಿಮೆ. ಇಂಥಹ ಸಂದರ್ಭದಲ್ಲಿ ವರ್ಟಿಕಲ್ ಗಾರ್ಡನ್ ಸಹಾಯ ಮಾಡಲಿದೆ.

English summary
Namma Metro will come up with vertical garden in one out of four Metro pillars between National College and RV Road stations to make the city look beautiful and fight pollution at the same time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X