• search

ನಮ್ಮ ಮೆಟ್ರೋ ಕಂಬಗಳು ಇನ್ನು ಹಚ್ಚ ಹಸಿರಿನಿಂದ ಕಂಗೊಳಿಸಲಿದೆ

By Nayana
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜು.4: ನಮ್ಮ ಮೆಟ್ರೋ ಕಂಬಗಳು ಇನ್ನುಮುಂದೆ ಹಸಿರಿನಿಂದ ಕಂಗೊಳಿಸಲಿದೆ, ಇಷ್ಟು ದಿನ ಬೂದು ಬಣ್ಣದಲ್ಲಿ ಕಾಣುತ್ತಿದ್ದ ಮೆಟ್ರೋ ಕಂಬಗಳು ಇನ್ನುಮುಂದೆ ಹಸಿರು ಹಸಿರಾಗಿ ಕಣ್ಣಿಗೆ ಹಿತ ನೀಡಲಿದೆ.

  ಕಂಬಗಳ ಮೇಲೆ ವರ್ಟಿಕಲ್‌ ಗಾರ್ಡನ್‌ ನಿರ್ಮಾಣವಾಗಲಿದೆ. ನಮ್ಮ ಮೆಟ್ರೋದ ಕೆಲ ಕಂಬಗಳಲ್ಲಿ ಪ್ರಾಯೋಗಿಕವಾಗಿ ವರ್ಟಿಕಲ್‌ ಗಾರ್ಡನ್‌ ರೂಪಿಸಲಾಗಿತ್ತು, ಅದಕ್ಕೆ ಉತ್ತಮ ಸ್ಪಂದನೆ ಲಭ್ಯವಾಗಿರುವ ಕಾರಣ ಇತರೆ ಕಂಬಗಳಲ್ಲೂ ವರ್ಟಿಕಲ್‌ ಗಾರ್ಡನ್‌ ಬೆಳೆಸಲು ನಿರ್ಧರಿಸಿದೆ.

  ಇದಕ್ಕಾಗಿ ಆರು ತಿಂಗಳು ಕಾಲಾವಕಾಶ ನೀಡಲಾಗಿದೆ. ರೈಲು ಮಾರ್ಗ ಹಾದುಹೋಗಿರುವ 96 ಕಂಬಗಳಲ್ಲಿ ವರ್ಟಿಕಲ್‌ ಗಾರ್ಡನ್‌ ನಿರ್ಮಾಣಗೊಳ್ಳಲಿದೆ. ಎಂಜಿ ರಸ್ತೆ ಮೆ್ಟರೋ ನಿಲ್ದಾಣ ಸೇರಿದಂತೆ ಹಲವೆಡೆ ಕಂಬಗಳಲ್ಲಿ ಬಿಎಂಆರ್‌ಸಿಎಲ್‌ ಪ್ರಾಯೋಗಿಕವಾಗಿ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಿದೆ. ಕಂಬಗಳ ಮೇಲೆ ಜೋಡಿಸಲಾದ ಪಾಟ್‌ಗಳಲ್ಲಿ ಬೆಳೆಯುವ ಈ ಸಸಿಗಳು ಸುತ್ತಲಿನ ಪರಿಸರದಲ್ಲಿ ಹೆಚ್ಚು ಆಮ್ಲಜನಕವನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿದೆ.

  ಸಂಚಾರ ದಟ್ಟಣೆಯಿಂದ ವಾಯುಮಾಲಿನ್ಯ ಹೆಚ್ಚಿರುವುದರಿಂದ ಎಲ್ಲ ಕಂಬಗಳಲ್ಲಿ ಈ ಬಗೆಯ ಸಸಿಗಳನ್ನು ನೆಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಿಂದ ಯಶವಂತಪುರ ನಿಲ್ದಾಣದವರೆಗೆ ಹಾಗೂ ಯಶವಂತಪುರ ನಿಲ್ದಾಣದಿಂದ ಪೀಣ್ಯ ಇಂಡಸ್ಟ್ರಿ ನಿಲ್ದಾಣವರೆಗೆ 357 ಕಂಬಗಳಿವೆ.

  ಈ ಪೈಕಿ 62 ಕಂಬಗಳಲ್ಲಿ ವರ್ಟಿಕಲ್‌ ಗಾರ್ಡನ್‌ ರೂಪಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ನ್ಯಾಷನಲ್‌ ಕಾಲೇಜು ರಸ್ತೆ ನಿಲ್ದಾಣದಿಂದ ಆರ್‌ವಿ ರಸ್ತೆ ನಿಲ್ದಾಣದವರೆಗೆ ಇರುವ 192 ಕಂಬಗಳ ಪೈಕಿ 34 ಕಂಬಗಳಲ್ಲಿ ವರ್ಟಿಕಲ್‌ ಗಾರ್ಡನ್‌ ಮಾಡಬೇಕಿದೆ.

  ಬಿಎಂಆರ್‌ಸಿಎಲ್‌ ಈ ವರ್ಷ ಒಟ್ಟು 549 ಕಂಬಗಳನ್ನು ಜಾಹಿರಾತುದಾರರಿಗೆ ನೀಡಲಿ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ವರ್ಷ ಒಪ್ಪಂದದಲ್ಲಿ ಹೊಸ ನಿಯಮವನ್ನು ಸೇರ್ಪಡೆಗೊಳಿಸಲಾಗಿದೆ. ಪ್ರತಿ ಕಂಬಗಳಲ್ಲಿ ನಾಲ್ಕನೇ ಕಂಬಕ್ಕೆ ವರ್ಟಿಕಲ್‌ ಗಾರ್ಡನ್‌ ಅಳವಡಿಬೇಕು. ನಿಲ್ದಾಣದಲ್ಲಿರುವ ಕಂಬಗಳಿಗೆ ಬಿಸಿಲು ತಾಗದಿರಲು ಅಲ್ಲಿಯ ಕಂಬಗಳಲ್ಲಿ ವರ್ಟಿಕಲ್‌ ಗಾರ್ಡನ್‌ ಮಾಡುವಂತಿಲ್ಲ ಎಂದಿದೆ.

  ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್‌ ಸೇಠ್‌ ನೇಮಕ

  ಜಾಹಿರಾತು ಗುತ್ತಿಗೆ ಪಡೆಯುವ ಕಂಪನಿಗಳು ಈ ಹೊಣೆಯನ್ನು ಹೊತ್ತುಕೊಳ್ಳುವುದು ಕಡ್ಡಾಯವಾಗಿದೆ. ಒಲ್ಲಂದ ನಡೆದ ನಂತರ ಆರು ತಿಂಗಳಲ್ಲಿ ವರ್ಟಿಕಲ್‌ ಗಾರ್ಡನ್‌ ನಿರ್ಮಿಸಿ ಅದಕ್ಕೆ ಪ್ರತಿ ದಿನ ನೀರುಣಿಸುವ ವ್ಯವಸ್ಥೆ ಮಾಡಬೇಕಿದೆ.

   ವಾಯುಮಾಲಿನ್ಯ ನಿಯಂತ್ರಣಕ್ಕೆ ವರ್ಟಿಕಲ್‌ ಗಾರ್ಡನ್‌

  ವಾಯುಮಾಲಿನ್ಯ ನಿಯಂತ್ರಣಕ್ಕೆ ವರ್ಟಿಕಲ್‌ ಗಾರ್ಡನ್‌

  ಸಂಚಾರ ದಟ್ಟಣೆಯಿಂದ ವಾಯುಮಾಲಿನ್ಯ ಹೆಚ್ಚಿರುವುದರಿಂದ ಎಲ್ಲ ಕಂಬಗಳಲ್ಲಿ ಈ ಬಗೆಯ ಸಸಿಗಳನ್ನು ನೆಡಬೇಕೆಂಬ ಒತ್ತಾಯ ಕೇಳಿಬಂದಿದೆ. ಒಟ್ಟು 192 ಕಂಬಗಳ ಪೈಕಿ 62 ಕಂಬಗಳಲ್ಲಿ ವರ್ಟಿಕಲ್‌ ಗಾರ್ಡನ್‌ ರೂಪಿಸಲಾಗುತ್ತದೆ.

   ಒಪ್ಪಂದದ ಹಂತದಲ್ಲೇ ಷರತ್ತು ಸೇರ್ಪಡೆ

  ಒಪ್ಪಂದದ ಹಂತದಲ್ಲೇ ಷರತ್ತು ಸೇರ್ಪಡೆ

  ಬಿಎಂಆರ್‌ಸಿಎಲ್‌ ತನ್ನ ಹಣದಲ್ಲೇ ಈ ಯೋಜನೆ ಜಾರಿ ಮಾಡಿದರೆ ಮೆಟ್ರೋ ನಿಗಮಕ್ಕೆ ಹೊರೆಯಾಗುವುದು ಖಚಿತ. ಃಇಗಾಗಿ ಜಾಹಿರಾತುದಾರರಿಗೇ ವರ್ಟಿಕಲ್‌ ಗಾರ್ಡನ್‌ ನಿರ್ಮಿಸುವ ಹೊಣೆಯನ್ನು ನೀಡಲು ನಿಗಮ ನಿರ್ಧರಿಸಿದೆ.

   ನಿಲ್ದಾಣಗಳಲ್ಲಿ ಚಿಲ್ಲರೆ ಅಂಗಡಿ

  ನಿಲ್ದಾಣಗಳಲ್ಲಿ ಚಿಲ್ಲರೆ ಅಂಗಡಿ

  ರಾಜಾಜಿನಗರ, ಬೈಯಪ್ಪನಹಳ್ಳಿ, ಎಂಜಿ ರಸ್ತೆ ಸೇರಿದಂತೆ 14 ನಿಲ್ದಾಣಗಳಲ್ಲಿ ಚಿಲ್ಲರೆ ಮಳಿಗೆಗಳನ್ನು ಹಾಕಿಕೊಳ್ಳಲು ಬಿಎಂಆರ್‌ಸಿಎಲ್‌ ಅರ್ಜಿ ಆಹ್ವಾನಿಸಿದೆ. ಈ ಕುರಿತು ಮೆಟ್ರೋ ನಿಲ್ದಾಣ ಹಾಗೂ ರೈಲಿನೊಳಗೆ ಜಾಹಿರಾತು ನೀಡಲಾಗಿದೆ.

   ನಮ್ಮ ಮೆಟ್ರೋ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಹೀಗಿದೆ

  ನಮ್ಮ ಮೆಟ್ರೋ ಕಂಪನಿಗಳೊಂದಿಗೆ ಮಾಡಿಕೊಂಡ ಒಪ್ಪಂದ ಹೀಗಿದೆ

  ಬಿಎಂಆರ್‌ಸಿಎಲ್‌ ಈ ವರ್ಷ ಒಟ್ಟು 549 ಕಂಬಗಳನ್ನು ಜಾಹಿರಾತುದಾರರಿಗೆ ನೀಡಲಿ ಒಪ್ಪಂದ ಮಾಡಿಕೊಳ್ಳಲು ತೀರ್ಮಾನಿಸಿದೆ. ಈ ವರ್ಷ ಒಪ್ಪಂದದಲ್ಲಿ ಹೊಸ ನಿಯಮವನ್ನು ಸೇರ್ಪಡೆಗೊಳಿಸಲಾಗಿದೆ. ಪ್ರತಿ ಕಂಬಗಳಲ್ಲಿ ನಾಲ್ಕನೇ ಕಂಬಕ್ಕೆ ವರ್ಟಿಕಲ್‌ ಗಾರ್ಡನ್‌ ಅಳವಡಿಬೇಕು. ನಿಲ್ದಾಣದಲ್ಲಿರುವ ಕಂಬಗಳಿಗೆ ಬಿಸಿಲು ತಾಗದಿರಲು ಅಲ್ಲಿಯ ಕಂಬಗಳಲ್ಲಿ ವರ್ಟಿಕಲ್‌ ಗಾರ್ಡನ್‌ ಮಾಡುವಂತಿಲ್ಲ ಎಂದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Bangalore Metro Rail Corporation (BMRCL) is doing its bit to promote Bengaluru as the garden city. Pillars on the line between Sampige Road and Peenya Industry, and from National College to R.V. Road metro station on the Green Line will have vertical gardens. There are 549 pillars of which 96 will have vertical gardens.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more