ಟ್ವಿಟ್ಟರ್ ಅಭಿಯಾನ ಪ್ರಭಾವ : ಎಂಪಿ ನಿರ್ಮಲಾ ಕನ್ನಡದಲ್ಲಿ ಪ್ರಮಾಣ ವಚನ

Posted By:
Subscribe to Oneindia Kannada

ಬೆಂಗಳೂರು, ಜುಲೈ 18: ಕನ್ನಡ ಐಟಿಬಿಟಿ ಬಳಗ ಆರಂಭಿಸಿದ #VenkayyaSakayya ಅಭಿಯಾನದ ಫಲಶ್ರುತಿಯಂತೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬಗ್ಗೆ ಐಟಿ ಬಿಟಿ ಕನ್ನಡಿಗರ ಬಳಗದಿಂದ ಬಂದಿರುವ ಸಂಪಾದಕರಿಗೆ ಪತ್ರ ನಿಮ್ಮ ಮುಂದಿದೆ.

ನೀವು ಏಸಿ ರೂಮಲ್ಲಿ ಕೂತ್ಕಂಡು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದಾಕ್ಷಾಣ ಎಲ್ಲಾ ಬದಲಾಗಿ ಬಿಡುತ್ತಾ? ಇಲ್ಲಾ... ಎಲ್ಲಾ ಬದಲಾಗಲ್ಲ, ಆದರೆ ಕೆಲವೊಂದು ಖಂಡಿತಾ ಬದಲಾಗುತ್ತೆ, ಇದಕ್ಕೆ ಉತ್ತರ ಇಲ್ಲಿದೆ. [#VenkayyaSakayya ಅಭಿಯಾನ ಹುಟ್ಟಿದ್ದು ಹೇಗೆ?]

18 ವರ್ಷಗಳಿಂದ ವೆಂಕಯ್ಯ ನಾಯ್ಡು ಇದ್ದ ಹಾಗೆ ಇರೋದ್ದಿಕ್ಕೆ ಬಿಟ್ಟಿದ್ದಕ್ಕೆ ಅವರು ಕೊಟ್ಟಿದ್ದು ಅ‍ಷ್ಟರಲ್ಲೇ ಇದೆ. ಬೆಂಗಳೂರಿಗೆ ಬಂದರೂ ತೆಲುಗಿನಲ್ಲಿ ಭಾಷಣ ಮಾಡುತ್ತಿದ್ದವರ ವಿರುದ್ಧ ಕನ್ನಡ ಐಟಿಬಿಟಿ ಬಳಗ #VenkayyaSakayya ಅಭಿಯಾನ ಶುರುಮಾಡಿತ್ತು.[ನಾಯ್ಡು ಬದಲು ನಿರ್ಮಲಾ: ಕನ್ನಡಿಗರ ಹೋರಾಟ ವ್ಯರ್ಥ?]

ನಾಡಿನ ಯುವಕವಿಗಳು, ಬನವಾಸಿ ಬಳಗದವರು, ಟ್ರೊಲ್ ಹೈಕ್ಳು ತಂಡ ಸೇರಿದಂತೆ ಪ್ರಪಂಚದಾದ್ಯಂತ ಇರುವ ಹತ್ತಾರು ಸಾವಿರ ಕನ್ನಡಿಗರು #VenkayyaSakayya ಎಂದು ಟ್ವೀಟ್ ಮಾಡಿದ್ದರು. ಹಾಗೆ ಕೆಲವರು ವೆಂಕಯ್ಯ ಬೇಕಯ್ಯ ಎಂತಲು ಟ್ವೀಟ್ ಮಾಡಿದ್ದರು.

ಟ್ವಿಟ್ಟರ್ ಟ್ರೆಂಡ್ ಇಡೀ ಭಾರತದಲ್ಲೆ ನಂಬರ್ ಒನ್ ಟ್ರೆಂಡಿಂಗ್ ಆಗಿತ್ತು, ಬಿಜೆಪಿ ಹೈಕಮಾಂಡ್ ಗೆ ಇದರ ಬಿಸಿ ತಟ್ಟಿ, ಹದಿನೆಂಟು ವರ್ಷಗಳು ಕರ್ನಾಟಕದಿಂದ ರಾಜ್ಯ ಸಭೆಗೆ ವೆಂಕಯ್ಯ ಆಯ್ಕೆಯಾಗಿದ್ದರು ಕನ್ನಡದಲ್ಲಿ ಒಂದು ವಾಕ್ಯ ಸರಿಯಾಗಿ ಮಾತನಾಡಲು ಕಲಿತಿರಲಿಲ್ಲ, ಇದನ್ನೆಲ್ಲ ಗಮನಿಸಿದ ಬಿಜೆಪಿ ಹೈಕಮಾಂಡ್ ಕರ್ನಾಟಕದಿಂದ ವೆಂಕಯ್ಯನನ್ನು ಕಳುಹಿಸದೆ, ನಿರ್ಮಲಾ ಸೀತಾರಾಮನ್ ಅವರನ್ನು ಕಳುಹಿಸಿತು.

ನಿರ್ಮಲಾ ಸೀತಾರಾಮನ್ ಗೆ ಅಭಿನಂದನೆಗಳು

ನಿರ್ಮಲಾ ಸೀತಾರಾಮನ್ ಗೆ ಅಭಿನಂದನೆಗಳು

ನಿರ್ಮಲಾ ಸೀತಾರಾಮನ್ ಕನ್ನಡದಲ್ಲಿ, ರಾಜ್ಯ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಿರ್ಮಲಾ ಸೀತಾರಮ್ ರಿಗೆ ಅಭಿನಂದನೆಗಳು. ಮುಂದೆ ಇವರು ಕನ್ನಡ ಮತ್ತು ಕರ್ನಾಟಕದ ಪರವಾಗಿ ಕೆಲಸ ಮಾಡಲೆಂದು ಆಶಿಸೋಣ ಹಾಗಯೇ ತಪ್ಪು ಮಾಡಿದಾಗ ತರಾಟೆಗೆ ತೆಗೆದುಕೊಳ್ಳೋಣ. ಒಂದು ಟ್ವಿಟ್ಟರ್ ಟ್ರೆಂಡ್ ಎಷ್ಟೆಲ್ಲಾ ಪರಿಣಾಮ ಬೀರಬಹುದು ಎಂದು ಸಾಮಾಜಿಕ ಜಾಲತಾಣ ಕನ್ನಡಿಗರು ತೋರಿಸಿಕೊಟ್ಟಿದ್ದಾರೆ.

ಕರ್ನಾಟಕದ ರಾಜಕಾರಣಿಗಳೇ ಗಮನಿಸಿ

ಕರ್ನಾಟಕದ ರಾಜಕಾರಣಿಗಳೇ ಗಮನಿಸಿ

ಕನ್ನಡದಲ್ಲಿ ಮಾತನಾಡುತ್ತಾರೆ, ಇನ್ಮೇಲೆ ನಮ್ಮನ್ನ ಯಾರು ಕೇಳೊಲ್ಲ ಅಂತ ಅನ್ಕೊಬೇಡಿ. ಅವರಿಂದ ರಾಜ್ಯಕ್ಕೆ ಎಷ್ಟು ಒಳ್ಳೆ ಕೆಲಸಗಳನ್ನು ಮಾಡೋಕೆ ಆಗುತ್ತೋ ಮಾಡಿಸಿಕೊಳ್ಳಿ. ಇನ್ನು ಮುಂದೆ ಆದರೂ ಕನ್ನಡಿಗರನ್ನು ರಾಜ್ಯಸಭೆಗೆ ಕಳಿಸುವುದನ್ನು ರೂಡಿಸಿಕೊಳ್ಳಿ. ನಿಮ್ಮತನ ಉಳಿಸಿಕೊಳ್ಳಿ. ಕನ್ನಡದ-ಕನ್ನಡತನದ ಕೊಲೆ ಮಾಡಬೇಡಿ. ಸಂಸತ್ತಿನಲ್ಲಿ ಕನ್ನಡದಲ್ಲೇ ಪ್ರಶ್ನೆ ಕೇಳಿ ಧೈರ್ಯವಾಗಿ.

ಕಾಲೆಳೆಯುವ ಒಳಗಿನ ಮಿತ್ರರೇ

ಕಾಲೆಳೆಯುವ ಒಳಗಿನ ಮಿತ್ರರೇ

ಟ್ವಿಟ್ಟರ್ ನಲ್ಲಿ ಆಗುವ ಒಳ್ಳೆಯ ಕೆಲಸಗಳಿಗೆ ಪ್ರೋತ್ಸಾಹ ನೀಡಿ, ಅವರಿವರ ಕಾಲು ಎಳೆಯೋದು ಬಿಡಿ. ಒಂದು ಒಳ್ಳೆಯ ಕೆಲಸಕ್ಕೆ ಒಗ್ಗೂಡುವುದನ್ನು ರೂಡಿಸಿಕೊಳ್ಳಿ. ಬಿಜೆಪಿಯವರ ವಿರುದ್ಧ ಮಾಡ್ತಿದ್ದೀವಿ ಅಂತ ಕೆಲ ಬಿಜೆಪಿ ಬೆಂಬಲಿಗರು ವಿರೋಧ ಮಾಡಿದಿರಲ್ಲ, ಕಾಂಗ್ರೆಸ್ಸಿನ ಬಿಬಿಎಂಪಿ ಪರಭಾಶೆ ಕಾಲ್ ಸೆಂಟರ್ ಬಗ್ಗೆನೂ ಕೂಡ ಟ್ವಿಟ್ಟರ್ ಸಮರ ಮಾಡಿದ್ದಾಗಿದೆ.

ಸದ್ಯಕ್ಕೆ ಜೆಡಿಎಸ್ ನವರು ಅವರ ಪಕ್ಷ ಉಳಿಸಿಕೊಳ್ಳೊದರಲ್ಲಿ ಇದ್ದಾರೆ. 'ಕಚ್ಚಾಡುವವರನು ಕೂಡಿಸಿ ಒಲಿಸು' ಅನ್ನೊ ತರ ಕನ್ನಡದ ವಿಷಯಗಳು ಬಂದಾಗ ಒಗ್ಗಾಟ್ಟಾಗಿರೋದನ್ನು ನಾವು ಕಲಿಯಬೇಕಿದೆ

ಒಂದು ಬಗೆಹರಿಯದ ಅನುಮಾನ

ಒಂದು ಬಗೆಹರಿಯದ ಅನುಮಾನ

ಕನ್ನಡ ಕಲಿತರು ಎಂಬುದಕ್ಕೆ ಖುಷಿ ಇದ್ದರೂ, 6 ಕೋಟಿಗಿಂತ ಹೆಚ್ಚು ಕನ್ನಡಿಗರಿರುವ ಕರ್ನಾಟಕದಲ್ಲಿ ಯಾರೂ ರಾಜ್ಯ ಸಭೆಗೆ ಆಯ್ಕೆಯಾಗುವ ಕನ್ನಡಿಗರಿರಲಿಲ್ವಾ? ಎಂಬ ಪ್ರಶ್ನೆ ಹಲವರನ್ನು ಕಾಡುತ್ತಲೆ ಇದೇ, ಕನ್ನಡದಲ್ಲಿ ಏನೋ ಪ್ರಮಾಣ ವಚನ ಸ್ವೀಕರಿದ್ದಾರೆ, ಕರ್ನಾಟಕದ ಕೆಲಸಗಳನ್ನು ನಿರ್ಮಲ ಮಾಡುತ್ತಾರೆಯೆ ಎಂದು ಕಾದು ನೋಡೋಣ!

ವಿರೋಧಿಗಳಿಗೆ ಕೊನೆ ಪ್ರಶ್ನೆ

ವಿರೋಧಿಗಳಿಗೆ ಕೊನೆ ಪ್ರಶ್ನೆ

1) ವೆಂಕಯ್ಯ ಬೇಕಯ್ಯ ಅಂತ ಟ್ವಿಟ್ ಮಾಡಿದ ಗುಲಾಮ ಮನಸ್ಥಿತಿಯವರು ಈಗ ಕನ್ನಡ ಬೇಡಮ್ಮ ಅಂತ ಟ್ವಿಟ್ ಮಾಡ್ತಾರ?? 2) ಬೀದಿಗೆ ಇಳಿದ್ರೆ ಮಾತ್ರ ಹೋರಾಟ ಆಗೋದು ಅನ್ನುವವರು ಇದಕ್ಕೆ ಏನ್ ಹೇಳ್ತಾರೆ??
*ಬೀದಿ ಹೋರಾಟ ಮತ್ತು ಆನ್ಲೈನ್ ಹೋರಾಟ ಎರಡು ಇರಬೇಕು ಕನ್ನಡ ಕರ್ನಾಟಕದ ವಿಷಯಗಳಿಗೆ*

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
#Venkayyasakkayya twitter campaign by IT BT Kannadigas and supported by several other pro-kannada organisation has made big impact today. Rajya Sabha member from Karnataka, MP Nirmala Sitharaman took oath in Kannada
Please Wait while comments are loading...