ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

#VenkayyaSakayya ಎಂದ ರೊಚ್ಚಿಗೆದ್ದ ಕನ್ನಡಿಗರು

By Mahesh
|
Google Oneindia Kannada News

ಬೆಂಗಳೂರು, ಮೇ 18: ಕನ್ನಡ IT ಗೆಳೆಯರೆಲ್ಲ ಸೇರಿ ಕೇಂದ್ರ ಸಚಿವ ಎಂ ವೆಂಕಯ್ಯನಾಯ್ಡು ಅವರ ವಿರುದ್ಧ #VenkayyaSakayya ಎಂಬ ಟ್ಯಾಗ್ ನೊಂದಿಗೆ ಆರಂಭಿಸಿದ ಟ್ವಿಟ್ಟರ್ ಟ್ರೆಂಡ್ ಅಭಿಯಾನಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರು ರೊಚ್ಚಿಗೆದ್ದು ಸ್ವಯಂಪ್ರೇರಣೆಯಿಂದ ವೆಂಕಯ್ಯ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ.

ಈಗಾಗಲೇ ಈ ಟ್ರೆಂಡ್‌ಗೆ ನಿರೀಕ್ಷಿತ ಬೆಂಬಲ ದೊರೆತು ಬುಧವಾರ(ಮೇ 18) ಭಾರತದ ಟ್ರೆಂಡಿಂಗ್ ಲಿಸ್ಟಲ್ಲಿ ಅಗ್ರಸ್ಥಾನದಲ್ಲಿದೆ. ನೀವು ಟ್ವೀಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ಈಗಲೇ ಹಂಚಿಕೊಳ್ಳಿ

ಬೆಂಗಳೂರು ಲಿಸ್ಟಲ್ಲೂ ಕೂಡ ಮೊದಲ ಸ್ಥಾನದಲ್ಲಿದೆ. ಈಗಾಗಲೆ ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ವೆಂಕಯ್ಯನಾಯ್ಡು ಅವರು ಕಳೆದ 18 ವರ್ಷಗಳಿಂದ ಕರ್ನಾಟಕವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ ಈಗ ಆ ಸಂಸದ ಸ್ಥಾನದಿಂದಲೇ ಕೇಂದ್ರ ಸಚಿವರು ಆಗಿದ್ದಾರೆ.

#VenkayyaSakayya Trending in Twitter, G0 Back Venkaiah Naidu campaign by IT BT Kannadigas

ಆದರೆ, ಇಲ್ಲಿಂದ ಮೂರು ಬಾರಿ ಆಯ್ಕೆಯಾಗಿದ್ದರೂ ಕೂಡ ಕರ್ನಾಟಕಕ್ಕೆ ಅವರ ಕೊಡುಗೆ ಶೂನ್ಯವೆಂದು ಹೇಳಬಹುದು. 'ಉಂಡು ಹೋದ ಕೊಂಡು ಹೋದ' ಎಂಬ ಗಾದೆಯಂತೆ ಬರೀ ರಾಜ್ಯಸಭೆ ಎಲೆಕ್ಷನ್ನಿಗೆ ಮಾತ್ರ ಹಾಜರ್ ಆಗಿ ಗೆದ್ದ ನಂತರ ಕರ್ನಾಟಕದ ಉಸಾಬರಿಗೆ ಬರದ ನಾಯ್ಡು ಅವರ ಈ ಪ್ರತಿಕ್ರಿಯೆಗೆ ಕನ್ನಡಿಗರು ತುಂಬಾ ಬೇಸತ್ತು ಹೋಗಿದ್ದಾರೆ. [ಪ್ರತಿಕ್ರಿಯೆ : ವೆಂಕಯ್ಯ ನಾಯ್ಡು ಕರ್ನಾಟಕಕ್ಕೆ ದ್ರೋಹ ಮಾಡಿಲ್ಲವೇ?]

ಅದಲ್ಲದೆ ಈ ಬಾರಿ ಮತ್ತೊಬ್ಬ ಪರಭಾಷಿಕ ಮಾಜಿ ಸಚಿವ ಎಂ ಚಿದಂಬರಂವರು ಕೂಡ ಕರ್ನಾಟಕದಿಂದ ಸ್ವರ್ದಿಸುವ ಹವಣಿಕೆಯಲ್ಲಿದ್ದಾರೆ ಹೀಗಾಗಿ ಇದನ್ನರಿತ IT ಕನ್ನಡ ಬಳಗವು ಈ ದಿನ ಟ್ವಿಟ್ಟರ್ ಮೂಲಕ ಅವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಸ್ವಾಭಿಮಾನಿ ಕನ್ನಡಿಗರು ಈ ಅಭಿಯಾನದಲ್ಲಿ ಭಾಗವಹಿಸಿ, ತಮ್ಮ ವಸ್ತುನಿಷ್ಠ ಅಭಿಪ್ರಾಯವನ್ನು ಮಂಡಿಸಬೇಕು ಎಂದು ಐಟಿಬಿಟಿ ಕನ್ನಡಿಗರು ಕೋರಿದ್ದಾರೆ.

ಕೃಷ್ಣಾ ನದಿನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ 100 ಟಿಎಂಸಿ ನೀರು ಕಡಿಮೆ ಸಿಕ್ಕಾಗ ಹೊರರಾಜ್ಯದಿಂದ ಆಯ್ಕೆಯಾದ ಯಾವೊಬ್ಬ ರಾಜ್ಯಸಭಾ ಸದಸ್ಯನು ಕನ್ನಡಿಗರ ಪರ ನಿಲ್ಲಲಿಲ್ಲ.

#VenkayyaSakayya ಸಕತ್ ಟ್ರೆಂಡಿಂಗ್ ಕಣ್ರಯ್ಯ

ಪಾರ್ಟಿ ಕಟ್ಟೋಕೆ ನಮ್ಮ ಯಡಿಯೂರಪ್ಪ ಬೇಕು ಆದರೆ, ಕೇಂದ್ರದಲ್ಲಿ ಅಧಿಕಾರ ಮಾಡೋಕೆ ಬೇರೆ ರಾಜ್ಯದವರು ಬೇಕು. ಐಟಿ-ಬಿಟಿ ಕನ್ನಡ ಬಳಗದವರು ಯಾವುದೇ ಪಕ್ಷ ಕ್ಕೆ ಸೇರಿದವರಲ್ಲ. ಒಬ್ಬ ಕನ್ನಡಿಗನನ್ನು ರಾಜ್ಯಸಭೆ ಕಳಿಸಬೇಕು. ಇದೆ ನಮ್ಮ ತಂಡದ ಗುರಿ. ನಮ್ಮವರೇ ರಾಜ್ಯಸಭೆಗೆ ಹೋದರೆ ಕಳಸಾ-ಬಂಡೂರಿ, ಕಾವೇರಿ, ಕೃಷ್ಣ ಸಮಸ್ಯೆಗಳು ಬಂದಾಗ ಅದರ ಬಗ್ಗೆ ಮಾತಾಡ್ತಾರೆ ಎಂದು ಐಟಿ ಬಿಟಿ ಬಳಗದ ಶ್ರೀಕಾಂತ್ ಶೇಷಗಿರಿ ಪ್ರತಿಕ್ರಿಯಿಸಿದ್ದಾರೆ. ವೆಂಕಯ್ಯ ಸಾಕಯ್ಯ ಕುರಿತಂತೆ ಬಂದಿರುವ ಟ್ರಾಲ್, ಟ್ವೀಟ್ಸ್ ಗಳ ಚಿತ್ರ ಸರಣಿ ಗ್ಯಾಲರಿಯಲ್ಲಿದೆ ನೋಡಿ

English summary
IT-BT Kannada Balaga from Bengaluru campaign GoBackVenkaiah has become instant hit. #VenkayyaSakayya campaign on Twitter today(18th May) is trending. M Venkaiah Naidu has been getting elected to Rajya Sabha since 1998, but has done nothing to Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X