ಬೆಳ್ಳಂದೂರು ಕೆರೆ ಬಳಿ ಹೋಗಿದ್ದರೆ ಸರ್ಕಾರದ ಸಾಧನೆ ತಿಳಿಯುತ್ತಿತ್ತು!

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 17: ಕಳೆದ ಮೂರ್ನಾಲ್ಕು ದಿನದಿಂದ ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಆರಂಭವಾಗಿದೆ. ರಾಸಾಯನಿಕ ತುಂಬಿದ ನೊರೆಯ ಮಳೆ ರಸ್ತೆಯ ಮೇಲೆಲ್ಲ ಬಿದ್ದು ದಾರಿಹೋಕರ ಪಾಡು ದೇವರಿಗೇ ಪ್ರೀತಿ ಎಂಬಂತಾಗಿದೆ.

ಕೊಚ್ಚಿಹೋದ ಬೆಂಗಳೂರು, ಸರಕಾರದ ಇಂದಿರಾ ಕ್ಯಾಂಟೀನ್ ಧ್ಯಾನ

ಆಗಸ್ಟ್ 16 ರ ರಾತ್ರಿಯಂತೂ ಈ ಭಾಗದಲ್ಲಿ ಓಡಾಡುವ ಜನರ ವಾಹನಗಳು ರಸ್ತೆಯ ತುಂಬ ತುಂಬಿರುವ, ಐದಾರು ಅಡಿ ಎತ್ತರದ ನೊರೆಯನ್ನು ತೂರಿಕೊಂಡು ಹೋಗಬೇಕಾದ ಪರಿಸ್ಥಿತಿ ಏರ್ಪಟ್ಟಿತ್ತು.

ಅತ್ತ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಎನ್ನುತ್ತ ಉದ್ಯಾನ ನಗರಿ ಸಿಂಗರಿಸಿಕೊಂಡಿದ್ದರೆ, ಇತ್ತ ಬೆಳ್ಳಂದೂರು ಕೆರೆ ಮಾತ್ರ ಎಂದಿಗಿಂತ ಹೆಚ್ಚು ನೊರೆ ಉಗುಳುತ್ತ, ದುರ್ಗಂಧ ಬೀರುತ್ತಿತ್ತು. ಕರ್ನಾಟಕ ಸರ್ಕಾರದ ನಾಲ್ಕೂವರೆ ವರ್ಷಗಳ ಸಾಧನೆಯನ್ನು ನೋಡಬೇಕಂದ್ರೆ ರಾಹುಲ್ ಗಾಂಧಿ ಇಂದಿರಾ ಆಕ್ಯಾಂಟೀನ್ ಉದ್ಘಾಟಿಸುವ ಬದಲು ಬೆಳ್ಳಂದೂರು ಕೆರೆಯ ಬಳಿ ಬರಬಹುದಿತ್ತು, ಆಗ ಅಸಲಿ ಸ್ಥಿತಿ ಗೊತ್ತಾಗುತ್ತಿತ್ತು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಂಗ್ಯವಾಡುತ್ತಿದ್ದಾರೆ.

Vehicles stuck in toxic foam spilled by Bellandur Lake

ರಾಸಾಯನಿಕ ತುಂಬಿದ ನೊರೆಯನ್ನು ವಾಹನಗಳು ತೂರಿಕೊಂಡು ಹೋಗಲು ಹರಸಾಹಸ ಪಡುತ್ತಿರುವ ವಿಡೀಯೋ ಸಹ ವೈರಲ್ ಆಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vehicles stuck in toxic foam spilled by Bellandur Lake, after heavy rain in Bengaluru city from 3 days.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X