ಇಂದಿರಾ ಮೊಬೈಲ್ ಕ್ಯಾಂಟೀನ್ ಗಳಿಗೆ ಅಂತಿಮ ರೂಪ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 13: ಇಂದಿರಾ ಕ್ಯಾಂಟೀನ್ ಕಟ್ಟಡ ಸ್ಥಾಪಿಸಲು ಸ್ಥಳಾವಕಾಶ ದೊರೆಯದ 24 ವಾರ್ಡ್ ಗಳಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು ಜನವರಿ 26 ರಂದು ಚಾಲನೆ ದೊರೆಯಲಿದೆ. ಆ ಮೊಬೈಲ್ ಕ್ಯಾಂಟೀನ್ ವಾಹನಗಳ ವಿನ್ಯಾಸಕ್ಕೆ ಅಂತಿಮ ರೂಪ ನೀಡಲಾಗುತ್ತಿದೆ.

ಬಿಬಿಎಂಪಿಯ ಸಮಚಾರ ಕ್ಯಾಂಟೀನ್ ಗಳಿಗಾಗಿ 24 ಟೆಂಪೋ ಟ್ರಾವೆಲರ್ ಗಳನ್ನು ಖರೀದಿಸಿದ್ದು,, ಇವುಗಳ ವಿನ್ಯಾಸ ಮಾರ್ಪಡಿಸುವ ಟೆಂಡರ್ ಅನ್ನು ವೀರೇಶ್ ಮೋಟಾರ್ಸ್ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ವಾಹನಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಜಿಪಿಎಸ್, ವಿದ್ಯುತ್ ದೀಪಗಳಿಗಾಗಿ ವಾಹನದ ಛಾವಣಿಯಲ್ಲಿ ಸೌರ ಫಲಕಗಳನ್ನು ಅಳವಡಿಸಲಾಗುತ್ತಿದೆ.

ಇಂದಿರಾ ಮೊಬೈಲ್ ಕ್ಯಾಂಟೀನ್: ಜನವರಿ 26 ರಿಂದ ಆರಂಭ

ಸಂಚಾರಿ ಕ್ಯಾಂಟೀನ್ ಗಾಗಿ ವಾಹನ ವಿನ್ಯಾಸ ಮಾಡುವ ಕೆಲಸ ಆರಂಭವಾಗಿದೆ. ಆರಂಭದಲ್ಲಿ ಒಂದು ವಾಹನವನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಲಾಗುತ್ತದೆ. ಇದನ್ನು ಪರಿಶೀಲಿಸಿ, ಒಪ್ಪಿಗೆ ದೊರೆತ ಬಳಿಕ ಉಳಿದ ವಾಹನಗಳ ವಿನ್ಯಾಸವನ್ನು ಬದಲಿಸುವ ಕೆಲಸ ನಡೆಯಲಿದೆ. ಜ.26 ರ ವೇಳೆಗೆ ಎಲ್ಲ ಇಂದಿರಾ ಸಂಚಾರಿ ಮೊಬೈಲ್ ಕ್ಯಾಂಟೀನ್ ಗಳು ಸಿದ್ಧಗೊಳ್ಳಲಿದೆ.

Vehicles ready for Mobile Indira canteen

ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಗುಣಮಟ್ಟ ನಿಗಾಕ್ಕೆ ಮೊಬೈಲ್ ಅಪ್ಲಿಕೇಷನ್

ಯಾವ್ಯಾವ ವಾರ್ಡ್ ನಲ್ಲಿ ಕ್ಯಾಂಟೀನ್: ಮನೋರಾಯನಪಾಳ್ಯ, ಹಲಸೂರು, ಕಾಚರಕನಹಳ್ಳಿ, ಚಾಮರಾಜಪೇಟೆ, ಓಕಳೀಪುರಂ, ಕಾಡು ಮಲ್ಲೇಶ್ವರ, ದಯಾನಂದನಗರ, ಶಿವನಗರ, ಶ್ರೀರಾಮಮಂದಿರ, ಮಡಿವಾಳ, ಹೊಂಬೇಗೌಡನಗರ, ಗಿರಿನಗರ, ಶ್ರೀನಗರ, ಜಯನಗರ ಪೂರ್ವ, ಜೆಪಿ ನಗರ, ಗಣೇಶ ಮಂದಿರ, ಯಡಿಯೂರು, ಕೆಂಪಾಪುರ, ಅಗ್ರಹಾರ, ಬಾಪೂಜಿನಗರ, ಎಚ್ ಎಎಲ್ ವಿಮಾನ ನಿಲ್ದಾಣ, ಲಕ್ಷ್ಮೀದೇವಿನಗರ, ಲಗ್ಗೆರೆ, ಜ್ಞಾನಭಾರತಿ, ಯಲಚೇನಹಳ್ಳಿಯಲ್ಲಿ ಸಂಚಾರಿ ಮೊಬೈಲ್ ಕ್ಯಾಂಟೀನ್ ಆರಂಭಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Modified Vehicles for Indira mobile canteen have been prepared for 24 wards in BBMP which will start service from January 26.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ