ಗಗನಕ್ಕೇರಿದ್ದ ತರಕಾರಿ ಬೆಲೆಗಳಲ್ಲಿ ಕೊಂಚ ಇಳಿಕೆ

Posted By: Nayana
Subscribe to Oneindia Kannada

ಬೆಂಗಳೂರು, ನವೆಂಬರ್ 11 : ರಾಜ್ಯಾದೆಲ್ಲೆಡೆ ಕಳೆದ ಎರಡು ತಿಂಗಳಿನಲ್ಲಾದ ಅಕಾಲಿಕ ಮಳೆಯಿಂದಾಗಿ ಗಗನಕ್ಕೇರಿದ ತರಕಾರಿ ಬೆಲೆ ಈಗ ಇಳಿಯುತ್ತಿದೆ. ದಸರಾ ನಂತರ ಸತತವಾಗಿ ಬೆಲೆ ಏರಿಕೆ ಕಂಡು ತತ್ತರಿಸಿದ ಗ್ರಾಹರಿಕೆ ಸ್ವಲ್ಪ ಸಮಾಧಾನ ದೊರೆತಿದೆ.

ಅಕ್ಟೋಬರ್ ನಲ್ಲಿ ಬೀನ್ಸ್, ಕ್ಯಾಪ್ಸಿಕಮ್, ಕೋಸು, ಕ್ಯಾರೇಟ್ ಕೆಜಿಗೆ100 ಗಡಿ ದಾಟಿದ್ದವು. ಈಗ ಬದನೆ 69 ರೂ, ಟೊಮೆಟೊ ೬೦ರೂ.ಹೂಕೋಸು 51ರೂ, ಇದೆ. ಆದರೆ ಸೊಪ್ಪಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬಸಲೆಸೊಪ್ಪು ಒಂದು ಕಟ್ಟು 35ರೂ, ಕೊತ್ತಂಬಿ ಸೊಪ್ಪು ಒಂದು ಕಟ್ಟು 20ರೂ. ಮೆಂತ್ಯೆ, ಕರಿಬೇವು ಕಟ್ಟಿಗೆ ೫ರೂನಂತೆ ಮಾರಾಟವಾಗುತ್ತಿದೆ.

Vegetables price steady in Bengaluru

ನವೆಂಬರ್ ಮೊದಲ ವಾರದಲ್ಲಿ ತರಕಾರಿಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಈ ಬಾರಿ ಚಿಂತಾಮಣಿ, ರಾಮನಗರಗಳಿಂದ ಹೆಚ್ಚಿನ ತರಕಾರಿ ಪೂರೈಕೆಯಾಗಿರುವುದರಿಂದ ಹಾಗೂ ರೈತರು ತರಕಾರಿಗಳನ್ನು ಮಾರುಕಟ್ಟೆಗೆ ತಂದಿರುವದರಿಂದ ಬೆಲೆಯಲ್ಲಿ ಸ್ವಲ್ಪ ಇಳಿಮುಖವಾಗಿದೆ.

ಆದರೆ ಮಾರುಕಟ್ಟೆ ಬೆಲೆ ದರಕ್ಕಿಂತ ಕಡಿಮೆ ದರದಲ್ಲಿ ತರಕಾರಿಗಳನ್ನು ಒದಗಿಸುತ್ತಿದ್ದ ಹಾಪ್‌ಕಾಮ್ಸ್ ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿದೆ.
ಹಾಪ್‌ಕಾಮ್ಸ್ ದರ
ತರಕಾರಿ ಕೆಜಿಗಳಲ್ಲಿ ಬೆಲೆಗಳಲ್ಲಿ
ಆಲೂಗಡ್ಡೆ 24ರೂ.
ಮೆಂತ್ಯೆ 93ರೂ
ಟೊಮೆಟೊ 60ರೂ
ಬೀನ್ಸ್ 52ರೂ
ಬೀಟ್ರೋಟ್ 60ರೂ.
ಬೆಂಡೆಕಾಯಿ 54ರೂ.
ಬಸಲೆಸೊಪ್ಪುಒಂದು ಕಟ್ಟು 38ರೂ.
ಹೂಕೋಸು 46ರೂ.
ಕೆ.ಆರ್. ಮಾರುಕಟ್ಟೆ ದರ
ತರಕಾರಿ ಕೆ.ಜಿ.ಗಳಲ್ಲಿ ಬೆಲೆಗಳಲ್ಲಿ
ಆಲೂಗಡ್ಡೆ 20ರೂ.
ಬೀನ್ಸ್ 60ರೂ.
ಬೆಂಡೆಕಾಯಿ 40ರೂ.
ಬೀಟ್ರೋಟ್ 40ರೂ.
ಹೂಕೋಸು 60ರೂ.
ಬಸಲೆಸೊಪ್ಪು 25ರೂ ನಂತೆ ಮಾರಾಟವಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As series of festivals over in last month, Vegetables price has come down and steady in various essential vegetables.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ