ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಿಢೀರ್‌ ಮಳೆಗೆ ಘಾಸಿಕೊಂಡ ತರಕಾರಿಗಳು: ಬೆಲೆ ದುಪ್ಪಟ್ಟು

By Nayana
|
Google Oneindia Kannada News

ಬೆಂಗಳೂರು, ಮೇ 16: ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯಾದ್ಯಂತ ಮಳೆಯಾಗುತ್ತಿದೆ, ಬೆಂಗಳೂರು ಹೊರವಲಯದ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ಹಾಗಾಗಿ ತರಕಾರಿ ಬೆಲೆ ಏರಿಕೆಯಾಗಿದೆ.

ಹಾಗಲಕಾಯಿ, ಬೀನ್ಸ್‌, ಹೀರೇಕಾಯಿ, ಹೂಕೋಸು, ನವಿಲುಕೋಸು ಹಾಗೂ ಮೆಣಸಿನಕಾಯಿ ಬೆಲೆ ಏರಿಕೆಯಾಗಿದೆ. ಮುಂಗಾರು ಪೂರ್ವ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಸುತ್ತಮುತ್ತ ಬೆಳೆಯುತ್ತಿರುವ ತರಕಾರಿ ಬೆಳೆಗೆ ಹಾನಿಯಾಗಿದೆ. ಬೀನ್ಸ್‌, ಹಾಗಲಕಾಯಿ ಕಳೆದೆರೆಎಡು ವಾರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ.

ಬೇಸಿಗೆಯಲ್ಲಿ ತರಕಾರಿ ಬೆಲೆ ಸ್ಥಿರ:ಗ್ರಾಹಕರಿಗಿಲ್ಲ ತಲೆ ಬಿಸಿಬೇಸಿಗೆಯಲ್ಲಿ ತರಕಾರಿ ಬೆಲೆ ಸ್ಥಿರ:ಗ್ರಾಹಕರಿಗಿಲ್ಲ ತಲೆ ಬಿಸಿ

ಇತರೆ ತರಕಾರಿಗಳಾದ ಬದನೆಕಾಯಿ, ಗೋರಿಕಾಯಿ, ಬೆಂಡೇಕಾಯಿ ಹಿಂದಿನ ಬೆಲೆಗೆ ಹೋಲಿಸಿದರೆ 5-10ರೂ ವರೆಗೆ ಏರಿಕೆಯಾಗಿದೆ. ಇಂದಿನಿಂದ ಅಧಿಕಮಾಸ ಆರಂಭವಾಗುವುದರಿಂದ ಮದುವೆ ಸಮಾರಂಭಗಳು ಕಡಿಮೆಯಾಗಲಿದೆ, ಆದರೂ ತರಕಾರಿ ಬೆಲೆಗಳು ಸದ್ಯಕ್ಕೆ ಇಳಿಯುವ ಸಾಧ್ಯತೆ ಕಡಿಮೆ ಇದೆ.

Vegetables price rising high expect onion

ರಾಜ್ಯದಲ್ಲಿ ಟೊಮೆಟೊ ಉತ್ತಮವಾಗಿರುವ ಹಿನ್ನೆಲೆಯಲ್ಲಿ ಮತ್ತು ಹೊರರಾಜ್ಯಗಳಲ್ಲಿ ಬೇಡಿಕೆ ಇರುವ ಪರಿಣಾಮ ಬೆಲೆ ಏರುವ ಸಾಧ್ಯತೆ ಇಲ್ಲ. ಮೆಣಸಿನಕಾಯಿ ಈ ಹಿಂದೆ ಸಗಟು ಕೆಜಿಗೆ 30-35 ರೂ ಇದ್ದ ಬೆಲೆ ಈಗ 40-45 ರೂ. ಏರಿಕೆಯಾಗಿದೆ. ಬೀನ್ಸ್‌ ಬೆಲೆ 20-25ರೂ.ಗಳಿಂದ ಈಗ 30-40ರೂವರೆಗೆ ಹೆಚ್ಚಳವಾಗಿದೆ. ಹಾಗಲಕಾಯಿ 25-30 ರೂ.ಇದದದ್ದು ಈಗ ಅದರ ಬೆಲೆ 40-50ರೂ.ಗೆ ಏರಿಕೆಯಾಗಿದೆ. ಹಾಪ್‌ಕಾಮ್ಸ್‌ನಲ್ಲಿ ಬೀನ್ಸ್‌ ಬೆಲೆ 78ರೂ.ಇದೆ. ಈರುಳ್ಳಿ ಬೆಲೆ ಇಳಿಕೆಯಾಗಿದೆ.

English summary
Continuous rain falling in and around Bengaluru city has caused increased in Vegetables price as untimely rain has damaged vegetable crops.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X