ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆಯಲ್ಲಿ ತರಕಾರಿ ಬೆಲೆ ಸ್ಥಿರ:ಗ್ರಾಹಕರಿಗಿಲ್ಲ ತಲೆ ಬಿಸಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 26: ಈ ಬಾರಿ ಬೇಸಿಗೆಯಲ್ಲೂ ಗ್ರಾಹಕರಿಗೆ ತರಕಾರಿ ಬೆಲೆ ಏರಿಕೆಯ ಬಿಸಿ ತಟ್ಟುವುದಿಲ್ಲ. ಕಳೆದ ಉತ್ತಮ ಮಳೆಯಿಂದಾಗಿ ತರಕಾರಿ ಬೆಳೆ ಸಮೃದ್ಧವಾಗಿದೆ ಹಾಗಾಗಿ ಗ್ರಾಹಕರಿಗೆ ತೊಂದರೆಯಿಲ್ಲ. ಅಷ್ಟೇ ಅಲ್ಲದೆ ಬೇಸಿಗೆಯಲ್ಲೂ ಆಗಾಗ ಮಳೆ ಬರುತ್ತಿರುವುದರಿಂದ ನೀರಿನ ಸಮಸ್ಯೆಯಾಗಿಲ್ಲ.

ಬೇಸಿಗೆಯಲ್ಲಿ ನೀರಿನ ಅಭಾವದಿಂದ ಸಾಮಾನ್ಯವಾಗಿ ತರಕಾರಿಗಳ ದರ ಏರಿಕೆಯಾಗುತ್ತದೆ. ಆದರೆ ಈ ಬೇಸಿಗೆಯಲ್ಲಿ ಆಗಾಗ ಜೋರು ಮಳೆ ಬೀಳುತ್ತಿರುವುದರಿಂದ ಈ ಬಾರಿಯ ಬೇಸಿಗೆಯಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯಿಲ್ಲ. ಬೀನ್ಸ್,ಸೊಪ್ಪು ಸೇರಿದಂತೆ ಕೆಲವು ತರಕಾರಿಗಳ ದರದಲ್ಲಿ ಏರಿಕೆಯಾಗಿರುವುದು ಬಿಟ್ಟರೆ ಉಳಿದಂತೆ ಹಲವು ತರಕಾರಿಗಳು ಸಹಜ ದರದಲ್ಲೇ ಇದೆ.

ಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆಏರಿದ ತರಕಾರಿ ಬೆಲೆ, ಮೊಟ್ಟೆಯ ದರ ಕೊಂಚ ಇಳಿಕೆ

ಬೇಸಿಗೆಯಲ್ಲಿ ಅತಿಯಾದ ಬಿಸಿಲಿನಿಂದಾಗಿ ಅಂತರ್ಜಲ ಕುಸಿದು ಬೋರ್ ವೆಲ್ ಗಳು ಬತ್ತುತ್ತಿವೆ. ಹೀಗಾಗಿ ನೀರಿನ ಕೊರತೆಯಿಂದಾಗಿ ತರಕಾರಿಗಳ ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತಿತ್ತು. ಜತೆಗೆ ಬೇಸಿಗೆಯಲ್ಲಿ ಮದುವೆ, ಗೃಹಪ್ರವೇಶ ಮತ್ತಿತರೆ ಶುಭ ಸಮಾರಂಭಗಳು ನಡೆಯುವುದರಿಂದ ಬೇಸಿಕೆ ಹೆಚ್ಚಿರುತ್ತದೆ.

Vegetables dearer as price stable in summer too!

ಆದರೆ ಪೂರೈಕೆ ಪ್ರಮಾಣ ಕಡಿಮೆಯಾಗಿ ಬೆಲೆಗಳು ಏರಿಕೆಯಾಗುತ್ತಿದ್ದವು. ಈ ಬಾರಿ ಅಂತಹ ಸಮಸ್ಯೆಯಿಲ್ಲ. ಮಳೆಯಿಂದಾಗಿ ನೀರಿನ ಕೊರತೆಯಿಲ್ಲ. ಜತೆಗೆ ಕಳೆದ ನವೆಂಬರ್ ನಲ್ಲಿ ಭಾರಿ ಮಳೆ ಬಿದ್ದಿದ್ದರಿಂದ ಬೋರ್ ವೆಲ್, ಬಾವಿಗಳಲ್ಲಿ ನೀರಿಗೇನು ಸಮಸ್ಯೆಯಿಲ್ಲ. ಹೀಗಾಗಿ ತರಕಾರಿ ಬೆಳೆಗಳು ಸಮೃದ್ಧವಾಗಿದೆ.

ನಾಟಿ ಕ್ಯಾರೇಟ್ ಕೆ.ಜಿ.ಗೆ 20ರೂ. ಇದ್ದರೆ, ಕ್ಯಾಪ್ಸಿಕಂ 30 ರೂ.,ಹಸಿ ಮೆಣಸಿನ ಕಾಯಿ 30ರೂ.,ಬಜ್ಜಿ ಮೆಣಸಿನಕಾಯಿ 24ರೂ. ಹೂಕೋಸು ಒಂದಕ್ಕೆ 30-40ರೂ ವರೆಗೆ ಇದ್ದುದು ಈಗ 25-30ರೂ ಗಳಿಗೆ ದೊರೆಯುತ್ತಿದೆ. ಸುಮಾರು 15 ದಿನಗಳಿಂದಲೂ ಸೊಪ್ಪುಗಳ ದರದಲ್ಲಿ ಏರಿಕೆಯಾಗಿದೆ. ಈಗೊಂದು ಸಣ್ಣ ಕಂತೆ ಸೊಪ್ಪು 10 ರೂಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಹಾಪ್‌ಕಾಮ್ಸ್ ತರಕಾರಿ ದರ ಪಟ್ಟಿ
ತರಕಾರಿ ದರ
ಟೊಮೆಟೋ 46ರೂ.
ಬೀನ್ಸ್ 15 ರೂ.
ಬಿಳಿ ಬದನೆ 30ರೂ.
ಮೂಲಂಗಿ 21ರೂ.
ಪಾಲಕ್ ಸೊಪ್ಪು 53ರೂ.
ಪುದೀನ ಸೊಪ್ಪು 40ರೂ.
ಕ್ಯಾರೇಟ್ 30ರೂ.

English summary
With availability of sufficient water vegetables growers are happy and the same time consumers too in Bengaluru as price is stable comparing to last few months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X