'ವೀರಶೈವ ಲಿಂಗಾಯತ' ಸ್ವತಂತ್ರ ಧರ್ಮ, ಘೋಷಣೆಗೆ ಸಿದ್ದು ಶಿಫಾರಸು

Posted By:
Subscribe to Oneindia Kannada

ಬೆಂಗಳೂರು, ಜೂನ್ 15: ವೀರಶೈವ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮ ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.

ಅಖಿಲ ಭಾರತ ವೀರಶೈವ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿದ ನಂತರ ಅವರು ಮಾತನಾಡಿದರು.

Veerashaiva Lingayatha' must announced as separate religion by centre: CM Siddramiah

'ವೀರಶೈವ ಧರ್ಮ, ಲಿಂಗಾಯತ ಧರ್ಮ ಎಂಬ ಜಿಜ್ಞಾಸೆ ಇದೆ. ಆ ಪೈಕಿ ಯಾವುದು ಸರಿಯಾದದ್ದು' ಎಂದು ಕಾರ್ಯಕ್ರಮದ ವೇದಿಕೆಯಲ್ಲಿದ್ದವರನ್ನೇ ಸಿದ್ದರಾಮಯ್ಯ ಪ್ರಶ್ನಿಸಿದಾಗ ಪೌರಾಡಳಿತ ಸಚಿವ ಈಶ್ವರ ಖಂಡ್ರೆ 'ವೀರಶೈವ ಲಿಂಗಾಯತ ಧರ್ಮ' ಎಂದು ಉತ್ತರಿಸಿದ್ದಾರೆ.

ಹಿಂದೂ ರಾಷ್ಟ್ರ ಘೋಷಣೆಗೆ ಆಗ್ರಹಿಸಿ ಗೋವಾದಲ್ಲಿ ಅಧಿವೇಶನ ಆರಂಭ

ಮುಖಂಡರ ಜತೆಗೆ ಚರ್ಚೆ ಮಾಡಿ ಒಮ್ಮತದ ಹೆಸರು ನಿರ್ಧರಿಸಿ, ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಇದೇ ವೇಳೆ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೂಡಲ ಸಂಗಮದಲ್ಲಿ ವಚನ ಪೀಠದ ಸ್ಥಾಪನೆ ಆಗಬೇಕು. ಲಿಂಗಾಯತ ಸಮುದಾಯದಲ್ಲಿರುವ ಎಲ್ಲ ಜಾತಿಗಳನ್ನು ವೀರಶೈವ ಧರ್ಮಕ್ಕೆ ಸೇರಿಸಬೇಕು ಹಾಗೂ ಶರಣ ಅರಳಯ್ಯ ಭವನವನ್ನು ನಿರ್ಮಿಸಬೇಕು ಎಂದು ಆಗ್ರಹ ಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
'Veerashaiva Lingayatha' must announced as separate religion, I suggest to central government, said by Karnataka chief minister Siddramiah in Bengaluru on Wednesday.
Please Wait while comments are loading...