ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರೇನಾ ಅನಿಮೇಷನ್ ಸ್ಟುಡಿಯೋಗೆ ಪ್ರಶಸ್ತಿಯ ಗರಿ

By Rajendra
|
Google Oneindia Kannada News

ಬೆಂಗಳೂರು, ಮಾ.14: ಅನಿಮೇಷನ್ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿರುವ ಬೆಂಗಳೂರು ಮಲ್ಲೇಶ್ವರಂನ 'ಅರೇನಾ ಅನಿಮೇಷನ್' ಕೇಂದ್ರದ ಮುಡಿಗೆ ಮತ್ತೊಂದು ಗರಿ ಮೂಡಿದೆ. ಇತ್ತೀಚೆಗೆ ಈ ಸಂಸ್ಥೆ "Best Animation Training Centre in Bangalore" ಪ್ರಶಸ್ತಿಗೆ ಭಾಜನವಾಗಿದೆ.

ಮಾ.8ರಂದು ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರದಲ್ಲಿ ಸಂಸ್ಥೆಯ ನಿರ್ದೇಶಕ ಬಿ.ಎಸ್.ಶ್ರೀನಿವಾಸ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿಯನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಅವರು ವಿತರಿಸಿದರು. [ಸಿನಿಮಾ ಅನಿಮೇಷನ್ ಗೆ ಹೊಸ ದಾರಿ 'ವೇದಾತ್ಮ']

Arena Animation Malleswaram
ಕಳೆದ ಹದಿನೈದು ವರ್ಷಗಳಿಂದ ತಮ್ಮ ಸಂಸ್ಥೆ ಅನಿಮೇಷನ್ ನಲ್ಲಿ ಶಿಕ್ಷಣ ನೀಡುತ್ತಿದೆ. ನಮ್ಮ ಸಂಸ್ಥೆಯಿಂದ ತರಬೇತಿ ಪಡೆದ 10,000ಕ್ಕೂ ಹೆಚ್ಚು ಅನಿಮೇಟರ್ಸ್ ನ್ನು ಇಂದು ಉದ್ಯಮದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಾಕಷ್ಟು ಅನಿಮೇಷನ್ ತರಬೇತಿ ಸಂಸ್ಥೆಗಳಿದ್ದರೂ ನಮ್ಮ ಸಂಸ್ಥೆ 'ಅತ್ಯುತ್ತಮ ಅನಿಮೇಷನ್ ತರಬೇತಿ ಕೇಂದ್ರ' ಪ್ರಶಸ್ತಿ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ಒನ್ಇಂಡಿಯಾಗೆ ಸಂತಸ ಹಂಚಿಕೊಂಡಿದ್ದಾರೆ ವೇದಾತ್ಮ ಅನಿಮೇಷನ್ ಸ್ಟುಡಿಯೋದ ಸಿಇಓ ಕೂಡ ಆಗಿರು ನಿರ್ದೇಶಕ ಶ್ರೀನಿವಾಸ್.

ವೇದಾತ್ಮ ಅನಿಮೇಷನ್ ಸ್ಟುಡಿಯೋ ಶಿಕ್ಷಣದ ಜೊತೆಗೆ ಚಿತ್ರೋದ್ಯಮಕ್ಕೂ ತನ್ನದೇ ಆದಂತಹ ಕೊಡುಗೆಯನ್ನು ನೀಡುತ್ತಿದೆ. ಇತ್ತೀಚೆಗೆ ಅವರ ಸ್ಟುಡಿಯೋದಲ್ಲಿ ಅನಿಮೇಷನ್ ಹಾಗೂ ಗ್ರಾಫಿಕ್ಸ್ ಮಾಡಿಸಿಕೊಂಡ ಲೂಸ್ ಮಾದ ಯೋಗಿ ಅಭಿನಯದ 'ಡಾರ್ಲಿಂಗ್' ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. (ಒನ್ಇಂಡಿಯಾ ಕನ್ನಡ)

English summary
Arena Animation Malleswaram, Bangalore, received the "Excellence in Education" award for the "Best Animation Training Centre in Bangalore" from Mr.V.V.S.Laxman, Former Indian Cricketer, at a glittering function held at Hotel Radisson Blu, Dwaraka, New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X