ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ಗೆ ವಾಯುವಜ್ರ ಬಸ್‌ ಸೇವೆ ಅಬಾಧಿತ

|
Google Oneindia Kannada News

ಬೆಂಗಳೂರು, ಜನವರಿ 8: ವಿಮಾನ ಪ್ರಯಾಣಿಕರಿಗೆ ಭಾರತ ಬಂದ್‌ನಿಂದ ಸಮಸ್ಯೆಯಾಗದಂತೆ ತಡೆಯಲು ಬಿಎಂಟಿಸಿ ವಾಯುವಜ್ರ ಬಸ್‌ ವ್ಯವಸ್ಥೆಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುಂದುವರೆಸಿದೆ.

ಭಾರತ ಬಂದ್: ಮೆಟ್ರೋ,ಚಿತ್ರಮಂದಿರ, ಮಾಲ್‌ಗಳಿಗೂ ತಟ್ಟಿದ ಬಿಸಿ ಭಾರತ ಬಂದ್: ಮೆಟ್ರೋ,ಚಿತ್ರಮಂದಿರ, ಮಾಲ್‌ಗಳಿಗೂ ತಟ್ಟಿದ ಬಿಸಿ

ಪ್ರತಿದಿನ ಸಾವಿರಾರು ಪ್ರಯಾಣಿಕರು ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ದಾಣದಿಂದ ನಗರಕ್ಕೆ ಸಂಚರಿಸುತ್ತಾರೆ. ಕ್ಯಾಬ್ ಸೇವೆಗಳೂ ಇರದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಾಣಿಕರು ತೆರಳುವುದು ದೊಡ್ಡ ಸಮಸ್ಯೆಯಾಗಿತ್ತು.

ಭಾರತ್ ಬಂದ್ LIVE: ರಾಜ್ಯದ ಹಲವೆಡೆ ತಟ್ಟದ ಬಂದ್ ಬಿಸಿ ಭಾರತ್ ಬಂದ್ LIVE: ರಾಜ್ಯದ ಹಲವೆಡೆ ತಟ್ಟದ ಬಂದ್ ಬಿಸಿ

ಈ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆಯಿಂದ ವಿಮಾನ ನಿಲ್ದಾಣ ಸೇವೆಯನ್ನು ಮುಂದುವರೆಸಕು ಬಿಎಂಟಿಸಿ ನಿರ್ಧರಿಸಿದೆ.

ನಾಳೆ ಕೂಡ ಬಸ್ ಸಂಚಾರ ಬಂದ್?: ಸಾರಿಗೆ ಸಚಿವರು ಹೇಳಿದ್ದೇನು?ನಾಳೆ ಕೂಡ ಬಸ್ ಸಂಚಾರ ಬಂದ್?: ಸಾರಿಗೆ ಸಚಿವರು ಹೇಳಿದ್ದೇನು?

VayuVajra service continue for KIA

ಇನ್ನು ಮೆಜೆಸ್ಟಿಕ್ ಸುತ್ತಮುತ್ತ ಪ್ರಯಾಣಿಕರು ಬಸ್‌, ಆಟೋಗಳಿಲ್ಲದೆ ಪರದಾಡುವಂತಾಗಿದೆ, ಊರಿಗೆ ವಾಪ್ ಹೋಗುವುದಕ್ಕೂ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಗಳು ಕೆಲವು ಸಂಚರಿಸುತ್ತಿದ್ದು, ಹೆಚ್ಚು ಹಣ ಸುಲಿಗೆ ಮಾಡುತ್ತಿದ್ದಾರೆ.

ಭಾರತ್ ಬಂದ್ ವೇಳೆ ಕಂಡ ಚಿತ್ರಣಗಳು

ಮನೆಯಿಂದ ಹೊರಗಡೆ ಹೋದರೆ ಗಲಾಟೆ ನಡೆಯಬಹುದು ಎಂದು ಹೆದರಿ ಎಲ್ಲರೂ ಮನೆಯಲ್ಲೇ ಕುಳಿತಿದ್ದಾರೆ, ನಿನ್ನೆ ಬೇರೆಡೆಯಿಂದ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದವರಿಗೆ ಸಾಕಷ್ಟು ತೊಂದರೆಯಾಯಿತು. ಹಾಗಾಗಿ ಬಿಎಂಟಿಸಿ ವಾಯುವಜ್ರ ಬಸ್ ವ್ಯವಸ್ಥೆಯನ್ನು ಮುಂದುವರೆಸಿದೆ.

English summary
Despite of Bharath bandh BMTC decided to continue Vayuvajra services to Kempegowda International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X