ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನ ಟಿಕೆಟ್ ಜತೆಗೆ ಬಸ್, ಆಟೋಗಳನ್ನೂ ಬುಕ್ ಮಾಡಬಹುದು!

|
Google Oneindia Kannada News

ಬೆಂಗಳೂರು, ಮಾರ್ಚ್ 14: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವವರಿಗೆ ಬಿಎಂಟಿಸಿ ಹಾಗೂ ಬಿಐಎಎಲ್ ಜಂಟಿ ಸಹಯೋಗದಲ್ಲಿ ಪೋರ್ಟರ್ ಸರ್ವೀಸ್ ಒದಗಿಸುವ ಕುರಿತಂತೆ ಚಿಂತನೆ ನಡೆದಿದೆ.

ಈ ಕುರಿತಂತೆ ಅಪ್ಲಿಕೇಷನ್ ಬೇಸ್ಡ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಿಐಎಎಲ್ ಮತ್ತು ಬಿಎಂಟಿಸಿ ಚಿಂತನೆ ನಡೆಸಿದ್ದು, ಬಿಎಂಟಿಸಿ ವಜ್ರವಾಯು ಮತ್ತಿತರೆ ಎಸಿ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಿಂದ ಮನೆ ತಲುಪುವವರೆಗೆ ಹಾಗೂ ನಿಲ್ದಾಣದಲ್ಲಿ ಪೋರ್ಟರ್ ಸರ್ವೀಸ್ ಗಳನ್ನು ಒದಗಿಸುವ ಕುರಿತಂತೆ ಎರಡು ಕಂಪನಿಗಳ ನಡುವೆ ಮಾತುಕತೆ ನಡೆದಿದೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮೂಲಗಳ ಪ್ರಕಾರ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡುವ ವೇಳೆ ಬಸ್ ಟಿಕೆಟ್ ಪೋರ್ಟಲ್ ಸರ್ವೀಸ್ ಹಾಗೂ ಪಿಕ್ ಮತ್ತು ಡ್ರಾಫ್ ಸಂಪರ್ಕಗಳು ಏಕಕಾಲಕ್ಕೆ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಬಿಎಂಟಿಸಿ ಹಾಗೂ ಬಿಐಎಎಲ್ ಚಿಂತನೆ ನಡೆಸಿದೆ. ಈ ಕುರಿತು ದೇಶದ ಏರ್ ಲೈನ್ಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿದೆ.

ಏರ್‌ಪೋರ್ಟ್ ಗೆ ಬಿಎಂಟಿಸಿ ಬಸ್‌ನಲ್ಲಿ ಹೋದರೆ ಶಾಂಪಿಂಗ್ ಡಿಸ್ಕೌಂಟ್ ಏರ್‌ಪೋರ್ಟ್ ಗೆ ಬಿಎಂಟಿಸಿ ಬಸ್‌ನಲ್ಲಿ ಹೋದರೆ ಶಾಂಪಿಂಗ್ ಡಿಸ್ಕೌಂಟ್

ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣ ಟಿಕೆಟ್ ಖರೀದಿಸುವ ವೇಳೆಯೇ ಬಿಎಂಟಿಸಿ ಬಸ್ ಟಿಕೆಟ್ ಹಾಗೂ ಪೋರ್ಟರ್ ಸರ್ವೀಸ್ ಗಳ ವ್ಯವಸ್ಥೆಯನ್ನೂ ಸಹ ಕಲ್ಪಿಸಲು ಬಿಎಂಟಿಸಿ ಮತ್ತು ಬಿಐಎಎಲ್ ಅಪ್ಲಿಕೇಷನ್ ಬೇಸ್ಡ್ ಸೇವೆಗಳ ಕಂಪನಿಗಳ ಜತೆ ಮಾತುಕತೆ ನಡೆಸಿದೆ.

Vayu Vajra passengers can soon opt for porter services at KIA

ಪ್ರತಿ ವರ್ಷ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣಕ್ಕೆ 12.7 ಮಿಲಿಯನ್ ಪ್ರಯಾಣಿಕರು ಸೇವೆ ಪಡೆಯುತ್ತಿದ್ದು 2013 ರಿಂದ ಈವರೆಗೆ ಸರಿ ಸುಮಾರು 25 ಮಿಲಿಯನ್ ಪ್ರಯಾಣಿಕರು ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದ ಮೂಲಕ ಸಂಚರಿಸುತ್ತಾರೆ. ಈ ವೇಳೆ ಸರಿ 68 ಸಾವಿರ ದಿನನಿತ್ಯ ಪ್ರಯಾಣಿಸುತ್ತಾರೆ ಎಂಬುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.

ಹೀಗಾಗಿ ಪ್ರತಿದಿನ15 ಮಾರ್ಗಗಳ ಮೂಲಕ 8 ರಿಂದ 10 ಸಾವಿರ ಜನರು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಾರೆ. ಈ ಪ್ರಯಾಣಿಕರಿಗೆ ಅಪ್ಲಿಕೇಷನ್ ಬೇಸ್ಡ್ ಸೇವೆ ನೀಡಲು ಚಿಂತನೆ ನಡೆಸಲಾಗಿದೆ. ಪೋರ್ಟರ್ ಸೇವೆಗಳಲ್ಲಿ ಆಟೋ ರಿಕ್ಷಾ ಸೇವೆಯೂ ಒಳಗೊಂಡಿದ್ದು, ಬಿಎಂಟಿಸಿ ಬಸ್ ನಿಲ್ದಾಣದವರೆಗೆ ಲಗೇಜ್ ಗಳ ಸಹಿತ ಪ್ರಯಾಣಿಕರನ್ನು ಸಾಗಿಸುವುದು, ಅಪ್ಲಿಕೇಷನ್ ಬೇಸ್ಡ್ ಪೋರ್ಟರ್ ಕೆಲಸವಾಗಿದೆ. ನಂತರ ಮನೆಯಿಂದ ಹೊರಡುವುದರಿಂದ ಹಿಡಿದು ಬಿಎಂಟಿಸಿ ಬಸ್ , ವಿಮಾನ ಪ್ರಯಾಣದ ಟಿಕೆಟ್ ಒಂದೇ ಬಾರಿ ಬುಕ್ ಮಾಡುವ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

English summary
BMTC and BIAL are planning to tie up with private porter service for ferrying luggage of air travellers using Vayu Vajra bus service to and from Kempegowda International Airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X