ಕಾವೇರಿಗಾಗಿ ಜಮಖಾನೆ ಮೇಲೆ ವಾಟಾಳ್ ಉರುಳುಸೇವೆ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 8: ವಾಟಾಳ್ ನಾಗರಾಜ್ ಅವರ ಮಾತುಗಳು ಬೆಂಕಿಯಾದರೆ, ಅವರ ಪ್ರತಿಭಟನೆ ವೈಖರಿ ಬಿರುಗಾಳಿ ಇದ್ದಹಾಗೆ. ಸೆಪ್ಟೆಂಬರ್ 9ರ ಕರ್ನಾಟಕ ಬಂದ್ ಗೆ ಪ್ರಚಾರ ಸಿಗಲಿ ಅನ್ನೋ ಕಾರಣಕ್ಕೆ ವಾಟಾಳ್ ನಾಗರಾಜ್ ಅವರು ಗುರುವಾರ ಮೈಸೂರು ಬ್ಯಾಂಕ್ ರಸ್ತೆಯಲ್ಲಿ ಉರುಳು ಸೇವೆ ಮಾಡಿದ್ದಾರೆ.

Vatal

ಸದಾ ವೈಟ್ ಅಂಡ್ ವೈಟ್ ನಲ್ಲಿ ಕಾಣಿಸಿಕೊಳ್ಳೋ ಅವರು ರಸ್ತೆ ಮೇಲೆ ಉರುಳು ಸೇವೆ ಮಾಡಿಬಿಟ್ರಲ್ಲಾ ಅಂತ ಕುತೂಹಲಕ್ಕೆ ಟಿ.ವಿಯಲ್ಲಿ ನೋಡಿದರೆ ಮಟ್ಟಸವಾಗಿ ಜಮಖಾನ ಹಾಸಿಬಿಟ್ಟಿದ್ದಾರೆ. ಟಿ.ವಿಯಲ್ಲಿ ವಾಟಾಳ್ ನಾಗರಾಜ್ ಅವರು ಕಾಣುವುದಕ್ಕೆ ಯಾವುದೂ ತೊಂದರೆ ಆಗದಿರುವ ಹಾಗೆ ಆಂಗಲ್ ಇಟ್ಟು, ಕೆಲವು ಅಡಿ ಉರುಳಿದ್ದನ್ನು ಕೂಡ ಅಚ್ಚುಕಟ್ಟಾಗಿ ತೋರಿಸಿದ್ದಾರೆ. [ರಾಕ್ಷಸಿ ಅಂದರೆ ಜಯಲಲಿತಾ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ]

ಏನೇ ಹೇಳಿ, ಈ ರೀತಿ ಡಿಫರೆಂಟ್ ಐಡಿಯಾ, ಹೋರಾಟದ ಆಲೋಚನೆ ಬಂದರೆ ಅದು ವಾಟಾಳ್ ನಾಗರಾಜ್ ಅವರಿಗೆ ಮಾತ್ರ. ರಾಜಭವನದ ಮುಂದೆ ಮೂತ್ರ ವಿಸರ್ಜನೆ ಚಳವಳಿ, ಒಂದು ರುಪಾಯಿಗೆ ಮುದ್ದೆ ಹಂಚುವುದು, ಸ್ವಿಮ್ಮಿಂಗ್ ಸೂಟ್ ನಲ್ಲಿ ಕಾಣಿಸಿಕೊಳ್ಳುವುದು, ಕತ್ತೆ ಮೆರವಣಿಗೆ ಹೀಗೆಲ್ಲ ಮಾಡುವುದಕ್ಕೂ ಧೈರ್ಯ ಬೇಕು, ಮಾಡುವ ಹೋರಾಟದಲ್ಲಿ ನಂಬಿಕೆಯಿರಬೇಕು.

Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

ಕನ್ನಡ ನೆಲ-ಜಲದ ವಿಚಾರ ಬಂದಾಗ ವೈಯಕ್ತಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಸುಮ್ಮನಾಗುವುದು ಬೇರೆ. ಆದರೆ ನಾನಾ ರೀತಿ ಪ್ರತಿಭಟನೆ, ಪ್ರಚಾರದ ಮೂಲಕ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಹಾಗೆ ಮಾಡುವುದು ಬೇರೆ. ಜಯಲಲಿತಾ ಅಂದರೆ ರಾಕ್ಷಸಿ, ಪ್ರಜಾಪ್ರಭುತ್ವ ಅಂದರೆ ಪ್ರತಿಭಟನೆ, ಸುಪ್ರೀಂ ಕೋರ್ಟ್ ಗೆ ಕಣ್ಣಿಲ್ಲ ಎಂಬ ಮಾತುಗಳಾಡುವುದಕ್ಕೂ ವಾಟಾಳ್ ಅವರಿಂದ ಮಾತ್ರ ಸಾಧ್ಯ. [ವಾಟಾಳ್ ಸಂಗಡಿಗ ಗೋಪಿ ಇಡೀ ಕುಟುಂಬ ನೇಣಿಗೆ]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pro Kannada activist Vatal Nagaraj seek support from people for Karnataka bandh on September 9th. He protested differently in Mysore Bank circle and ask for people support.
Please Wait while comments are loading...