ಹಿಂಬದಿ ಸವಾರರಿಗೂ ಹೆಲ್ಮೆಟ್ ನೀತಿ ಖಂಡಿಸಿದ ವಾಟಾಳ್

Posted By:
Subscribe to Oneindia Kannada

ಬೆಂಗಳೂರು, ಜನವರಿ, 13: ಅಯ್ಯೋ ನನ್ನ ಹುಡುಗನಿಗೆ ಜಾಲಿ ರೈಡ್ ಹೋಗೋಣ ಒಂದು ಬೈಕ್ ತಗೋ, ಕಾರು ಬೇಡ. ಫ್ಯೂಚರ್ ನಲ್ಲಿ ಕಾರು ತಗೋಳೋಣ ಎಂದು ಹೇಳಿದ್ದೆ. ಕೆಲವು ದಿನದಿಂದ ಬೈಕ್ ಬೇಡ ಕಾರೇ ತಗೋ ಎಂದು ಗೋಗರಿಯುತ್ತಿದ್ದೇನೆ. ಅವನು ಬೈಕ್ ಬುಕ್ ಮಾಡಾಯ್ತು. ಕ್ಯಾನ್ಸಲ್ ಮಾಡೋಕೆ ಆಗೋಲ್ಲ ಎಂದು ಹೇಳ್ತಿದ್ದಾನೆ.

ನಮ್ಮಿಬ್ಬರ ನಡುವಿನ ಈ ಜಗಳಕ್ಕೆ ಕಾರಣ ಏನು ಅಂತಾ ನಿಮಗೆ ಗೊತ್ತಾಯ್ತು ಅಂತ ತಿಳಿದುಕೊಳ್ತೀನಿ. ಗೊತ್ತಾಗಿಲ್ವಾ, ಏನು ಇಲ್ಲಾರೀ, ಸರ್ಕಾರ ಹಿಂಬದಿ ಸವಾರರಿಗೂ ಹೆಲ್ಮಟ್ ಕಡ್ಡಾಯ ಎಂದು ಮಾಡಿರುವುದೇ ನಮ್ಮಿಬ್ಬರ ಜಗಳಕ್ಕೆ ಕಾರಣ. ಬೈಕ್ ನಲ್ಲಿ ಜಾಲಿ ರೈಡ್ ಹೋಗೋದಿರ್ಲಿ, ಕೆಜಿಗಟ್ಟಲೇ ತೂಗೋ ಹೆಲ್ಮೆಟ್ ಹಿಡಿದುಕೊಳ್ಳೋಕೆ ಕಷ್ಟ. ಇನ್ನೂ ಅದನ್ನು ಹಾಕಿಕೊಂಡು ಕುಳಿತುಕೊಂಡ್ರೆ ಹೆಲ್ಮೆಟ್ ಭಾರಕ್ಕೆ ನನ್ನ ತಲೆ ಅರ್ಧ ಹೈರಾಣ ಆಗಿರುತ್ತೆ. ಇನ್ನೂ ಕಳ್ಳರ ಕಾಟ ಜಾಸ್ತಿ ಅಂತ ಹೆಲ್ಮೆಟ್ ನ್ನು ಬೈಕ್ ನಲ್ಲಿ ಇಟ್ಟು ಹೋಗೋ ಹಾಗಿಲ್ಲ. ಹೋದಲೆಲ್ಲಾ ಹಿಡಿದುಕೊಂಡೇ ಹೋಗ್ಬೇಕು.

ಇದು ನನ್ನ ಸಮಸ್ಯೆ ಅಲ್ಲಾ ರೀ ಹೆಣ್ಣು ಮಕ್ಕಳು ಸೇರಿದಂತೆ ಸಮಸ್ತ ಜನತೆಯ ಸಮಸ್ಯೆ. ನಿಯಮಗಳನ್ನು ಮಾಡಬೇಕು ಅಂತ ಸರ್ಕಾರ ನಿಯಮ ರೂಪಿಸ್ಬಾರದು. ಜಾರಿಗೆ ತರುವ ನಿಯಮ ಜನರಿಗೆ ಯಾವ ರೀತಿಯಲ್ಲಿ ಅನುಕೂಲ ಆಗುತ್ತೇ ಅನ್ನೊಂದನ್ನು ನೋಡಿಕೊಂಡು ನಿಯಮ ಮಾಡ್ಬೇಕು. ಒಟ್ಟಿನಲ್ಲಿ ಹೊಸ ವರ್ಷಕ್ಕೆ ಸರ್ಕಾರದ ಈ ನಿಯಮ ಜನರಿಗೆ ಸಮಸ್ಯೆ ತಂದಂತೆ ಕಾಣುತ್ತಿದೆ. ಇದನ್ನು ವಿರೋಧಿಸಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎತ್ತಿನ ಗಾಡಿಯಲ್ಲಿ ತನ್ನ ಪಕ್ಷದವರ ಜೊತೆ ಕುಳಿತುಕೊಂಡು ಹೆಲ್ಮೆಟ್ ನೀತಿ ವಿರೋಧಿಸಿದ್ದಾರೆ.[ತಮಿಳುನಾಡಿನಲ್ಲಿ ಈ ವರ್ಷ ಜಲ್ಲಿಕಟ್ಟು ಆಚರಣೆ ಇಲ್ಲ]

ಈ ಸುದ್ದಿಯ ಜೊತೆಗೆ ಸಂಕ್ರಾಂತಿ ಹಬ್ಬಕ್ಕೆ ತಯಾರಿ ಮಾಡಿಕೊಳ್ಳುತ್ತಿರುವ ಜನತೆಯ ಸಂಭ್ರಮ, ತಮಿಳುನಾಡಿನ ಜಾನಪದ ಕ್ರೀಡೆ ಜಲ್ಲಿಕಟ್ಟು ವಿವಾದ ಹೀಗೆ ಇನ್ನಷ್ಟು ಹಲವಾರು ಸುದ್ದಿಗಳು ಈ ಕೆಳಗಿನ ಸ್ಮೈಡ್ ಗಳಲ್ಲಿವೆ ನೋಡಿ.

ಎತ್ತಿನಗಾಡಿಯಲ್ಲಿ ಕೂತು ಹೆಲ್ಮೆಟ್ ಧರಿಸಿದ ವಾಟಾಳ್

ಎತ್ತಿನಗಾಡಿಯಲ್ಲಿ ಕೂತು ಹೆಲ್ಮೆಟ್ ಧರಿಸಿದ ವಾಟಾಳ್

ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಎಂಬ ನೀತಿಯನ್ನು ವಿರೋಧಿಸಿದ್ದಾರೆ. ತಮ್ಮ ಸಹಚರರ ಜೊತೆ ಎತ್ತಿನಗಾಡಿಯಲ್ಲಿ ಹೆಲ್ಮೆಟ್ ಹಾಕಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.

ಸಂಕ್ರಾಂತಿ ವಿಶೇಷ ಕಬ್ಬು ಮಾರುಕಟ್ಟೆಗೆ

ಸಂಕ್ರಾಂತಿ ವಿಶೇಷ ಕಬ್ಬು ಮಾರುಕಟ್ಟೆಗೆ

ಸಂಕ್ರಾಂತಿಗೂ ಕಬ್ಬಿಗೂ ಬಹಳ ನಂಟಿದೆ. ಸಂಕ್ರಾಂತಿಯ ವಿಶೇಷವಾದ ಕಬ್ಬು ಟನ್ ಗಟ್ಟಲೇ ಮಾರುಕಟ್ಟೆಗೆ ಬಂದಿದ್ದು, ವರ್ತಕರು ಕಬ್ಬನ್ನು ಮಾರಾಟ ಮಾಡಲು ತಯಾರಿ ನಡೆಸಸಿದ್ದಾರೆ.

ಸರ್ಕಸ್ ಲೋಕದ ಸುಂದರಿಯರು

ಸರ್ಕಸ್ ಲೋಕದ ಸುಂದರಿಯರು

40ನೇ ಮೊಂಟೇ ಕಾರ್ಲೋ ಅಂತರಾಷ್ಟ್ರೀಯ ಸರ್ಕಸ್ ಹಬ್ಬದಲ್ಲಿ ಪಾಲ್ಗೊಂಡ ಮೊನ್ಯಾಕೋದ ಪ್ರಿನ್ಸಸ್ ಸ್ಟೆಫೇನಿಯಾ ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ. ಮೊನ್ಯಾಕೋ ಫ್ರೆಂಚ್ ದೇಶದ ಒಂದು ಪ್ರದೇಶ.

ತಮಿಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಜಲ್ಲಿಕಟ್ಟು

ತಮಿಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಜಲ್ಲಿಕಟ್ಟು

ಪೊಂಗಲ್ ಹಬ್ಬದ (ಮಕರ ಸಂಕ್ರಾಂತಿ) ಪ್ರಯುಕ್ತ ತಮಿಳುನಾಡಿನ ಪ್ರಸಿದ್ಧ ಜಾನಪದ ಕ್ರೀಡೆ ಜಲ್ಲಿಕಟ್ಟು ಆಡಲಾಗುತ್ತದೆ. ಮಧುರೈನಲ್ಲಿ ಏರ್ಪಡಿಸಿದ್ದ ಈ ಆಟದಲ್ಲಿ ಹಲವಾರು ಹುಡುಗರು ಪಾಲ್ಗೊಂಡಿದ್ದು ಹೋರಿ ಪಳಗಿಸುವಲ್ಲಿ ನಿರತರಾದ ಯುವಕರು.

ಗಂಗಾ ಸಾಗರದಲ್ಲಿ ಮಿಂದ ಸಾಧು

ಗಂಗಾ ಸಾಗರದಲ್ಲಿ ಮಿಂದ ಸಾಧು

ಹೊಸವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಧುವೊಬ್ಬರು ಗಂಗಾ ನದಿಯಲ್ಲಿ ಮಿಂದು ಎದ್ದಾಗ ಕಂಡದ್ದು ಹೀಗೆ

ಸಲ್ವಿಂದರ್ ಸಿಂಗ್ ನ ಓರೆ ನೋಟ

ಸಲ್ವಿಂದರ್ ಸಿಂಗ್ ನ ಓರೆ ನೋಟ

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ ಎಸ್ಪಿ ಸಲ್ವಿಂದರ್ ಸಿಂಗ್ ಎನ್ಐಎ ಎರಡು ಬಾರಿ ವಿಚಾರಣೆ ನಡೆಸಿದ್ದಾರೆ.
ಉಗ್ರರೊಂದಿಗೆ ಈತ ಸಂಬಂಧ ಹೊಂದಿರಬಹುದೆಂದು ಶಂಕಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kannada Chaluvali Vatal Paksha leader Vatal Nagaraj along with supporters, wearing goggles and helmets, riding a bullock cart at a protest against the new helmet rule in Bengaluru. Workers unload sugarcanes from trucks at the Koyambedu market ahead of Pongal festival in Chennai
Please Wait while comments are loading...