ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ

|
Google Oneindia Kannada News

ಬೆಂಗಳೂರು, ಜನವರಿ 22: ಸರ್ಜಾಪುರ ರಸ್ತೆ ಮಾರ್ಗದಿಂದ ಗಂಜೂರು ಮೂಲಕ ವೈಟ್‌ಫೀಲ್ಡ್‌ಗೆ ಪ್ರಯಾಣಿಸುವವರಿಗೆ ಸಿಹಿಸುದ್ದಿ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವರ್ತೂರು ಕೋಡಿಯಲ್ಲಿ ನಿರ್ಮಾಣ ಮಾಡುತ್ತಿದ್ದ ಸೇತುವೆಯ ಕಾರ್ಯವನ್ನು ಶೇ.85ರಷ್ಟು ಮುಗಿಸಿದೆ.

ಫೆಬ್ರವರಿ ಅಂತ್ಯದಲ್ಲಿ ಸಾರ್ವಜನಿಕರಿಗೆ ಮುಕ್ತವಾಗುತ್ತದೆ. ಸರ್ಜಾಪುರ ರಸ್ತೆ ವೈಟ್‌ ಫೀಲ್ಡ್ ಸಂಪರ್ಕಿಸುವ ಮಾರ್ಗ ವರ್ತೂರು ಕೋಡಿ ಬಳಿ 87 ಮೀಟರ್ ಉದ್ದದ ಸೇತುವೆಯನ್ನು ನಿರ್ಮಾಣ ಕಾರ್ಯವನ್ನು 2018ರ ಸೆಪ್ಟೆಂಬರ್‌ನಲ್ಲಿ ಆರಂಭಿಸಿತ್ತು. ಒಟ್ಟು 30 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು.

ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ ಚಾಲುಕ್ಯ ವೃತ್ತದ ವಿವಾದಿತ ಉಕ್ಕಿನ ಸೇತುವೆ ಯೋಜನೆಗೆ ಮರುಜೀವ

ಈ ಕಾಮಗಾರಿಗೆ 2017ರಲ್ಲಿಯೇ ಟೆಂಡರ್ ನೀಡಿತ್ತು. ಜಾಗದ ವ್ಯಾಜ್ಯದಿಂದಾಗಿ ಕಾಮಗಾರಿ ಆರಂಭ ತಡವಾಗಿತ್ತು. ಬಳಿಕ ಸೇತುವೆಯ ಅಲೈನ್‌ಮೆಂಟ್‌ನ್ನು ಬದಲಾಯಿಸಲಾಯಿತು. ಇದೀಗ ಕಾಮಗಾರಿ ಶೇ.85 ರಷ್ಟು ಪೂರ್ಣಗೊಂಡಿದೆ.

ಜಯದೇವ ಬಳಿ ಮೆಟ್ರೋ ಕಾಮಗಾರಿ ಆರಂಭ: ವಾಹನಗಳಿಗೆ ಬದಲಿ ಮಾರ್ಗ ಜಯದೇವ ಬಳಿ ಮೆಟ್ರೋ ಕಾಮಗಾರಿ ಆರಂಭ: ವಾಹನಗಳಿಗೆ ಬದಲಿ ಮಾರ್ಗ

ಮುಂದಿನ 10-15 ದಿನಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ.

Varthur stretch to ease traffic between tech hubs

ಈ ಮಾರ್ಗದಲ್ಲಿ ಪ್ರಯಾಣಿಸುವ ಟೆಕ್ಕಿಗಳಿಗೆ ಇನ್ನೊಂದು ಸಿಹಿಸುದ್ದಿ ಇದ್ದು, ವರ್ತೂರು ಕೋಡಿಯಿಂದ ಗಂಜೂರು ಮಾರ್ಗದಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ರಸ್ತೆ ಅಗಲೀಕರಣ ಕಾಮಗಾರಿ ಕೂಡ ನಡೆಯುತ್ತಿದೆ. 1.4 ಕಿ.ಮೀ ಉದ್ದದ ರಸ್ತೆ ಅಗಲೀಕರಣ ಕಾಮಗಾರಿಯೂ ನಡೆಯಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

English summary
There is some good news for those commuting between Sarjapura Road and Whitefield via Gunjur. The Bruhat Bengaluru Mahanagara Palike (BBMP) has completed 85 per cent of the construction work of the bridge at Varthur Kodi, and the Palike expects the bridge to be open for the public from February.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X