ರಾಘವೇಶ್ವರ ಶ್ರೀಗಳ ಸಮ್ಮುಖದಲ್ಲಿ ವರ್ಣಮೈತ್ರಿ ಕಲಾ ಉತ್ಸವಕ್ಕೆ ತೆರೆ

Posted By:
Subscribe to Oneindia Kannada

ಬೆಂಗಳೂರು, ಜ 30: ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳ ಸಾನಿಧ್ಯದಲ್ಲಿ ಶನಿವಾರ (ಜ 30) ರಂದು 'ವರ್ಣಮೈತ್ರಿ ಕಲಾ ಉತ್ಸವ' ಸಂಪನ್ನಗೊಳ್ಳಲಿದೆ.

ಕೊಬಾಲ್ಟ್(ರಿ) ಫೋರಮ್ ಆಫ್ ಆರ್ಟ್ಸ್ & ಮ್ಯೂಸಿಕ್ ಸಂಸ್ಥೆಯು ತನ್ನ ಒಂಬತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ 'ವರ್ಣಮೈತ್ರಿ ಕಲಾ ಉತ್ಸವ'ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದೆ. (ಗೋ ರಕ್ತದ ಬದಲು ಗೋವಿನ ಹಾಲು ಹರಿಯಲಿ)

ಈ ಕಲಾ ಉತ್ಸವವು ನಗರದ ಐಡಿಯಲ್ ಹೋಮ್ಸ್ ಕಾಲನಿ, ರಾಜರಾಜೇಶ್ವರಿ ನಗರದ ಮುನಿವೆಂಕಟಯ್ಯ ರಂಗಮಂದಿರದಲ್ಲಿ ಸಂಜೆ ಐದು ಗಂಟೆಗೆ ಆರಂಭವಾಗಲಿದೆ.

Varna Maitri Kala Utsav will be concluded at Bengaluru on Jan 30

ನಾಡಿನ ಖ್ಯಾತ ಕವಿ, ಕಲಾವಿದರುಗಳು ಭಾಗವಹಿಸುತ್ತಿರುವ ಈ ಕಲಾ ಉತ್ಸವದಲ್ಲಿ ರಾಘವೇಶ್ವರಶ್ರೀಗಳು ಸಾನ್ನಿಧ್ಯ ವಹಿಸಿಕೊಂಡು, ಆಶೀರ್ವಚನ ನೀಡಲಿದ್ದಾರೆ.

ಖ್ಯಾತ ಕಲಾವಿದರಾದ ಎಸ್ ಜಿ ವಾಸುದೇವ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕವಿ ಡಾ. ಸಿದ್ದಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಕಾರ್ಯದರ್ಶಿ ಬಲವಂತರಾವ್ ಪಾಟೀಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಚಿಟ್ಟಾಣಿ ಬಳಗದಿಂದ 'ಸುಧನ್ವಾರ್ಜುನ' ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Varna Maitri Kala Utsav will be concluded at Bengaluru today (Jan 30). Raghaveshwara Bharti Seer of Ramachandrapura Math will be giving the Aashirvachana.
Please Wait while comments are loading...