ಕೆಎಚ್ ಕಲಾಸೌಧದಲ್ಲಿ 'ವಾಲಿ ವಧೆ' ತಪ್ಪದೇ ನೋಡಿ!

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 07: "ಅಶ್ವಘೋಷ ಥಿಯೇಟರ್ ಟ್ರಸ್ಟ್ " ಅರ್ಪಿಸುವ ಕುವೆಂಪು ರವರ ಶ್ರೀ ರಾಮಾಯಣ ದರ್ಶನಂ ಕಾವ್ಯ ಆಧಾರಿತಗಣೇಶ್ ಎಂ ಉಡುಪಿಯವರ ನಿರ್ದೇಶನ ಶ್ರೀಗಜಾನನ ಯುವಕ ಮಂಡಳಿ. ಶೇಷಗಿರಿ ಹಾನಗಲ್ ತಾ|| ಇವರು ಅಭಿನಯಿಸುವ ನಾಟಕ " ವಾಲಿ ವಧೆ " ಏಪ್ರಿಲ್ 15 ರಂದು ಹನುಮಂತನಗರದ ಕೆಎಸ್ ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ.

ಕುವೆಂಪುರವರ ಶ್ರೀರಾಮಾಯಣ ದರ್ಶನಂ ಇದರ "ಪೂಣ್ದೇನಗ್ನಿಸಾಕ್ಷಿ" ಮತ್ತು "ನೀಂ ಸತ್ಯವ್ರತ ನೇದಿಟಂ " ಎಂಬೆರಡು ಕಾವ್ಯಭಾಗದಿಂದ ಈ ನಾಟಕವನ್ನು ರಚಿಸಲಾಗಿದೆ. ಇಂಗ್ಲೀಷ್ ಮುಖ್ಯವಾಹಿನಿಗೆ ಹರಿಯುತ್ತಿರುವ ಈ ಕಾಲಘಟ್ಟದಲ್ಲಿ ಕನ್ನಡದ ಘಟ್ಟಕಾವ್ಯ ಒಂದರ ರುಚಿಯನ್ನು ಇಂದಿನ ತಲೆಮಾರಿಗೆ ಮುಟ್ಟಿಸುವುದಕ್ಕಾಗಿ ಮತ್ತು ಸಂಬಂಧಗಳು ಪಲ್ಲಟಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರೀತಿಯ ರೂಪಕವಾಗಿ "ವಾಲಿವಧೆ" ಒದಗಿಬಂದಿದೆ.

Vaali Vadhe Kannada Play at KH Kala Soudha on April 15

ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ಇಲ್ಲಿ ಅವನು ಸಾಯುವ ಕೊನೆಯ ಘಟ್ಟದಲ್ಲಿ ಪ್ರೀತಿಗಾಗಿ ಹಂಬಲಿಸಿ ತುಡಿಯುವ, ತನ್ನ ಅಹಂಕಾರಕ್ಕೆ ತಾನೆ ನಾಚಿ ಪಶ್ಚಾತ್ತಾಪ ಪಡುವ ವಿವೇಕದೊಂದಿಗಿನ ಪ್ರೇಮ ಬದುಕನ್ನು ಇಚ್ಛಿಸುವ ಅಣ್ಣ ವಾಲಿಯಾಗಿ ಚಿತ್ರಿಸಿದ್ದಾರೆ.

ಯಕ್ಷಗಾನ, ಕಳರಿ ಮತ್ತು ಮಣಿಪುರಿ ಕಲೆಯ ಕೆಲವು ಪಟ್ಟುಗಳನ್ನು ನಾಟಕದಲ್ಲಿ ಅಳವಡಿಸಲಾಗಿದೆ. ಇದೊಂದು ಸಂಗೀತ ಪ್ರಧಾನ ನಾಟಕ. ವೈಚಾರಿಕನು-ಭಾವಕನೊಳಗೆ, ಭಾವಕನು-ವೈಚಾರಿಕನೊಳಗೆ ಕುಳಿತು ತಳಮಳಿಸುತ್ತಿರುವ ಭಾರತದ ಹಳೆಯ ಕಥೆಯೊಂದು ಕೇವಲ ಆಳದ ಪ್ರೀತಿಗಾಗಿ ಇಲ್ಲಿ ನಾಟಕವಾಗಿದೆ.

ಬೆಳಕು : ರಾಜು ಮಣಿಪಾಲ
ಪ್ರಸಾಧನ : ಪ್ರಶಾಂತ ಉದ್ಯಾವರ, ಭವನ
ನಿರ್ವಹಣೆ : ನಾಗರಾಜ್ ಧಾರೇಶ್ವರ, ಪ್ರಭು ಗುರಪ್ಪನವರ

ಪಾತ್ರಧಾರಿಗಳು: ದೇವಿಪ್ರಸಾದ್ ಎರತೋಡಿ, ಸಿದ್ದು ಕೊಂಡೋಜಿ, ಅಮೀರ ಪಠಾಣ, ಸಿದ್ದಪ್ಪ ರೊಟ್ಟಿ, ಹರೀಶ್ ಗುರಪ್ಪನವರ , ಸಣ್ಣಪ್ಪ ಗೊರವರ , ಜಗದೀಶ ಕಟ್ಟಿಮನಿ, ಪ್ರಜ್ವಲ್ ಹೊಂಬಳ, ರಂಜಿತ ಜಾಧವ, ಅನೀಶ ಉಡುಪಿ

ಸ್ಥಳ : ಕೆ ಹೆಚ್ ಕಲಾಸೌಧ
ಹನುಮಂತನಗರ
ಬಸವನಗುಡಿ, ಬೆಂಗಳೂರು
ಶ್ರೀ ರಾಮಾಂಜನೇಯ ಗುಡ್ಡ ಹತ್ತಿರ

ಏಪ್ರಿಲ್ 15 ಸಂಜೆ 7 ಗಂಟೆಗೆ

ನಾಟಕದ ಟಿಕೆಟ್ ಗಳನ್ನು ಕಲಾಸೌಧದ ಟಿಕೆಟ್ ಕೌಂಟರ್ ಅಥವಾ ಬುಕ್ ಮೈ ಶೋ.ಕಾಂ ನಲ್ಲಿ ಪಡೆಯಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Wacth Ashwaghosha theatre trust presents Vaali Vadhe Kannada Play by Gajanana yuvaka mandali, Sheshagiri, Hangal team at KH Kala Soudha, Hanumanthanagar on April 15, 2018. This play is based on the two plays of Kuvempus Sri Ramayana Darshanam. Pundena Agni Sakshi and Neem Sathyavrathaneditam

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ