ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇರಳ- ಕೊಡಗು ಪ್ರವಾಹ ದುರಂತಕ್ಕೆ‌ ಮಿಡಿದ ಉತ್ತರಾಖಂಡ ಸರ್ಕಾರ!

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 22: ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ನಿಜಕ್ಕೂ ಆಘಾತಕಾರಿ. ನಮ್ಮ ರಾಜ್ಯ ಸರ್ಕಾರದ ವತಿಯಿಂದ 5 ಕೋಟಿ ರೂ. ಪರಿಹಾರ ನೀಡಿದ್ದೇವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಿಳಿಸಿದ್ದಾರೆ.

 ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ? ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸರ್ಕಾರದಿಂದ ಈ ಮೊತ್ತದ ಪರಿಹಾರ ನೀಡಿದ್ದೇವೆ. ಉಳಿದಂತೆ ನಮ್ಮ ರಾಜ್ಯದ ನಾಗರಿಕರು ಕೂಡ ಪ್ರತ್ಯೇಕವಾಗಿ ಪರಿಹಾರ ಸಾಮಗ್ರಿ, ಧನ ಸಂಗ್ರಹ ಮಾಡಿದ್ದಾರೆ. ಕೆಲವನ್ನು ಅದಾಗಲೇ ಎರಡೂ ರಾಜ್ಯದ ಸಂತ್ರಸ್ತ ಪೀಡಿತ ಸ್ಥಳಕ್ಕೆ ಕಳಿಸಿಕೊಡಲಾಗಿದೆ. ಇನ್ನೂ ಒಂದಿಷ್ಟು ಪರಿಹಾರ ಸಾಮಗ್ರಿ ಕಳಿಸಿಕೊಡಲಿದ್ದೇವೆ ಎಂದರು.

 ಕೊಡಗು, ಕೇರಳ ಸಂತ್ರಸ್ತರಿಗಾಗಿ ಮಿಡಿದ ಕಡಲ ತಡಿಯ ಹೃದಯ ಕೊಡಗು, ಕೇರಳ ಸಂತ್ರಸ್ತರಿಗಾಗಿ ಮಿಡಿದ ಕಡಲ ತಡಿಯ ಹೃದಯ

ಕರ್ನಾಟಕ, ಕೇರಳದಲ್ಲಿ ಆದ ಹಾನಿ ಬಗ್ಗೆ ವಿಶಾದವಿದೆ. ನಮ್ಮಂತೆ ಪ್ರವಾಸೋದ್ಯಮ ನಂಬಿದ್ದ ಭಾಗಗಳಲ್ಲಿ ಪ್ರಕೃತಿ ವಿಕೊಪ ನಡೆದಿದ್ದು ಬೇಸರ ತಂದಿದೆ. ಈ ಭಾಗದಲ್ಲಿ ಜನರ ಹಾಗೂ ಆಧುಕತೆಯ ಅಳವಡಿಕೆಯಿಂದಾದ ಬದಲಾವಣೆಯಿಂದ ಸಮಸ್ಯೆ ಆಗಿದೆ ಎನ್ನುವ ಅರಿವಿಲ್ಲ.

Uttarakhand donates rs5 crores to Kerala and Kodagu flood relief

ನಾವು ಪ್ರಕೃತಿಗೆ ವಿರುದ್ಧವಾಗಿ ಎಲ್ಲಿಯೂ ನಡೆದುಕೊಂಡಿಲ್ಲ. ನಮ್ಮಲ್ಲಿ ಅರಣ್ಯ ಪ್ರದೇಶ ಹೆಚ್ಚಾಗುತ್ತಿದೆ. ಶೇ.65 ರಷ್ಟಿದ್ದ ಅರಣ್ಯ ಭೂಮಿ ಈಗ ಶೇ. 71ನ್ನು ದಾಟಿದೆ. ನಾವು ಅರಣ್ಯ ಪೋಷಣೆ ಜತೆಗೆ ಪ್ರವಾಸೋದ್ಯಮ ಸೇರಿದಂತೆ ಇತರೆ ಪ್ರಗತಿ ಮಾಡುತ್ತಿದ್ದೇವೆ ಎಂದರು.

English summary
Uttarakhand chief minister Trivendra Singh Rawath had said that they have donated rs5 crores to Kerala and Kodagu flood victims and the citizens of Uttarakhand have given lot of materials to victims as well.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X