'ಬಿಜೆಪಿಗೆ ಬಡವರ ಕಾಳಜಿಯಿದ್ದರೆ ದೇಶಾದ್ಯಂತ ಅನ್ನಭಾಗ್ಯ ಕೊಡಲಿ'

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 03 : ಬಿಜೆಪಿಯವರು ಅನ್ನ ಭಾಗ್ಯ ನಮ್ಮದು ಎಂದು ಹೇಳುತ್ತಾರೆ ಆದರೆ ಛತ್ತೀಸ್ ಗಢ ಹಾಗೂ ಮಧ್ಯಪ್ರದೇಶದಲ್ಲಿ ಯಾಕೆ ಜಾರಿ ಮಾಡಿಲ್ಲ ಎಂದು ಆಹಾರ ಸಚಿವ ಯು.ಟಿ. ಖಾದರ್ ಪ್ರಶ್ನಿಸಿದ್ದಾರೆ.

ವಿಕಾಸಸೌಧದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಅನ್ನಭಾಗ್ಯ ನಮ್ಮದು ಎಂದು ಹೇಳುತ್ತಾರೆ, ಅನ್ನಭಾಗ್ಯದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ದೇಶಾದ್ಯಂತ ಜಾರಿ ಮಾಡಲಿ ಎಂದು ಸವಾಲೆಸೆದರು.

ತಾಕತ್ತಿದ್ದರೆ ಪ್ರಕಾಶ್ ರೈ ಅವರನ್ನು ಬರದಂತೆ ತಡೆಯಿರಿ: ಖಾದರ್ ಸವಾಲ್

ಪಡಿತರ ಚೀಟಿಯ ವಿತರಣೆಯನ್ನು ಆಧುನಿಕ ತಂತ್ರಜ್ಞಾನ ಬಳಸಿ ನೀಡಟುವ ವ್ಯವಸ್ಥೆ ಉತ್ತಮವಾಗಿದೆ.15 ಲಕ್ಷದ 42 ಸಾವಿರ ಜನ ಅರ್ಜಿ ಸಲ್ಲಿಸಿದ್ದಾರೆ. ರೆವಿನ್ಯೂ ಅಧಿಕಾರಿಗಳು ಪರಿಶೀಲನೆ ನಡೆಸಿ ವಿಲೇವಾರಿ ಮಾಡುತ್ತಿದ್ದಾರೆ.14ಲಕ್ಷದ 92ಸಾವಿರ ಅರ್ಜಿಗಳು ಪರಿಶೀಲನೆಯಾಗಿದೆ. 13 ಲಕ್ಷ ಅರ್ಜಿಗಳು ಜಿಲ್ಲೆಗಳಿಂದ ಇಲಾಖೆಗೆ ಪರಿಶೀಲನೆ ನಂತರ ಬಂದಿದೆ ಎಂದು ಮಾಹಿತಿ ನೀಡಿದರು.

UT Khader urged BJP to implement Anna Bhagya in alla states

11 ಲಕ್ಷದ 71 ಸಾವಿರ ಜನರಿಗೆ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸಿದ್ದೇವೆ. ಆಹಾರ ಇಲಾಖೆಯ ವೆಬ್ ಸೈಟ್ ಗೆ ಹೋಗಿ ನಿಮ್ಮ ಅರ್ಜಿ ನಂಬರ್ ಹಾಕಿದರೆ ಅರ್ಜಿಯ ಸ್ಥಿತಿಗತಿ ತಿಳಿಯುತ್ತದೆ. ಇಪ್ಪತ್ತಾರು ಸಾವಿರ ಅರ್ಜಿಗಳು ತಿರಸ್ಕೃತವಾಗಿವೆ. ತಿರಸ್ಕೃತವಾದ ಅರ್ಜಿಗಳ ವಿವರಗಳ್ನು ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತೇವೆ. ತಿರಸ್ಕೃತವಾಗಿದ್ದರೂ ಪುನಃ ಅರ್ಜಿ ಸಲ್ಲಿಸಬಹುದು ಎಂದರು.

ಸಿಎಂ ಅನಿಲಭಾಗ್ಯ ಯೋಜನೆ ವಿಚಾರ ಕುರಿತು ಮಾತನಾಡಿ, ಕೇಂದ್ರ ಸರ್ಕಾರದದ ಜತೆಗಿನ ಸಂಘರ್ಷ ಕೊನೆಯಾಗಿದೆ. ಸಿಎಂ ಅನಿಲ ಭಾಗ್ಯ ಶೀಘ್ರದಲ್ಲೇ ಅನುಷ್ಠಾನ ಮಾಡುತ್ತೇವೆ. ಸಿಲಿಂಡರ್ ಇಲ್ಲದವರ ಪಟ್ಟಿಯ ಮೂಲಕ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Food and civil supplies minister UT Khader urged BJP to implement Anna Bhagya in all states including Madhya Pradesh and Chhattigarh which BJP ruling states.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ