ಯುಟಿ ಖಾದರ್ ಗೆ ಒಲಿದ ಚಾಮರಾಜನಗರ ಉಸ್ತುವಾರಿ ಪಟ್ಟ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಯು.ಟಿ. ಖಾದರ್ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಎಚ್.ಸಿ ಮಹದೇವ ಪ್ರಸಾದ್ ಅವರ ದಿಢೀರ್ ನಿಧನದ ಹಿನ್ನೆಲೆ ಯು, ಟಿ. ಖಾದರ್ ಅವರನ್ನು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಯು. ಟಿ .ಖಾದರ್ ಪ್ರಸ್ತುತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರಾಗಿಯೂ ಇದ್ದಾರೆ. ಈಗ ಚಾಮರಾಜನಗರದ ಉಸ್ತುವಾರಿಯ ಜವಾಬ್ದಾರಿಯೂ ಅವರ ಹೆಗಲೇರಿದೆ.[ಎಪಿಎಲ್ ಪಡಿತರ ಚೀಟಿಗಾಗಿ ಇಂದಿನಿಂದಲೇ(ಜ.9) ಅರ್ಜಿ ಹಾಕಿ]

UT Khader appointed as Chamarajanagar District in charge Minister

ಚಾಮರಾಜನಗರ ಗುಂಡ್ಲುಪೇಟೆ ಶಾಸಕ, ಸಕ್ಕರೆ ಮತ್ತು ಸಹಕಾರಿ ಸಚಿವರಾಗಿದ್ದ ಎಚ್.ಎಸ್. ಮಹದೇವ ಪ್ರಸಾದ್ ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ತಮ್ಮದೇ ಜಿಲ್ಲೆಯಾದ ಕಾರಣ ಅತೀವ ಪ್ರೀತಿಯಿಂದ ಜನರ ಕೆಲಸಗಳನ್ನು ಮಾಡುತ್ತಿದ್ದರು. ಜ.3 ರಂದು ಹೃದಯಾಘಾತದಿಂದಾಗಿ ವಿಧಿವಶರಾದ ಹಿನ್ನೆಲೆ ಉಸ್ತುವಾರಿ ಸಚಿವ ಸ್ಥಾನ ಮತ್ತು ಸಕ್ಕರೆ ಮತ್ತು ಸಹಕಾರ ಸ್ಥಾನ ಮತ್ತೆ ಸಿಎಂ ಸಿದ್ದರಾಮಯ್ಯನವರೇ ವಹಿಸಿಕೊಂಡಿದ್ದರು. ಅದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ಯು.ಟಿ.ಖಾದರ್ ಅವರಿಗೆ ವರ್ಗಾಯಿಸಿದ್ದಾರೆ.

ಯು.ಟಿ. ಖಾದರ್ ಅವರು ಮತ್ತೊಂದು ಉಸ್ತುವಾರಿ ಸಚಿವ ಸ್ಥಾನವನ್ನು ವಹಿಸಿಕೊಂಡಿದ್ದು, ಎಚ್.ಎಸ್. ಮಹದೇವಪ್ರಸಾದ್ ಅವರಂತಯೇ ದಕ್ಷವಾಗಿ ಜನರ ಕೆಲಸಗಳನ್ನು ಮಾಡಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
UT Khader appointed as Chamarajanagar District in-charge Minister. in the past Minister HS Mahadeva Prasad is there. But still he passed away because UT Khader has been appointed to his position.
Please Wait while comments are loading...