ಉಸಿರೇ- ವೃದ್ಧರ ಸಹಾಯಾರ್ಥ ರಾಜೇಶ್ ಕೃಷ್ಣನ್ ರಸಸಂಜೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16: ಹಿತೇಶಿ ಮಹಿಳಾ ಮನೆಯಂಗಳ ಟ್ರಸ್ಟ್ ಸಹಾಯಾರ್ಧವಾಗಿ ದೇಣಿಗೆ ಸಂಗ್ರಹಿಸಲು ಗಾಯಕ ರಾಜೇಶ್ ಕೃಷ್ಣನ್ ಹಾಗೂ ತಂಡದವರು 'ಉಸಿರೆ' ಎಂಬ ರಸಸಂಜೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ..

ನವೆಂಬರ್ 19 ರಂದು ನಗರದ ಅಂಬೇಡ್ಕರ್ ಭವನದಲ್ಲಿ ಈ ರಸಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಆರ್ ಜೆ ಮಯೂರ್ ರಾಘವೇಂದ್ರ, ಅವಿನಾಶ್ ಛೆಬ್ಬಿ, ಅಂಕಿತ್ ಕುಂಡು ಅವರ ಗಾಯನದ ಜತೆಗೆ ಅರುಣ್ ಕುಮಾರ್ ಅವರ ಡ್ರಮ್ ನಾದವನ್ನು ಆಲಿಸಬಹುದು.

Ussire is a melodious evening by Rajesh Krishnan

2005ರಲ್ಲಿ ಆರಂಭವಾದ ಮನೆಯಂಗಳ ವಯ್ಯಾಲಿಕಾವಲ್ ನಲ್ಲಿ ವೃದ್ಧಾಶ್ರಮ ಹೊಂದಿದೆ. 100ಕ್ಕೂ ಅಧಿಕ ಹಿರಿಯ ನಾಗರಿಕರನ್ನು ಕಾಯುತ್ತಿದೆ. 1993ರಲ್ಲಿ ಆರಂಭವಾದ ಹಿತೇಶಿ ಮಹಿಳಾ ಮನೆಯಂಗಳ ಟ್ರಸ್ಟ್ ಸಾಮಾಜಿಕ ಕಳಕಳಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ರಕ್ತದಾನ ಶಿಬಿರ, ಶಾಲಾ ಮಕ್ಕಳಿಗೆ ಕ್ವಿಜ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ.

ಟಿಕೆಟ್ ಬೆಲೆ : 250 ರು, 500, 750, 1000
ಹೆಚ್ಚಿನ ಮಾಹಿತಿಗೆ ಟಾಕ್ ಆಫ್ ದಿ ಟೌನ್ ವೆಬ್ ಸೈಟ್ ಕ್ಲಿಕ್ ಮಾಡಿ
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ussire is a melodious evening by Rajesh Krishnan and team. A fund raiser for Hiteshi Mahila Maneyangala Trust. Celebrated singer Rajesh Krishnan with his musical team will be performing live on 19th of November, 2016.
Please Wait while comments are loading...