ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮಾನಯಾನ ಸಂಸ್ಥೆಗಳಿಂದ ಕನ್ನಡದಲ್ಲೇ ಸೇವೆಗೆ ಟ್ವಿಟ್ಟರ್ ಅಭಿಯಾನ!

|
Google Oneindia Kannada News

ಬೆಂಗಳೂರು, ಜನವರಿ 10 :ಎಲ್ಲಾ ವಿಮಾನ ಸೇವಾ ಸಂಸ್ಥೆಗಳು ಕನ್ನಡದಲ್ಲೇ ಸೇವೆಗಳನ್ನು ಒದಗಿಸುವಂತೆ ಆಗ್ರಹಿಸಿ ಟ್ವಿಟ್ಟರ್ ನಲ್ಲಿ ಬುಧವಾರ ಸಂಜೆಯಿಂದ ಅಭಿಯಾನವೊಂದನ್ನು ಆರಂಭಿಸಲಾಗುತ್ತಿದೆ.

ಕನ್ನಡ ಗ್ರಾಹಕ ಟೀಮ್ ಹೆಸರಿನ ಸ್ವಯಂ ಸೇವಕರು ಒಟ್ಟಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ವಿಮಾನಯಾನ ಸಂಸ್ಥೆಗಳು ಸ್ಥಳೀಯವಾಗಿ ಕನ್ನಡ ಭಾಷೆಯನ್ನು ಬಳಸಿ ಸೇವೆಯನ್ನು ಒದಗಿಸಬೇಕೆಂಬ ಒತ್ತಾಯವನ್ನು ವಿಮಾನ ಸಂಸ್ಥೆಗಳ ಮೇಲೆ ಹೇರುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ.

ಸಂಕ್ರಾಂತಿ ವಿಶೇಷ ಪುಟ

ಜನವರಿ 10ರಂದು ಸಂಜೆ 5 ರಿಂದ ಈ ಹ್ಯಾಶ್ ಟ್ಯಾಗ್ ಗಳಲ್ಲಿ ಈ ಅಭಿಯಾನ ಆರಂಭಗೊಳ್ಳಲಿದ್ದು, ಕನ್ನಡಿಗರು ಅತಿ ಹೆಚ್ಚು ಸಂಖ್ಯೆಯಲ್ಲಿ ಟ್ವೀಟ್ ಮಾಡಿ ಮಾಡಬೇಕೆಂದು ಕೋರಲಾಗಿದೆ. ಕೇಂದ್ರ ವಿಮಾನ ಸಾರಿಗೆ ಸಚಿವ ಅಶೋಕ್ ಗಜಪತಿರಾಜು ಅವರಿಗೆ ಆನ್ ಲೈನ್ ಮೂಲಕ ಸಲ್ಲಿಸಲಿರುವ ಮನವಿಗೆ ಕನ್ನಡಿಗರು ಸಹಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ. ವಿಮಾನ ಸಂಚಾರದ ವೇಳೆ ವಿಮಾನದಲ್ಲಿ ಘೋಷಣೆಗಳನ್ನು ಕನ್ನಡದಲ್ಲಿಯೇ ಮಾಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

Urges Airlines service in Kannada language

ವಿಮಾನದ ಡೈರೆಕ್ಟರ್ ಜನರಲ್ ಇತ್ತೀಚೆಗೆ ಹೊರಡಿಸಿದ್ದ ಸುತ್ತೋಲೆಯಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ವಿಮಾನ ಸಂಚಾರ ವೇಳೆ ಘೋಷಣೆ ಮಾಡುವಂತೆ ಆದೇಶಿಸಿದ್ದರು.

ಆದರೆ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಮಾತ್ರವಲ್ಲದೆ ಇತರೆ ಭಾಷೆ ಮಾತನಾಡುವವರು ಕೂಡ ವಿಮಾನದಲ್ಲಿ ಸಂಚರಿಸುವುದರಿಂದ ಆಯಾ ರಾಜ್ಯಗಳ ಸ್ಥಳೀಯ ಭಾಷೆಗಳನ್ನು ಘೋಷಣೆಗಳನ್ನು ಪ್ರಕಟಿಸುವ ಅನಿವಾರ್ಯತೆ ಇದೆ ಹಾಗಾಗಿ ಕೇಂದ್ರ ಸರ್ಕಾರ ಈ ಕುರಿತಂತೆ ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ ಮೂಲಕ ನಿರ್ದೇಶನ ನೀಡಬೇಕೆಂದು ಕೇಂದ್ರ ಸಚಿವ ಅಶೋಕ್ ಗಜಪತಿರಾಜು ಅವರಿಗೆ ನೀಡಲಾಗಿರುವ ಮನವಿಯಲ್ಲಿ ಒತ್ತಾಯಿಸಲಾಗುತ್ತಿದೆ. ಟ್ವೀಟ್ ಮಾಡಬೇಕಾದ ಹ್ಯಾಶ್ ಟ್ಯಾಗ್ . 1) #AirlinesServeInMyLanguage

English summary
Kannada Grahaka team is organising a twitter campaign to urge airline companies to provide services in local language.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X