ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ನೇ ಹಂತದ ಮೆಟ್ರೋ: ನಗರಾಭಿವೃದ್ಧಿ ಇಲಾಖೆ ಎಚ್ಚರಿಕೆ ಏನು?

|
Google Oneindia Kannada News

ಬೆಂಗಳೂರು, ಜನವರಿ 11: ಎರಡನೇ ಹಂತದ ನಮ್ಮ ಮೆಟ್ರೋ ಮಾರ್ಗದ ಕಾಮಗಾರಿ ಮೇಲೆ ಕಣ್ಣಿಡಿ ಎಂದು ನಗರಾಭಿವೃದ್ಧಿ ಇಲಾಖೆ ಬಿಎಂಆರ್‌ಸಿಎಲ್‌ಗೆ ಸೂಚನೆ ನೀಡಿದೆ.

ಒಂದನೇ ಹಂತದ ಯೋಜನೆಯ ಮೆಟ್ರೋ ಮಾರ್ಗದಲ್ಲಿ ಕಂಡು ಬಂದ ಲೋಪದಿಂದ ಪಾಠ ಕಲಿತಿರುವ ಬಿಎಂಆರ್‌ಸಿಎಲ್ , ನಿರ್ಮಾಣ ಹಂತದಲ್ಲಿರುವ ಎರಡನೇ ಹಂತದ ಯೋಜನೆಯ ಮಾರ್ಗದ ಮೇಲೆ ಹೆಚ್ಚು ನಿಗಾ ಇರಿಸಿದೆ.

ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ ನಮ್ಮ ಮೆಟ್ರೋ ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನ

ನಾಯಂಡಹಳ್ಳಿ-ಕೆಂಗೇರಿ ಮತ್ತು ಯಲಚೇನಹಳ್ಳಿ-ಅಂಜನಾಪುರ ಟೌನ್‌ಶಿಪ್ ಮಾರ್ಗಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಈ ಮಾರ್ಗಗಳನ್ನು 2021 ಕ್ಕೆ ಸಂಚಾರ ಮುಕ್ತಗೊಳಿಸುವ ಗುರಿ ಹೊಂದಿದೆ. ನಿರ್ಮಾಣ ಹಂತದಲ್ಲೇ ತಪಾಸಣೆ ನಡೆಸಿ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು, ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಬಳಿಕವೇನಾದರೂ ಲೋಪ ಕಂಡುಬಂದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Urban development dept gave instructions to BMRCL

ಟ್ರಿನಿಟಿ ಮೆಟ್ರೋ ನಿಲ್ದಾಣದ ವಯಾಡಕ್ಟ್‌ನ ಬೀಮ್‌ನಲ್ಲಿ ಕಾಂಕ್ರೀಟ್ ಶಿಥಿಲಗೊಂಡಿರುವುದು ಕೆಲ ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು. ಆಗ ಸಣ್ಣ ದುರಸ್ತಿ ಕಾರ್ಯ ನಡೆಸಲಾಗಿತ್ತು. ಹಲವು ವರ್ಷಗಳ ಬಳಿಕ ಮತ್ತೆ ಸಮಸ್ಯೆ ಕಾಣಿಸಿಕೊಂಡಿದೆ.

ವಿಶೇಷ ಆಡಿಟ್: ಬೈಯಪ್ಪನಹಳ್ಳಿ-ಮೈಸೂರು ರಸ್ತೆ, ಯಲಚೇಹಳ್ಳಿ-ನಾಗಸಂದ್ರ ಮಾರ್ಗದ ಗುಣಮಟ್ಟ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಹೊರಗಿನ ಏಜೆನ್ಸಿಯೊಂದರಿಂದ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸೂಕ್ತ ಏಜೆನ್ಸಿಗಳ ಹುಡುಕಾಟ ನಡೆಯುತ್ತಿದೆ.

English summary
After some incident in metro pillar , Urben development department gave instructions to take cognizance of the work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X