ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಹವಾನಿಯಂತ್ರಿತ ಬಸ್‌ಗಳ ಸೇವೆಗೆ ಸಾರಿಗೆ ಸಚಿವರ ಚಾಲನೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಬೆಂಗಳೂರು, ಫೆಬ್ರವರಿ 9: 'ಅರ್ಬನ್‌ ಬಸ್‌ ಸ್ಪೆಸಿಫಿಕೇಷನ್‌' ಮಾದರಿಯ ಹೊಸ ಹವಾನಿಯಂತ್ರಿತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚಾಲನೆ ನೀಡಿದರು. ಪ್ರಯಾಣಿಕರ ಅನುಕೂಲಕ್ಕಾಗಿ ಸಂಸ್ಥೆಯು ಹೆಚ್ಚು ಆರಾಮದಾಯಕವಾದ ಯುಬಿಎಸ್‌ 2 (ಅರ್ಬನ್‌ ಸ್ಪೇಸ್‌ ಸ್ಪೆಸಿಫಿಕೇಷನ್‌) ಮಾದರಿ ಬಸ್‌ ಗಳ ಕಾರ್ಯಾಚರಣೆಗೆ ಉದ್ದೇಶಿಸಿದೆ.

ಕೆಲವೇ ತಿಂಗಳಲ್ಲಿ ಹೊಸ ವಿನ್ಯಾಸದ 150 ವೋಲ್ವೊ ಬಸ್‌ಗಳು ಸೇರ್ಪಡೆಯಾಗಲಿವೆ. ಸದ್ಯ ನಿಗಮವು 675 ವೋಲ್ವೊ ಬಸ್‌ಗಳನ್ನು ಹೊಂದಿದೆ. ಇದೇ ತಿಂಗಳಲ್ಲಿ 25 ಹೊಸ ಬಸ್‌ಗಳು ರಸ್ತೆಗೆ ಇಳಿಯಲಿವೆ. ಪ್ರಸ್ತುತ ವೋಲ್ವೊ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿರುವ ಮಾರ್ಗಗಳಲ್ಲೇ ಈ ಬಸ್‌ಗಳನ್ನು ಓಡಿಸಲಾಗುತ್ತದೆ.[5,500 ಹೊಸ ಬಸ್‌ಗಳ ಖರೀದಿಗೆ ಸಾರಿಗೆ ಇಲಾಖೆ ನಿರ್ಧಾರ]

Ramalinga Reddy

ಹೊಸ ಬಸ್‌ಗಳಲ್ಲಿ ಏನಂಥ ವೈಶಿಷ್ಟ್ಯ ಅಂತೀರಾ? ಅವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

* ಆರಾಮದಾಯಕ ಆಸನಗಳೊಂದಿಗೆ ಹೆಡ್‌ ರೆಸ್ಟ್‌ ಅಳವಡಿಸಲಾಗಿದೆ.

* ಪ್ರತಿ ಆಸನಗಳ ಸಾಲಿನಲ್ಲಿ ಮೊಬೈಲ್/ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ ಇದೆ.

* ವಾಹನಗಳ ಒಳಭಾಗದಲ್ಲಿರುವ ಪ್ರತಿ ಕಂಬದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಾಹನಗಳನ್ನು ನಿಲ್ಲಿಸುವ ಕೋರಿಕೆಯ ಸ್ವಿಚ್‌ಗಳನ್ನು ಹಾಕಲಾಗಿದೆ.

* ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ವಾಹನದ ಮಧ್ಯಭಾಗದ ಬಾಗಿಲ ಬಳಿ ಸ್ವಿಚ್‌ ಇದೆ.

* ಅಂಗವಿಕಲರ ಅನುಕೂಲಕ್ಕಾಗಿ ವ್ಹೀಲ್‌ ಚೇರ್‌ನೊಂದಿಗೆ ವಾಹನವನ್ನು ಮಧ್ಯದ ಬಾಗಿಲಿನಿಂದ ಹತ್ತಲು ಮತ್ತು ಇಳಿಯಲು ಹಾಗೂ ಬಸ್‌ ಚಲಿಸುವ ಸಂದರ್ಭದಲ್ಲಿ ವ್ಹೀಲ್‌ ಚೇರ್ ಹಿಡಿದಿಡಲು ವ್ಯವಸ್ಥೆ ಮಾಡಲಾಗಿದೆ.

* ಪ್ರಯಾಣಿಕರ ಸುರಕ್ಷತೆಗಾಗಿ ಬಸ್‌ನಲ್ಲಿ 2 ಸಿಸಿಟಿವಿ ಕ್ಯಾಮೆರಾಗಳಿವೆ.

* ಚಾಲಕರು ವಾಹನವನ್ನು ಸುರಕ್ಷಿತವಾಗಿ ಹಿಮ್ಮುಖವಾಗಿ ಚಾಲನೆ ಮಾಡಲು ವಾಹನದ ಹಿಂಭಾಗದಲ್ಲಿ ಒಂದು ಕ್ಯಾಮೆರಾ ಅಳವಡಿಸಲಾಗಿದೆ.

* ತುರ್ತು ಸಂದರ್ಭದಲ್ಲಿ ಬಳಸಲು ಚಾಲಕರ ಬಳಿ ಪ್ಯಾನಿಕ್ ಅಲಾರಾಂ ಸ್ವಿಚ್‌ ಇದೆ.

* ಬಸ್‌ನ ಎಂಜಿನ್ ಬಳಿ ಬೆಂಕಿ ಪತ್ತೆ ಹಚ್ಚುವ ಮತ್ತು ನಂದಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

* ವಾಹನದಲ್ಲಿ ಮಾಹಿತಿ ತಂತ್ರಜ್ಞಾನ ಇದ್ದು, ಪ್ರಯಾಣಿಕರು ವಾಹನ/ಮಾರ್ಗ/ಸ್ಥಳದ ಮಾಹಿತಿ ಪಡೆಯಬಹುದು.

English summary
Urban bus specification model bus service inaugurated by transport minister Ramalinga reddy in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X