ತ್ಯಾಜ್ಯಕ್ಕೆ ಬೆಂಕಿ ಇಟ್ಟವರಿಗೆ ಬೀಳುತ್ತೆ 2 ಲಕ್ಷ ದಂಡ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 28 : ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುತ್ತಿರುವುದರಿಂದ ನಗರದಲ್ಲಿ ಮಾಲಿನ್ಯ ಹೆಚ್ಚಾಗಿದೆ. ಅದರೊಂದಿಗೆ ತ್ಯಾಜ್ಯಕ್ಕೆ ಬೆಂಕಿ ಇಟ್ಟು ಸುಡುತ್ತಿರುವುದರಿಂದ ಮಾಲಿನ್ಯದ ಪ್ರಮಾಣ ಅತಿಯಾಗಿದೆ. ಹೀಗಾಗಿ ಕಸಕ್ಕೆ ಬೆಂಕಿ ಇಟ್ಟವರಿಗೆ 1 ರಿಂದ 2 ಲಕ್ಷ ರೂ ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆ

ರಾಷ್ಟ್ರೀಯ ಹಸಿರು ಪೀಠದ ಆದೇಶದಂತೆ ಕೆರೆ ಅಂಗಳ, ರಾಜಕಾಲುವೆಯಲ್ಲಿ ಕಟ್ಟಡ ತ್ಯಾಜ್ಯ ಸುರಿಯುವವರಿಗೆ 5 ಲಕ್ಷ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಇಡುವವರೆಗೆ ದುಬಾರಿ ದಂಡ ಹಾಕಲೇ ಬೇಕಿದೆ. ಇಂಥಹ ಪ್ರಕರಣಗಳಲ್ಲಿ100-200 ರೂ. ದಂಡ ವಿಧಿಸುತ್ತಿರುವುದು ಸಾಲದು ಈ ದಂಡಕ್ಕೆ ಯಾರೂ ಭಯ ಪಡುವುದಿಲ್ಲ ಎಂದರು.

Upto Rs.2 lakh penalty for burning waste

ಕಸಕ್ಕೆ ಬೆಂಕಿ ಇಟ್ಟು ಸುಡುವವರಿಗೆ 1 ರಿಂದ 2 ಲಕ್ಷ ರೂ ದಂಡ ವಿಧಿಸಲು ಬಿಬಿಎಂಪಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ ನಿರ್ಲಕ್ಷ್ಯ ವಹಿಸುವ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುತ್ತದೆ.

ಬೆಂಗಳೂರಿಗರಿಗೆ ಹೊಸ ತೆರಿಗೆ ಹಾಕಲಿದೆ ಬಿಬಿಎಂಪಿ

ಧೂಳಿನ ಕಣ ಹೆಚ್ಚಳ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಲಿನ್ಯ ಪ್ರಮಾಣದ ಅಳತೆಗೆ 16 ಕಡೆ ಮಾಪಕಗಳನ್ನು ಅಳವಡಿಸಿದೆ. ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್ ಪ್ರಮಾಣವು ರಾಷ್ಟ್ರೀಯ ಮಿತಿ ದಾಟಿಲ್ಲ. ಆದರೆ ಗಾಳಿಯಲ್ಲಿ ತೇಲಾಡುವ ಧೂಳಿನ ಕಣಗಳ ಪ್ರಮಾಣವು ಹಲವೆಡೆ 120 ಮೈಕ್ರೋ ಗ್ರಾ ನಷ್ಟಿದೆ. ಇದರಿಂದ ಜನತೆಗೆ ಅಸ್ತಮಾ ಸೇರಿದಂತೆ ಶಾಸಕೋಶ ಸಂಬಂಧಿ ಕಾಯಿಲೆಗಳು ಬರುವ ಆತಂಕವಿದೆ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru Mahanagar palike is thinking of slapping big fines on those, who set fire to garbage on vacant land and landfills. The BBMP council that met wednesday to discuss the air quality across bengaluru contemplated fines ranging from Rs. 1 lakh to Rs.2 lakh on such people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ