ಪ್ರಜಾಪ್ರಭುತ್ವ ಬಗ್ಗೆ ಉಪೇಂದ್ರ ಅಣಕು ಗೀತೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 13: ರಾಜಕೀಯ ಬೇಡ ಪ್ರಜಾಕೀಯ, ಪ್ರಜಾಕಾರಣ ಎನ್ನುತ್ತಾ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ಹಿಂದೊಮ್ಮೆ ಚುನಾವಣಾ ಆಯೋಗದ ಅಘೋಷಿತ ಪ್ರಚಾರಕರಾಗಿದ್ದರು. ಆಗೆಲ್ಲ ಮತದಾನದ ಬಗ್ಗೆ ಪ್ರಚಾರ ಮಾಡಿದ್ದರು.

'ಮತದಾನ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ. ಎಲ್ಲರೂ ಮತದಾನ ಮಾಡಲೇಬೇಕು. ನಿಮ್ಮ ವೋಟ್ ವೇಸ್ಟ್ ಮಾಡಬೇಡಿ. ಒಂದು ಪಕ್ಷಕ್ಕೆ ಮೆಜಾರಿಟಿ ಸಿಗಬೇಕು ಎಂಬ ಆಸೆಯಿದೆ' ಎಂದು ಉಪೇಂದ್ರ ಹೇಳಿದ್ದಾರೆ.

2004ರಲ್ಲೇ ಉಪೇಂದ್ರ ಅವರು ಓಂಕಾರ ಚಿತ್ರದಲ್ಲಿ ಓತ್ಲಾ ಓತ್ಲಾ ಹಾಡಿನಲ್ಲಿ ಮತದಾನ, ಪ್ರಜಾಪ್ರಭುತ್ವ, ರಾಜಕೀಯ ನಾಯಕರ ಆಟಾಟೋಪದ ಬಗ್ಗೆ ಓಪನ್ ಓಪನ್ ಆಗಿ ಹಾಡಿ ಕುಣಿದಿದ್ದರು. ಉಪ್ಪಿ ಜೊತೆ ದುರ್ಗಾಶೆಟ್ಟಿ ಸ್ಟೆಪ್ ಹಾಕಿದ್ದರು. ವೋಟ್ ಮಾಡದೆ ಸೋಮಾರಿಗಳಾಗಿ ಕುಳಿತಿರುವ ಮತದಾರ ಪ್ರಭುಗಳಿಗೆ, ಉಪ್ಪಿಯ ಪ್ರಜಾಕೀಯದ ಬಗ್ಗೆ ಕನಸು ಹೊತ್ತಿರುವವರಿಗೆ ಈ ಹಾಡು ಅರ್ಪಣೆ....

Upendra Satire song on Voting, Democracy

ಓಂಕಾರ: ಒತ್ತು ಒತ್ತು ಇಲ್ಲಿ ಒತ್ತು...ಓತ್ಲಾ ಓತ್ಲಾ
ಸಂಗೀತ: ಗುರುಕಿರಣ್
ಗಾಯಕರು: ಶಮಿತಾ ಮಲ್ನಾಡ್ ಹಾಗೂ ಉಪೇಂದ್ರ
ಗೀತ ಸಾಹಿತ್ಯ: ಉಪೇಂದ್ರ ಹಾಗೂ ವಿ ಮನೋಹರ್

ಶಮಿತಾ ಮಲ್ನಾಡ್: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ

ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
ತಿರ್ಪೋಕಿ ಪೊರ್ಕೀನು ಸ್ಟಾರಲಾ
ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ
ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್ ಓಟ್ ಫಾರ್ ನಂಗಾ ನಾಚ್
ಉಪೇಂದ್ರ: ಕತ್ತ್ಲೇಲ್ ಒಂಟಿ ಸುಂದರಿ ನಡೆದರೆ ರಾಂ ರಾಜ್ಯ
ಅರೆ ಬೆತ್ತಲೆ ನಾಟಿ ಚೋಕ್ರಿ ಕುಣಿದರೆ ನಂ ರಾಜ್ಯ
ಹೊಡಿ ಕಂಟ್ರಿ ಸಾರಾಯ್
ತಗ ವೀರೇಷ* ರಾಯ್*
ಒಂದ್ ಓಟಿಗೆ ಐನೂರ್ ರುಪಾಯಿ
ಓಟು ಹಾಕೋವರೆಗು ಇವು ನಿನ್ ಮನೆ ನಾಯಿ
ಗೆದ್ದ್ ಮೇಲೆ ನಿಂಗ್ ಬದನೆಕಾಯ್

Upendra Press Meet : He Declared His Political Entry | Oneindia Kannada

ಶಮಿತ: ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಯೇ ಒತ್ತು ಒತ್ತು ಓಟು ಒತ್ತು ಒತ್ತು ಒತ್ತು ಇಲ್ಲಿ ಒತ್ತು ಎತ್ತು ಎತ್ತು ಇದ್ನ ಎತ್ತು ಈ ಸಲಾ
ಉಪೇಂದ್ರ: ಓತ್ಲಾ ಓತ್ಲಾ ಓತ್ಲಾ ಓಟಿಲ್ಲಿ ಒತ್ತ್ಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಓತ್ಲಾ ಓತ್ಲಾ ಓಟಿಲ್ಲಿ ಒತ್ತಲಾ
ಡೆಮಾಕ್ರಸಿ ಬಟ್ಟೆ ಬಿಚ್ಚಿ ರೋಡಿಗ್ ತಂದ್ರಲ್ಲಾ
ಸ್ಟಾರ್ಸೆಲ್ಲಾ ಬೆಗ್ಗರ್ಸು ಆದ್ರಲ್ಲಾ
ತಿರ್ಪೋಕಿ ಪೊರ್ಕೀನು ಸ್ಟಾರಲಾ
ಈ ಮ್ಯಾಜಿಕ್ ಐದ್ ವರ್ಷಕೊಂದ್ಸಲ
ಸಂಗಡಿಗರು: ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ
ಒತ್ತು ಒತ್ತು ಒತ್ತು ಒತ್ತು ಒತ್ತ್ಲಾ ಮಗಾ
ಎತ್ತು ಎತ್ತು ಎತ್ತು ಎತ್ತು ಎತ್ತ್ಲಾ ಮಗಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Real star Upendra and V Manohar jointly penned a satire song lyrics on voting, democracy and Indian political system. Ottu Ottu illi Ottu song lyrics is here.
Please Wait while comments are loading...