ನಗ್ನ ಸತ್ಯ ಬಯಲಿಗೆಳೆಯಲು ಉಪೇಂದ್ರರಿಂದ ವೆಬ್ ಸೈಟ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 11: ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಗೌರವಾನ್ವಿತ ಸಂಸ್ಥಾಪಕ ಉಪೇಂದ್ರ ಅವರು ಸಮಾಜದ ಅಂಕು ಡೊಂಕುಗಳನ್ನು ತಿದ್ದಲು ಮತ್ತೊಂದು ಆಯುಧ ಹಿಡಿದು ಬಂದಿದ್ದಾರೆ. ತಮ್ಮ ಪಕ್ಷದ ಹೊಸ ವೆಬ್ ಸೈಟ್ ಶನಿವಾರದಂದು ಲೋಕಾರ್ಪಣೆ ಮಾಡಿದ್ದಾರೆ.

ಭ್ರಷ್ಟಾಚಾರಕ್ಕೆ ಕುಮ್ಮಕ್ಕು, ಉಪೇಂದ್ರ ವಿರುದ್ಧ ಬಿತ್ತು ಕೇಸ್

ಕೆಪಿಜೆಪಿ ಪಕ್ಷ ಹಾಗೂ ಉಪೇಂದ್ರ ಅವರ ರಾಜಕೀಯ ಕಾರ್ಯಕ್ರಮಗಳನ್ನ ಈ ವೆಬ್ ಸೈಟ್ ನಲ್ಲಿ ನೋಡಬಹುದು.
'ಕೆಪಿಜೆಪಿಉಪ್ಪಿ' ಹೆಸರಿನಲ್ಲಿ ಉಪೇಂದ್ರ ಅವರ ವೆಬ್ ಸೈಟ್ ಬಿಡುಗಡೆಯಾಗಿದ್ದು, 'ಕೆಪಿಜೆಪಿ' ಪಕ್ಷದ ಗುರಿ, ಪಕ್ಷದ ಚಟುವಟಿಕೆಗಳು ಹೇಗಿರಬೇಕು. ಜನರನ್ನ ತಲುಪುವುದು ಹೇಗೆ ಎಂಬ ಎಲ್ಲ ವಿವರಗಳು ಇಲ್ಲಿವೆ.

Upendra launches KPJP Website to reveal naked truth

ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡಿದ ಉಪೇಂದ್ರ, ಆಸಕ್ತ ಅಭ್ಯರ್ಥಿಗಳು ಈ ವೆಬ್ ಸೈಟ್ ನಲ್ಲಿ ತಮ್ಮ ವಿವರವನ್ನ ಅಪ್ ಡೇಟ್ ಮಾಡಬೇಕು. ಎಲ್ಲ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಇಂತದ್ದೇ ಎಂಬ ಮಾನದಂಡವಿಲ್ಲ. ಅವಿದ್ಯಾವಂತರಿಗೂ ಪಕ್ಷದಲ್ಲಿದೆ ಅವಕಾಶವಿದೆ. ಒಂದು ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಡೆಡ್ ಲೈನ್ ಎಂದುಕೊಂಡಿದ್ದೇವೆ. ನಮ್ಮ ಪಕ್ಷದಲ್ಲಿ ಜಾತಿ, ವರ್ಗಕ್ಕೆ ಅವಕಾಶವಿಲ್ಲ'' ಎಂದು ಉಪ್ಪಿ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka prajnavantha janata Party(KPJP) President(Hon) Upendra launches website to reveal naked truth.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ