ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಪೇಂದ್ರರ ಕೆಪಿಜೆಪಿಯ ಸಂಭಾವ್ಯ ಪ್ರಣಾಳಿಕೆ ಪ್ರಕಟ

By Mahesh
|
Google Oneindia Kannada News

Recommended Video

ಉಪೇಂದ್ರ ರವರ ಕೆಪಿಜೆಪಿ ಸಂಭಾವ್ಯ ಪ್ರಣಾಳಿಕೆ ಬಿಡುಗಡೆ | Oneindia Kannada

ಬೆಂಗಳೂರು, ಡಿಸೆಂಬರ್ 24: ನಟ, ನಿರ್ದೇಶಕ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಸಂಭಾವ್ಯ ಪ್ರಣಾಳಿಕೆಯನ್ನು ಭಾನುವಾರದಂದು ಪ್ರಕಟಿಸಲಾಗಿದೆ.

ಉಪೇಂದ್ರ ನೇತೃತ್ವದ 'ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ'ದ ಬಹುನಿರೀಕ್ಷಿತ ಸಂಭಾವ್ಯ ಪ್ರಣಾಳಿಕೆ ಬಿಡುಗಡೆಯಾಗಿದೆ. ಪ್ರಣಾಳಿಕೆಯ ಭಾಗ 1ರಲ್ಲಿ ಪಾರದರ್ಶಕ ಆಡಳಿತಕ್ಕೆ ಉಪೇಂದ್ರ ಹೆಚ್ಚು ಒತ್ತು ಕೊಟ್ಟಿದ್ದಾರೆ.

ಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರಸಂದರ್ಶನ: ಕೆಪಿಜೆಪಿ ಬಗ್ಗೆ 10 ಪ್ರಶ್ನೆಗಳಿಗೆ ಉಪ್ಪಿ ಕೊಟ್ಟ ರುಚಿಕಟ್ಟು ಉತ್ತರ

ಸಂಭಾವ್ಯ ಪ್ರಣಾಳಿಕೆಯ ಭಾಗ -1ರಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಿದೆ. ಜನ ಪ್ರತಿನಿಧಿಗಳ ಹಕ್ಕು, ಕರ್ತವ್ಯ, ಜವಾಬ್ದಾರಿ ಬಗ್ಗೆ, ಸರ್ಕಾರಕ್ಕೆ ತಂತ್ರಜ್ಞಾನದ ನೆರವು, ಇ-ವ್ಯವಸ್ಥೆ, ಸಾಮಾಜಿಕ ಜಾಲತಾಣಗಳಲ್ಲಿ ಆಡಳಿತದ ಬಗ್ಗೆ ಮಾಹಿತಿ ಇರಬೇಕು ಎಂದು ಹೇಳಲಾಗಿದೆ.

ಭ್ರಷ್ಟಾಚಾರ ಮುಕ್ತ ಆಡಳಿತವೇ ಕೆಪಿಜೆಪಿ ಗುರಿ : ಉಪೇಂದ್ರಭ್ರಷ್ಟಾಚಾರ ಮುಕ್ತ ಆಡಳಿತವೇ ಕೆಪಿಜೆಪಿ ಗುರಿ : ಉಪೇಂದ್ರ

ಜನಪ್ರತಿನಿಧಿಗಳಲ್ಲದೆ, ಎಲ್ಲಾ ನೀತಿ ನಿಯಮಗಳು ಸರ್ಕಾರಿ ಅಧಿಕಾರಿಗಳು, ನೌಕರರಿಗೂ ಅನ್ವಯವಾಗಲಿದೆ.ಸಂಪೂರ್ಣ ಪಾರರ್ದಶಕ ಹಾಗೂ ಸರಳ ಆಡಳಿತ ನಡೆಸುವ ಭರವಸೆಯನ್ನು ನೀಡಿದ್ದಾರೆ. ಸಂಭಾವ್ಯ ಪ್ರಣಾಳಿಕೆಯ ಭಾಗ -1ರಲ್ಲಿ 24 ಅಂಶಗಳಿವೆ.

1. ಸಂಪೂರ್ಣ ಪಾರದರ್ಶಕ, ಸರಳ, ಹೊಣೆಗಾರಿಕೆಯುಳ್ಳ, ಮಿತವ್ಯಯೀ ಹಾಗೂ ಪ್ರಜೆಗಳನ್ನೊಳಗೊಂಡ ಆಡಳಿತ.

2. ಪ್ರಜೆಗಳ ನೇರ ಸಂಪರ್ಕಕ್ಕಾಗಿ, ಸರ್ಕಾರದಿಂದ ಸರ್ಕಾರದ್ದೇ ಆದ ಟೆಲಿವಿಜನ್ ಚಾನಲ್, ಪ್ರತಿಯೊಂದು ಇಲಾಖೆಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಪ್ರತ್ಯೇಕವಾಗಿ ಸಾಮಾಜಿಕ ಜಾಲತಾಣಗಳು (ಫೇಸ್‍ಬುಕ್, ಟ್ವಿಟರ್, ವೆಬ್‍ಸೈಟ್, ಯುಟ್ಯೂಬ್ ಚಾನಲ್) ಮತ್ತು ಮೊಬೈಲ್ ಅಪ್ಲಿಕೇಶನ್‍ಗಳನ್ನು ಪ್ರಾರಂಭಿಸಲಾಗುವುದು.

ಪಕ್ಷದ ಪ್ರಣಾಳಿಕೆ ಕುರಿತು ಸಾರ್ವಜನಿಕರು ತಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಗಿದ್ದು, ಕೆಲವೇ ದಿನಗಳಲ್ಲಿ ಪಕ್ಷದ ಅಂತಿಮ ಹಾಗೂ ಅಧಿಕೃತ ಪ್ರಣಾಳಿಕೆಯ ಪೂರ್ಣ ಭಾಗವನ್ನು ಬಿಡುಗಡೆಗೊಳಿಸುತ್ತೇವೆ ಎಂದು ಉಪೇಂದ್ರ ಹೇಳಿದ್ದಾರೆ.

ಮೊಬೈಲ್ ಅಪ್ಲಿಕೇಶನ್‍ ಮೂಲಕ ದೂರು

ಮೊಬೈಲ್ ಅಪ್ಲಿಕೇಶನ್‍ ಮೂಲಕ ದೂರು

ಮೊಬೈಲ್ ಅಪ್ಲಿಕೇಶನ್‍ನಲ್ಲಿ ತಮ್ಮ ಕ್ಷೇತ್ರದ/ ಪ್ರದೇಶದ ಸಮಸ್ಯೆ/ ದೂರುಗಳನ್ನು (ಲಿಖಿತ, ಫೋಟೊ, ವಿಡಿಯೋ, ಆಡಿಯೋ ಮೂಲಕ) ಸಂಬಂಧಪಟ್ಟ ಇಲಾಖೆಗಳ ನೌಕರರು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ (ಗ್ರಾಮ ಪಂಚಾಯತಿ ಸದಸ್ಯರು, ಕಾರ್ಪೋರೇಟರ್) ಸಲ್ಲಿಸಬಹುದು. ಪ್ರಜೆಗಳ ದೂರನ್ನು ನಿರ್ಧಿಷ್ಟ ಕಾಲಾವಧಿಯೊಳಗೆ ಪರಿಹರಿಸಲು ಸಂಬಂಧಪಟ್ಟವರು ವಿಫಲರಾದಲ್ಲಿ (ವಿಫಲರಾದವರು ಈ ಹೊಣೆಗಾರಿಕೆಯನ್ನು ಹೊರಬೇಕು) ಆ ದೂರು ಕೂಡಲೇ ಮೇಲ್ಮಟ್ಟದ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ (ಶಾಸಕರು) ವರ್ಗಾವಣೆಗೊಳ್ಳುವುದು ಅವರು ನಿರ್ಧಿಷ್ಟ ಕಾಲಾವಧಿಯೊಳಗೆ ಆ ದೂರನ್ನು ಪರಿಹರಿಸಬೇಕು. ಈ ಪ್ರಕ್ರಿಯೆ ರಾಜ್ಯದ ಮುಖ್ಯಮಂತ್ರಿಗಳ ಕಛೇರಿವರೆಗೂ ವಿಸ್ತರಿಸಲ್ಪಟ್ಟಿರುತ್ತದೆ ಮತ್ತು ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕವಾಗಿ ಸಾರ್ವಜನಿಕವಾಗಿ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿರುತ್ತದೆ.

ಜನ ಪ್ರತಿನಿಧಿಗಳಿಗೆ ಅಂಕಗಳು

ಜನ ಪ್ರತಿನಿಧಿಗಳಿಗೆ ಅಂಕಗಳು

4. ಸಕಾಲಕ್ಕೆ ಸಮಸ್ಯೆಗಳು ಹಾಗೂ ದೂರುಗಳನ್ನು ಉತ್ತಮವಾಗಿ ಪರಿಹರಿಸಿದಂತಹ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕಾರ್ಯಗಳನ್ನು ಪುರಸ್ಕರಿಸಲಾಗುವುದು ಮತ್ತು ಅಂಕಗಳನ್ನು ನೀಡಲಾಗುವುದು. ಈ ಅಂಕಗಳೇ ಚುನಾಯಿತ ಜನ ಪ್ರತಿನಿಧಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಮುಖ್ಯ ಅರ್ಹತೆಗಳಾಗಿರುತ್ತವೆ ಮತ್ತು ಅಧಿಕಾರಿಗಳಿಗೆ ಈ ಅಂಕಗಳೇ ಬಡ್ತಿಗಳಿಗೆ ಮಾನದಂಡವಾಗಿರುತ್ತವೆ. (ಕಾರ್ಪೋರೇಟ್ ಟಿಕೆಟಿಂಗ್ ಟೈಮ್‍ಲೈನ್ ಟಾರ್ಗೆಟ್ಸ್ ರೀತಿ)

ನೌಕರರಿಗೆ ವೇತನದಲ್ಲಿ ಕಡಿತ

ನೌಕರರಿಗೆ ವೇತನದಲ್ಲಿ ಕಡಿತ

5. ಕನಿಷ್ಟ ಹಾಗೂ ನಿಗದಿತ ಅಂಕಗಳನ್ನು ಉತ್ತಮ ಕಾರ್ಯರೀತಿಯಿಂದ ಪಡೆಯತಕ್ಕದ್ದು, ತಪ್ಪಿದಲ್ಲಿ ಶಿಸ್ತು ಕ್ರಮಗಳೊಂದಿಗೆ ವೇತನದಲ್ಲಿ ಕಡಿತ ಸಹಾ ಮಾಡಲಾಗುತ್ತದೆ.
ಕಡ್ಡಾಯವಾಗಿ ಪ್ರತಿ ಸರ್ಕಾರಿ ನೌಕರರು ಪೂರ್ಣ ಹೆಸರು, ಹುದ್ದೆ, ಇಲಾಖೆಯ ಬ್ಯಾಡ್ಜ್ ಗಳನ್ನು ಮತ್ತು ಸಚಿವಾಲಯಗಳ ಅನುಸಾರ ಏಕರೂಪದ ಬಣ್ಣದ ಸಮವಸ್ತ್ರವನ್ನು ಧರಿಸಿರುತ್ತಾರೆ. ಪ್ರಜೆಗಳು ಆಯಾ ಸರ್ಕಾರಿ ಇಲಾಖೆಗಳ ನೌಕರರನ್ನು ಗುರುತಿಸಲು ಈ ಪ್ರಕ್ರಿಯೆಯು ನೆರವಾಗುತ್ತದೆ.

ಬಯೋಮೆಟ್ರಿಕ್ ಹಾಜರಾತಿ

ಬಯೋಮೆಟ್ರಿಕ್ ಹಾಜರಾತಿ

7. ಎಲ್ಲಾ ಸರ್ಕಾರಿ ಕಛೇರಿಗಳು ಹಾಗೂ ಇಲಾಖೆಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ (ರಿಜಿಸ್ಟರ್), ವೈಫೈ, ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಆಳವಡಿಸಲಾಗುತ್ತದೆ ಮತ್ತು ಸಾರ್ವಜನಿಕರಿಗೆ ಪ್ರದೇಶಗಳಿಗೆ ಅನುಸಾರವಾಗಿ ವೀಕ್ಷಣಾ ಸೌಲಭ್ಯ ಕಲ್ಪಿಸಲಾಗುವುದು.
8. ವಿಧಾನಸೌಧದಲ್ಲಿ ನಡೆಯುವಂತಹ ಪ್ರತಿಯೊಂದು ಚಟುವಟಿಕೆಗಳು, ಯೋಜನೆಗಳು, ಕಾಮಗಾರಿಗಳು, ಚರ್ಚೆಗಳು ಹಾಗೂ ಅಧಿವೇಶನಗಳು ಅಧಿಕೃತ ದಾಖಲೆ, ಪುರಾವೆಗಳು ಹಾಗೂ ದೃಶ್ಯ ಮಾಧ್ಯಮಗಳ ಸಾಕ್ಷಿ & ದಾಖಲೆಗಳೊಂದಿಗೆ ದೊಡ್ಡ ಪರದೆಯ ಮೇಲೆ ಬಿತ್ತರಿಸಿ ಅದರ ಆಧಾರದ ಮೇಲೆಯೇ ಚರ್ಚೆ ನಡೆಸಬೇಕು.

ನೇರಪ್ರಸಾರದೊಂದಿಗೆ ಅಧಿವೇಶನ

ನೇರಪ್ರಸಾರದೊಂದಿಗೆ ಅಧಿವೇಶನ

ಎಲ್ಲಾ ಮಂತ್ರಿಗಳು, ಶಾಸಕರು, ಕಾರ್ಪೊರೇಟರ್‍ಗಳು, ತಾಲೂಕು ಮತ್ತು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಲ್ಲಾ ಸರ್ಕಾರಿ ಅಧಿಕಾರಿಗಳು ಯೋಜನೆಗಳ ಅಧಿಕೃತ ದಾಖಲೆ-ಪುರಾವೆಗಳೊಂದಿಗೆ ದೃಶ್ಯ ಮಾಧ್ಯಮಗಳ ಮುಖಾಂತರ ನೇರಪ್ರಸಾರದೊಂದಿಗೆ ಅಧಿವೇಶನದಲ್ಲಿ ಭಾಗವಹಿಸಬೇಕು. ಹಾಗೂ ಈ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ನೇರ ಪ್ರಸಾರದಲ್ಲಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಪ್ರಜಾ ಪ್ರಭುಗಳು ವೀಕ್ಷಿಸುವಂತೆ ಬಿತ್ತರಿಸಬೇಕು ಹಾಗೂ ಸದನದ ಪ್ರಕ್ರಿಯೆಗಳಲ್ಲಿ ಪ್ರಜೆಗಳು ದೂರವಾಣಿ ಮುಖಾಂತರ ನೇರವಾಗಿ ಚರ್ಚೆಯಲ್ಲಿ ಭಾಗವಹಿಸಬಹುದು.

ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆ

ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆ

ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಅದರ ಪ್ರತಿಯೊಂದು ಟೆಂಡರ್ ಪ್ರಕ್ರಿಯೆಗಳ ಭಾಗವಹಿಸುವಿಕೆಯು ಸಂಪೂರ್ಣವಾಗಿ ಆನ್‍ಲೈನ್‍ನಲ್ಲೇ ಚರ್ಚೆ ಮತ್ತು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಮತ್ತು ಟೆಂಡರ್ ಪಡೆದವರ ಮಧ್ಯೆ ವೈಯಕ್ತಿಕ ಸಂಪರ್ಕಗಳನ್ನು ನಿರ್ಬಂಧಿಸಲಾಗುವುದು ಹಾಗೂ ಟೆಂಡರ್ ಪ್ರಕ್ರಿಯೆಗಳ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಅಂತರ್ಜಾಲದ ಮುಖಾಂತರ ಎಲ್ಲರಿಗೂ ಬಹಿರಂಗ ವೀಕ್ಷಣೆಗೆ ಅವಕಾಶವಿರುತ್ತದೆ.

ಕಾರ್ಮಿಕರ ಹಾಜರಾತಿ ದಾಖಲೆ

ಕಾರ್ಮಿಕರ ಹಾಜರಾತಿ ದಾಖಲೆ

ಯಾವುದೇ ಕಂಟ್ರಾಕ್ಟರ್ ಗಳಿಗೆ ಕೊಡಲಾಗುವ ಯೋಜನೆಗಳ ಖರ್ಚು- ವೆಚ್ಚಗಳನ್ನು ಅಧಿಕೃತ ದೃಶ್ಯ ದಾಖಲೆಗಳ(ಬಿಲ್) ಮತ್ತು ಹಾಜರಾತಿ ವಿವರಣೆಗಳ ಆಧಾರದ ಮೇಲೆಯೇ ಕೊಡಲಾಗುವುದು. ಪ್ರತಿಯೊಬ್ಬ ಕಾರ್ಮಿಕರ ಹಾಜರಾತಿ ದಾಖಲೆಗಳ(ಬಯೋಮೆಟ್ರಿಕ್, ಸಿಸಿ ಟಿವಿ ಕ್ಯಾಮೆರಾ, ಆರ್.ಎಫ್ ಐಡಿ) ಮೂಲಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಬಹಿರಂಗಪಡಿಸತಕ್ಕದ್ದು. ಯೊಜನೆಗಳ ಪಾವತಿ ಹಣಕ್ಕಾಗಿ ಸರ್ಕಾರದ ಯಾವುದೇ ಅಧಿಕಾರಿಗಳನ್ನು ನೇರವಾಗಿ ಭೇಟಿ ಮಾಡುವ ಅವಶ್ಯಕತೆ ಇರುವುದಿಲ್ಲ.

ದೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿ

ದೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿ

12. ಪ್ರತಿಯೊಂದು ಸರ್ಕಾರಿ ಯೋಜನೆಗಳು ಹಾಗೂ ಕಾಮಗಾರಿಗಳನ್ನು ಮಾಡುವ ಅಧಿಕಾರಿಗಳು, ಕಂಟ್ರಾಕ್ಟರ್‍ಗಳು ಅದರ ಖರ್ಚು-ವೆಚ್ಚ, ಕಾಲಾವಧಿ ಹಾಗೂ ಹಂತ ಹಂತವಾದ ಬೆಳವಣಿಗೆಗಳ ದಾಖಲೆಗಳೊಂದಿಗೆ ಪ್ರತಿ ಹಂತಗಳ ನೇರ ಪ್ರಸಾರವನ್ನು ಪಾರದರ್ಶಕವಾಗಿ ಟಿ.ವಿ ಹಾಗೂ ಸಾಮಾಜಿಕ ಜಾಲತಾಣಗಳೊಂದಿಗೆ ಅಂತರ್ಜಾಲದ ಮುಖಾಂತರ ಎಲ್ಲರಿಗೂ ಬಹಿರಂಗ ವೀಕ್ಷಣೆಗೆ ಅವಕಾಶವಿರುತ್ತದೆ.
13. ಕಡ್ಡಾಯವಾಗಿ ಎಲ್ಲಾ ಜನ ಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಅವರವರ ದೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂಗಡವಾಗಿ ಅವರವರ ಸಾಮಾಜಿಕ ಜಾಲತಾಣಗಳಲ್ಲಿ, ಅವರವರ ಕ್ಷೇತ್ರದ ಮೊಬೈಲ್ ಅಪ್ಲಿಕೇಶನ್‍ಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು.

ನೇರ ಸಂವಾದಗಳು ತಿಂಗಳಿಗೊಮ್ಮೆ

ನೇರ ಸಂವಾದಗಳು ತಿಂಗಳಿಗೊಮ್ಮೆ

14. ಪ್ರಜೆಗಳು ಹಾಗೂ ಚುನಾಯಿತ ಸದಸ್ಯರ, ಸರ್ಕಾರಿ ಅಧಿಕಾರಿಗಳ ನಡುವಿನ ನೇರ ಸಂವಾದಗಳು ತಿಂಗಳಿಗೊಮ್ಮೆ ಅವರವರ ಕ್ಷೇತ್ರಗಳಲ್ಲಿ ಟಿವಿ ಚಾನಲ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ದೃಶ್ಯ ದಾಖಲೆಗಳೊಂದಿಗೆ ಪ್ರಸಾರಗೊಳ್ಳುತ್ತವೆ.
15. ನಿರಂತರವಾದ ನಿಗ್ರಹಣೆ ಮತ್ತು ಅನಿರೀಕ್ಷಿತ ದಾಳಿಗಳನ್ನು ಕಾಲಕಾಲಕ್ಕೆ ಸಂಬಂಧಿಸಿದ ಸಚಿವರು, ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳು ನಡೆಸುತ್ತಿರುತ್ತಾರೆ, ಈ ಪ್ರಕ್ರಿಯೆಗಳು ವಿಡಿಯೋ ರೆಕಾರ್ಡಿಂಗ್ ಆಗುತ್ತದೆ ಹಾಗೂ ಪ್ರಜೆಗಳಿಗೆ ನೇರ ಪ್ರಸಾರದ ವ್ಯವಸ್ಥೆ ಇರುತ್ತದೆ.
16. ಆಡಳಿತ ಸರ್ಕಾರವು ಯಾವುದೇ ಸರ್ಕಾರೀ ವರ್ಗಾವಣೆಗಳನ್ನು ಮಾಡುವಾಗ ಸರಿಯಾದ ಕಾರಣ, ದಾಖಲೆಗಳು ಮತ್ತು ಸಾಕ್ಷಿಗಳನ್ನು ಕೊಟ್ಟು ನೇರ ಪ್ರಸಾರದೊಂದಿಗೆ ವರ್ಗಾವಣೆಗಳನ್ನು ಮಾಡಬೇಕು.

ಆಯ್ಕೆಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರ

ಆಯ್ಕೆಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರ

17. ಎಲ್ಲಾ ಸರ್ಕಾರೀ ಇಲಾಖೆಗಳ ಸಂದರ್ಶನಗಳು ಹಾಗೂ ಆಯ್ಕೆಗಳ ಪ್ರಕ್ರಿಯೆಗಳನ್ನು ನೇರ ಪ್ರಸಾರದೊಂದಿಗೆ ಪ್ರಜೆಗಳಿಗೆ ತೆರೆದಿಡಲಾಗುವುದು.
18. ಎಲ್ಲಾ ಸರ್ಕಾರೀ ತೆರಿಗೆ ಸಂಗ್ರಹಗಳು ಮತ್ತು ಆದಾಯಗಳು ದಾಖಲೆ ಸಹಿತವಾಗಿ ಪ್ರದೇಶಗಳಿಗೆ ಅನುಸಾರವಾಗಿ ತಿಂಗಳಿಗೊಮ್ಮೆ ಸಾರ್ವಜನಿಕರಿಗೆ ತೆರೆದಿಡಲಾಗುವುದು.
19. ಚುನಾಯಿತ ಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ ನೀಡುವ ವೇತನಗಳು, ಸೌಲಭ್ಯಗಳು ಮತ್ತು ಎಲ್ಲಾ ಸರ್ಕಾರಿ ವಸತಿ, ಪ್ರಯಾಣ, ವೈದ್ಯಕೀಯ ಮತ್ತು ಎಲ್ಲಾ ಇತರ ಭತ್ಯೆ, ವೆಚ್ಚ ಹಾಗೂ ಪ್ರಯೋಜನಗಳು ಸರಿಯಾದ ಕಾರಣ ಮತ್ತು ದಾಖಲೆಗಳೊಂದಿಗೆ ಸಾರ್ವಜನಿಕರಿಗೆ ಜಾಲತಾಣಗಳಲ್ಲಿ ತೆರೆದಿಟ್ಟಿದ್ದರೆ ಮಾತ್ರ ದೊರೆಯುತ್ತದೆ.

ಕಾನೂನು-ತಿದ್ದುಪಡಿಗಳನ್ನು ಮಾಡಲಾಗುವುದು

ಕಾನೂನು-ತಿದ್ದುಪಡಿಗಳನ್ನು ಮಾಡಲಾಗುವುದು

21. ಸ್ವಯಂಪ್ರೇರಿತರಾಗಿ ಬಿಟ್ಟುಕೊಡಲಾದ ಪಿಂಚಣಿಗಳಿಂದ ಸಂಗ್ರಹಗೊಳ್ಳುವ ಹಣವನ್ನು ವೃದ್ದಾಶ್ರಮಗಳು ಹಾಗೂ ವಸತಿ ರಹಿತರ ಅಭಿವೃಧ್ಧಿಗಳಿಗಾಗಿ ಬಳಸಲಾಗುವುದು.
22. ಎಲ್ಲಾ ಸರ್ಕಾರಿ ಯೋಜನೆಗಳು ಸಂಪೂರ್ಣಗೊಂಡು ಸಂಬಂಧಪಟ್ಟ ಅಧಿಕಾರಿಗಳ ಪರೀಕ್ಷೆ-ಅನುಮತಿ ನಂತರ ಸಾರ್ವಜನಿಕರ ಬಳಕೆಗೆ ನೇರವಾಗಿ ತೆರೆದಿಡಲಾಗುವುದು, ಯಾವುದೇ ರೀತಿಯ ಲೋಕಾರ್ಪಣಾ ಸಮಾರಂಭ, ಸಂಭ್ರಮ, ಉದ್ಗಾಟನೆಗಳನ್ನು ನಡೆಸುವುದು ಹಾಗೂ ಜನಪ್ರತಿನಿಧಿಗಳು/ ಅಧಿಕಾರಿಗಳು ಭಾಗವಹಿಸುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗುತ್ತದೆ.
23. ಕರ್ನಾಟಕ ಶಾಸಕಾಂಗ ವೇತನಗಳು: "ಪಿಂಚಣಿ ಮತ್ತು ಭತ್ಯೆ ಆಕ್ಟ್ 1952" ಅನ್ನು ಸರಳಗೊಳಿಸುವಂತೆ ಕಾನೂನು ತಿದ್ದುಪಡಿ ಮಾಡಲಾಗುವುದು.
24. ಈ ಮೇಲ್ಕಂಡ ಅಂಶಗಳನ್ನು ಜಾರಿಗೆ ತರಲು ಬೇಕಾಗುವಂತಹ ಅವಶ್ಯಕ ಕಾನೂನು-ತಿದ್ದುಪಡಿಗಳನ್ನು ಮಾಡಲಾಗುವುದು.

English summary
Actor Upendra's Karnataka Pragnyavanta Janata Paksha (KPJP), on Sunday released proposed manifesto for upcoming assembly election in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X