ಜ.21ರಂದು 'ಅಂಗಳಕ್ಕೆ ಹೂ ಹಸೆ' ಸಂಗೀತ ಕಾರ್ಯಕ್ರಮ

Written By: Ramesh
Subscribe to Oneindia Kannada

ಬೆಂಗಳೂರು, 18 : ಬೆಂಗಳೂರಿನ ಚಿಕ್ಕಲ್ಲಸಂದ್ರದ ಸಿ. ವಿಜೇತ್(ರಮ್ಯ ವಿಜೇತ್) ಅವರ ಮನೆಯಂಗಳದಲ್ಲಿ ಅಂಗಳಕ್ಕೆ ಹೂ ಹಸೆಯ 31ನೇ ಭಾವಗೀತೆಗಳ ಕಾರ್ಯಕ್ರಮ ಇದೇ ಜನವರಿ 21ರಂದು(ಶನಿವಾರ) ಆಯೋಜಿಸಲಾಗಿದೆ.

ಕಳೆದ 30 ತಿಂಗಳುಗಳಿಂದ ಯಶಸ್ವಿಯಾಗಿ ಹೊರ ಹೊಮ್ಮತ್ತಿರುವ ಈ ಅಂಗಳಕ್ಕೆ ಹೂ ಹಸೆಯ 31ನೇ ಭಾವಗೀತೆಗಳ ಕಾರ್ಯಕ್ರಮ ಉಪಾಸನಾ ಟ್ರಸ್ಟ್ ವತಿಯಿಂದ ನಡೆಯಲಿದೆ.

Upasana Trust organized 31month 'Angalakee Hoo Hase' light music on January 21

ಈ ಕಾರ್ಯಕ್ರಮದಲ್ಲಿ ಉಪಾಸನಾ ಮೋಹನ್, ರಮ್ಯ ವಿಜೇತ್, ಚಿನ್ಮಯಿ ಚಂದ್ರಶೇಖರ್, ಮೇಘನಾ ಭಟ್, ಶಾಂಭವಿ ರಂಗನಾಥ್, ಎಸ್, ಐಶ್ವರ್ಯ ಅವರು ತಮ್ಮ ಸುಮಧುರ ಕಂಠದಿಂದ ಗಾಯನಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಇದರಿಂದ ಸಂಗೀತ ಪ್ರಿಯರು ಈ ಅಂಗಳಕ್ಕೆ ಹೂ ಹಸೆ ಬಾವಗೀತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಉಪಾಸನಾ ಟ್ರಸ್ಟ್ ವಿನಂತಿಸಿದೆ.

ವಿಳಾಸ: 137. "ಸ್ಪೂರ್ತಿ ರೆಸಿಡೆನ್ಸಿ", 3ನೇ ಮುಖ್ಯ ರಸ್ತೆ 4ನೇ ಅಡ್ಡ ರಸ್ತೆ, ರಾಮಾಂಜನೇಯನಗರ, ಚಿಕ್ಕಲ್ಲಸಂದ್ರ ಬೆಂಗಳೂರು-61 ಹೆಚ್ಚಿನ ಮಾಹಿತಿಗಾಗಿ 7760895895 ನಂಬರ್ ಗೆ ಸಂಪರ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Upasana Trust organized 31 month 'Angalakee Hoo Hase' Light Music on January 21, Saturday at Bengaluru Chikkalasandra.
Please Wait while comments are loading...