ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿವಿ ಉತ್ತರ ಪತ್ರಿಕೆ ಬಾರ್‌ನಲ್ಲಿಟ್ಟಿದ್ದು ಉಪನ್ಯಾಸಕ!

|
Google Oneindia Kannada News

ಬೆಂಗಳೂರು, ಡಿ.15 : ಬೆಂಗಳೂರು ವಿವಿ ಉತ್ತರ ಪತ್ರಿಕೆಗಳು ಬಾರ್‌ನಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನ್ಯಾಸಕನನ್ನು ಪೊಲೀಸರು ಬಂಧಿಸಿದ್ದಾರೆ. ಬಾರ್‌ನಲ್ಲಿ ಪತ್ರಿಕೆ ಎಸೆದಿದ್ದ ಈತ ನಂತರ ಪೊಲೀಸರಿಗೆ ಮತ್ತು ವಿವಿಗೆ ಫೋನ್‌ ಮಾಡಿ ಮಾಹಿತಿ ನೀಡಿದ್ದ.

ಬಂಧಿತ ಉಪನ್ಯಾಸಕನನ್ನು ವಿಜಯನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶಿವಕುಮಾರ್ (38) ಎಂದು ಗುರುತಿಸಲಾಗಿದೆ. ಜೀವನ್‌ಭೀಮಾನಗರದ ನಿವಾಸಿ ಶಿವಕುಮಾರ್ ಅವರನ್ನು ಬೆಂಗಳೂರು ವಿವಿಯ ಪದವಿ ಪರೀಕ್ಷಾ ವಿಭಾಗದ ಅಧಿಕಾರಿಯಾಗಿ ಮಾರತ್‌ಹಳ್ಳಿಯ ನ್ಯೂ ಹೊರೈಜಾನ್ ಕಾಲೇಜಿಗೆ ನಿಯೋಜಿಸಲಾಗಿತ್ತು.

Bangalore University

ನ.7ರಿಂದ 26ರ ವರೆಗೆ ನಡೆದ ಪದವಿ ಪರೀಕ್ಷೆಯ ಸಮಯದಲ್ಲಿ ನ್ಯೂ ಹೊರೈಜಾನ್ ಕಾಲೇಜಿನ ಪ್ರಾಂಶುಪಾಲರ ಜತೆ ವೈಯಕ್ತಿಕ ದ್ವೇಷ ಬೆಳೆಸಿಕೊಂಡ ಶಿವಕುಮಾರ್, ಕಾಲೇಜಿಗೆ ಮತ್ತು ಪ್ರಾಂಶುಪಾಲರಿಗೆ ಕೆಟ್ಟ ಹೆಸರು ತರಬೇಕೆಂಬ ಉದ್ದೇಶದಿಂದ ಈ ಕೃತ್ಯ ನಡೆಸಿದ್ದರು. [ಬಾರ್ ನಲ್ಲಿ ಬೆಂಗಳೂರು ವಿವಿ ಉತ್ತರ ಪತ್ರಿಕೆ]

ಫೋನ್ ಮಾಡಿ ಸಿಕ್ಕಿಬಿದ್ದ : ಡಿ.2 ರಂದು ಎಚ್‌ಎಎಲ್ ಪೊಲೀಸ್ ಠಾಣೆಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ ಮಾರತ್‌ಹಳ್ಳಿ ಸಮೀಪದ ತ್ರಿವೇಣಿ ವೈನ್ ಶಾಪ್‌ನಲ್ಲಿ ಬೆಂಗಳೂರು ವಿವಿಗೆ ಸೇರಿದ ನಾಲ್ಕು ಖಾಲಿ ಉತ್ತರ ಪತ್ರಿಕೆಗಳು ಇದೆ ಎಂದು ಮಾಹಿತಿ ನೀಡಿದ್ದರು. [ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ?]

ತ್ರಿವೇಣಿ ವೈನ್ ಶಾಪ್‌ನಲ್ಲಿ ಉತ್ತರ ಪತ್ರಿಕೆ ಇಟ್ಟು ಹೋಗಿದ್ದ ಶಿವಕುಮಾರ್, ಬಳಿಕ ಕಾಯಿನ್ ಬಾಕ್ಸ್‌ನಿಂದ ಪೊಲೀಸ್ ಠಾಣೆಗೆ ಮತ್ತು ಬೆಂಗಳೂರು ವಿವಿಗೆ ಮಾಹಿತಿ ಈ ಕುರಿತು ಮಾಹಿತಿ ನೀಡಿದ್ದ ಮತ್ತು ಘಟನೆಗೂ ತನಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಯಿನ್‌ಬೂತ್ ಸುತ್ತಮುತ್ತ ಹಾಕಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಶಿವಕುಮಾರ್ ಅಲ್ಲಿಂದ ಕರೆ ಮಾಡಿರುವುದು ತಿಳಿದುಬಂದಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬಗ್ಗೆ ಮಾಹಿತಿ ನೀಡಿದ್ದಾನೆ.

English summary
Four blank answer sheets of Bengaluru University that were given to New Horizon College, Marathalli, were recently found in a bar. HAL police arrested lecturer Shivakumar in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X