ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಶೀಘ್ರ ಸಾರ್ವತ್ರಿಕ ಆರೋಗ್ಯ ಯೋಜನೆ ಜಾರಿ

|
Google Oneindia Kannada News

ಬೆಂಗಳೂರು, ಜನವರಿ 3 : ಕೇಂದ್ರ ಸರ್ಕಾರ ಈ ಬಾರಿ ತನ್ನ 2018-19ನೇ ಸಾಲಿನ ಬಜೆಟ್ ನಲ್ಲಿ ಸಾರ್ವತ್ರಿಕ ಆರೋಗ್ಯ ಯೋಜನೆ ಪ್ರಕಟಿಸಿದ ಬೆನ್ನಲ್ಲೇ ಬಹುದಿನಗಳಿಂದ ನೆನಗುದಿಗೆ ಬಿದ್ದಿದ್ದ ರಾಜ್ಯ ಸರ್ಕಾರದ ಯೂನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ ಜಾರಿಗೆ ರಾಜ್ಯ ಆರೋಗ್ಯ ಇಲಾಖೆಯೂ ಮುಂದಾಗಿದೆ.

ರಾಜ್ಯದ 1.43 ಕೋಟಿ ಕುಟುಂಬಗಳ ಆರೋಗ್ಯಕ್ಕೆ ರಕ್ಷಣೆ ಭಾಗ್ಯ ಕಲ್ಪಿಸುವ ಸಾರ್ವತ್ರಿಕ ಆರೋಗ್ಯ ಯೋಜನೆಯು ಫೆಬ್ರವರಿ ಮೂರನೇ ವಾರದಲ್ಲಿ ಜಾರಿಗೆ ಬರಲಿದೆ. ದೇಶದಲ್ಲೇ ಮೊದಲ ಬಾರಿಗೆ ರೂಪಿಸಿದ ಈ ಯೋಜನೆಗೆ ಸುಮಾರು 1200-1300 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವಿನಿಯೋಗಿಲಿದೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.

ಶೇ.೭೦ ರಷ್ಟು ದ್ವಿತೀಯ ಹಂತದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆತರೆ , ತೃತೀಯ ಹಂತದ ಶೇ.೭೦ರಷ್ಟು ಚಿಕಿತ್ಸೆ ಸರ್ಕಾರ ಖಾಸಗಿಯವರನ್ನು ಅವಲಂಭಿಸಬೇಕಿದೆ. ಈ ಆಸ್ಪತ್ರೆಗಳಿಗೆ ಚಿಕಿತ್ಸೆ ವೆಚ್ಚ ನಿಗದಿಪಡಿಸಿರುವ ಸಂಬಂಧ ಕೆಪಿಎಂಇ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈಗಾಗಲೇ ದರ ನಿಗದಿಗೆ ಸಂಬಂಧಪಟ್ಟ ಸಮಿತಿ ರಚಿಸಲಾಗಿದೆ ಎಂದರು.

Universal health card scheme will impliment from February third week

ಖಾಸಗಿ ಆಸ್ಪತ್ರೆಗಳ ಬಗ್ಗೆ ನಮಗೆ ದ್ವೇಷವಿಲ್ಲ. ಅವರಿಗೂ ನಿಯಂತ್ರಣ ಇರಬೇಕು. ಅನಿಯಂತ್ರಿತವಾದರೆ ಬಡವರ ಬದುಕು ಕಷ್ಟಕ್ಕೆ ಸಿಲುಕುತ್ತಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದುವರೆಗೆ ಜಾರಿಯಲ್ಲಿದ್ದ11 ಯೋಜನೆಗಳನ್ನು ಸಾರ್ವತ್ರಿಕ ಆರೋಗ್ಯ ಯೋಜನೆಯಡಿ ಜಾರಿಗೆ ತರಲಾಗಿದೆ.
ಸದ್ಯ ಈ ಯೋಜನೆಯ ನಿರ್ವಹಣೆಯನ್ನು ಸುರ್ವ ಆರೋಗ್ಯ ಸುರಕ್ಷಾ ಟ್ರಸ್ಟ್ ನಿರ್ವಹಿಸಲಿದೆ. ಮುಂದಿನ ಮಾರ್ಚ್ ಒಳಗಾಗಿ ಎಲ್ಲ ಆಆಸ್ಪತ್ರೆಗಳಲ್ಲೂ ಎಂಆರ್ ಐ, ಸಿಟಿ ಸ್ಕ್ಯಾನ್ ಸೌಲಭ್ಯ ಕಲ್ಪಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿ ಅಲ್ಟ್ರಾಸೌಂಡ್ ವ್ಯವಸ್ಥೆ ಐಸಿಯು ವ್ಯವಸ್ಥೆ ಮಾಡಲಾಗಿದೆ ಎಂದರು.

English summary
Health and family welfare minister KR Ramesh kumar said that the most awaited Universal health card scheme will be implemented from third week of February which will provide free health service to all citizens of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X