ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ಮತದಾರರಿಲ್ಲದಿದ್ದರೆ ಫಲಿತಾಂಶ ಏರುಪೇರಾಗಲಿದೆ : ರಾಜೀವ್ ಚಂದ್ರಶೇಖರ್

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ಕರ್ನಾಟಕ ವಿಧಾನಸಭಾ ಚುನಾವಣೆಗೆ ಪಕ್ಷಗಳು, ಆಯೋಗ ಸಿದ್ಧತೆ ಆರಂಭಿಸಿರುವ ಬೆನ್ನಲ್ಲೆ ಹೊಸ ಮತದಾರರಿಗೆ ಜಾಗೃತ ಮೂಡಿಸುವ ಕೆಲಸದಲ್ಲಿ ಯುನೈಟೆಡ್ ಬೆಂಗಳೂರು ಸಂಸ್ಥೆ ತೊಡಗಿಕೊಂಡಿದೆ.

ವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿವೋಟರ್ ಐಡಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ಜಾಗೃತಿ ಅಭಿಮಾನದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, 2018ರ ಚುನಾವಣೆಯಲ್ಲಿ ಶೇ 70 ರಷ್ಟು ಮತದಾನ ಕಾಣುವ ಗುರಿ ಹೊಂದಲಾಗಿದೆ ಎಂದರು.

United Bengaluru Register to Vote Campaign at Mount Carmel College

ಮೊದಲ ಬಾರಿ ಮತದಾನ ಮಾಡುವವರು ಅಲಭ್ಯರಾದರೆ, ಚುನಾವಣೆಯಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಯು ಒಟ್ಟು ಮತಗಳಲ್ಲಿ ಶೇ 17ರಷ್ಟು ಮಾತ್ರ ಪಡೆಯಲು ಸಾಧ್ಯ. ಇದರಿಂದ ಬೇಡದೆ ಇರುವ ವ್ಯಕ್ತಿಗಳು ಅಧಿಕಾರಕ್ಕೆ ಬರುವ ಸಂಭವ ಹೆಚ್ಚು. ಹೀಗಾಗಿ ವ್ಯವಸ್ಥೆ ಬದಲಾಯಿಸಲು ಮೊದಲ ಬಾರಿ ಮತ ಹಾಕುವವರ ಸಂಖ್ಯೆ ಹೆಚ್ಚಳವಾಗಬೇಕಿದೆ ಎಂದು ಸಂಸದ ರಾಜೀವ್ ಹೇಳಿದರು.

ಶೇ50ರಷ್ಟು ಮಂದಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿರುವುದಿಲ್ಲ. ಇನ್ನು ನೋಂದಣಿ ಮಾಡಿಸಿದವರಲ್ಲಿ ಶೇ 50ರಷ್ಟು ಮಂದಿ ಮತದಾನ ಮಾಡಲು ಮುಂದಾಗುವುದಿಲ್ಲ. ಈ ಪದ್ಧತಿಯನ್ನು ಈಗ ಬದಲಾಯಿಸಬೇಕಿದೆ.

United Bengaluru Register to Vote Campaign at Mount Carmel College

ಸಾಮಾಜಿಕ ಕಾರ್ಯಕರ್ತ, ಚುನಾವಣಾ ವಿಶ್ಲೇಷಕ ಪಿ.ಜಿ ಭಟ್: ಕಾಲೇಜು ಚುನಾವಣೆಗಳಲ್ಲಿ ಶೇ 99.99ರಷ್ಟು ಮತದಾನ ಕಾಣಬಹುದು. ಆದರೆ, ಅಸೆಂಬ್ಲಿ ಚುನಾವಣೆಯಲ್ಲಿ ನೀರಸವಾಗಿರುತ್ತದೆ. ಈ ಮುಂಚೆ ಮತದಾನದ ವಯೋಮಿತಿ 21 ಇತ್ತು. ಈಗ 18 ಇದೆ. ಚಿಕ್ಕ ವಯಸ್ಸಿಗೆ ದೊಡ್ಡ ಜವಾಬ್ದಾರಿಯನ್ನು ಹೊರುತ್ತಿದ್ದೇವೆ ಎಂಬ ಹೆಮ್ಮೆ ನಿಮ್ಮಲ್ಲಿರಬೇಕು ಎಂದರು.

English summary
The absence of first-time voters in elections leads to a candidate winning with only 17% of total votes. It allows wrong people to come to power said MP Rajeev Chandrashekar during United Bengaluru Register to Vote Campaign at Mount Carmel College.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X