ಬೆಂಗಳೂರು: ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ

Written By: Ramesh
Subscribe to Oneindia Kannada

ಬೆಂಗಳೂರು, ಫೆಬ್ರವರಿ, 14 : ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 14ರಿಂದ ಆರಂಭವಾಗಿರುವ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ-2017ನಲ್ಲಿ ಉಕ್ಕಿನ ಹಕ್ಕಿಗಳು ನೋಡುಗರ ಮೈನವಿರೇಳುವಂತೆ ಮಾಡಿದವು.

ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಉಕ್ಕಿನ ಹಕ್ಕಿಗಳ ಹಾರಾಟ, ಚಮತ್ಕಾರ ಪ್ರದರ್ಶನಕ್ಕೆ ಮಂಗಳವಾರ ಬೆಳಗ್ಗೆ ಚಾಲನೆ ನೀಡಿದರು. 11ನೇ ಏರೋ ಇಂಡಿಯಾ ಕಾರ್ಯಕ್ರಮಕ್ಕೆ ಈ ವರ್ಷ 'ಮೇಕ್ ಇನ್ ಇಂಡಿಯಾ' ಸ್ಪರ್ಶ ನೀಡಲಾಗಿದೆ.

ಇಂದಿನಿಂದ ಐದು ದಿನಗಳವರೆಗೆ ನಡೆಯುವ ಆಗಸದಲ್ಲಿ ಉಕ್ಕಿನ ಹಕ್ಕಿಗಳ ಹಾರಾಟ ಜನರ ಮನಸೂರೆಗೊಳ್ಳಲಿವೆ. ಮೊದಲ ದಿನವಾದ ಮಂಗಳವಾರ ದೇಶಿ ನಿರ್ಮಿತ ಹಾಗೂ ವಿದೇಶಿ ವಿಮಾನಗಳ ಹಾರಾಟ ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ಸಾವಿರಾರು ಮಂದಿಯ ಉಸಿರು ಬಿಗಿ ಹಿಡಿಯುವಂತೆ ಮಾಡಿದವು.

ದೇಶಿಯ ಸೂರ್ಯಕಿರಣ್ ಯುದ್ಧ ವಿಮಾನಗಳು, ತೇಜಸ್, ಸಾರಂಗ್, ಸ್ವೀಡನ್ ನ ಸ್ಕ್ಯಾಂಡಿನೇವಿಯನ್, ಇಂಗ್ಲೆಂಡಿನ ಯಾಕೋವ್ಲೇವ್ ಹಾಗೂ ಫ್ರಾನ್ಸ್ ನ ರಫೇಲ್ ಯುದ್ಧವಿಮಾನಗಳು ಪ್ರಮುಖ ಆಕರ್ಷಣೆಯಾಗಿದ್ದವು. ಇದರ ಇನ್ನಷ್ಟು ಜಲಕ್ ಮುಂದೆ ಇದೆ ಓದಿ

ದೇಶಿ ಸಾರಂಗ್ ಹೆಲಿಕಾಪ್ಟರ್ ಗಳ ಪ್ರದರ್ಶನ

ದೇಶಿ ಸಾರಂಗ್ ಹೆಲಿಕಾಪ್ಟರ್ ಗಳ ಪ್ರದರ್ಶನ

ಸಾರಂಗ್ ಹೆಲಿಕಾಪ್ಟರ್ ಗಳು ಕೇಸರಿ-ಬಿಳಿ-ಹಸಿರು ಬಣ್ಣಸೂಸುತ್ತ ಸಾಗಿದ್ದು ಮುದ ನೀಡಿತು. ಹೆಲಿಕಾಪ್ಟರ್ ಗಳು ಒಂದು ಸಾಗುತ್ತಿದ್ದಾಗಲೇ ಮತ್ತೊಂದು ಹೆಲಿಕಾಪ್ಟರ್ ಅದರ ಕೆಳಗೆ ನುಸುಳುವ ವಿನ್ಯಾಸ ಕಂಡು ಜನರು ನಿಬ್ಬೆರಗಾಗಿ ವೀಕ್ಷಿಸಿದರು.

ಸ್ವೀಡನ್ ಮತ್ತು ಯುಕೆ ವಿಮಾನಗಳ ಕಲರವ

ಸ್ವೀಡನ್ ಮತ್ತು ಯುಕೆ ವಿಮಾನಗಳ ಕಲರವ

ಸ್ವೀಡನ್ ನ ದಿ ಸ್ಕ್ಯಾಂಡಿನೇವಿಯನ್ ಏರೋ ಶೋ ತಂಡ ಹಾಗೂ ಯುಕೆಯ ಯಾಕೋವ್ಲೇವ್ ಏರೋಬ್ಯಾಟಿಕ್ ತಂಡಗಳು ನಡೆಸಿದ ಏರೋಬ್ಯಾಟಿಕ್ ಪ್ರದರ್ಶನ ನೋಡುಗರ ಮೈ ಝಮ್ ಎನ್ನುವಂತೆ ಮಾಡಿತು.

ಸೂರ್ಯ ಕಿರಣ್ ತಂಡ

ಸೂರ್ಯ ಕಿರಣ್ ತಂಡ

ಸುಮಾರು ಆರು ವರ್ಷಗಳ ನಂತರ ಭಾರತದ ಏರ್ ಫೋರ್ಸ್ ನ ಸೂರ್ಯ ಕಿರಣ್ ಏರೋಬಟಿಕ್ಸ್ ನ ಆರು ವಿಮಾನ ಒಳಗೊಂಡ ತಂಡ ಬೆಂಗಳೂರಿನ ಏರೋ ಶೋ 2017ನಲ್ಲಿ ಭಾಗವಹಿಸಿ ನೋಡುಗರ ಮನಗೆದ್ದಿತು.

ಚೀನಾದ 5 ಜನ ಅಧಿಕಾರಿಗಳ ತಂಡ

ಚೀನಾದ 5 ಜನ ಅಧಿಕಾರಿಗಳ ತಂಡ

ಇಸ್ರೇಲ್, ಫ್ರಾನ್ಸ್, ರಷ್ಯಾ, ಜರ್ಮನಿ, ಜಪಾನ್, ಜರ್ಮನಿ, ದಕ್ಷಿಣ ಆಫ್ರಿಕಾ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಪಾಲ್ಗೊಂಡಿವೆ. ಈ ಬಾರಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನೆರೆ ರಾಷ್ಟ್ರ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಏರ್‍ ಫೋರ್ಸ್ ನ 5 ಜನ ಅಧಿಕಾರಿಗಳ ತಂಡ ಭಾಗವಹಿಸಿರುವುದು ವಿಶೇಷವಾಗಿದೆ.

549 ಕಂಪೆನಿಗಳು ಭಾಗಿ

549 ಕಂಪೆನಿಗಳು ಭಾಗಿ

ಇಂದಿನಿಂದ ಐದು ದಿನಗಳವರೆಗೆ ಆಗಸದಲ್ಲಿ ನಡೆಯುವ ಉಕ್ಕಿನ ಹಕ್ಕಿಗಳ ಹಾರಾಟದಲ್ಲಿ 270 ದೇಶೀಯ, 279 ವಿದೇಶಿ ಸೇರಿ 549 ಕಂಪೆನಿಗಳು ಭಾಗವಹಿಸುತ್ತಿವೆ. 70ಕ್ಕೂ ಹೆಚ್ಚು ವಿಮಾನಗಳು ಮೈನವಿರೇಳಿಸುವ ಪ್ರದರ್ಶನ ನೀಡಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union ministry of defence Manohar Parrikar inaugurates 2017 air show at Bengaluru Yelahanka, on February 14. Surya Kiran, the Aerobatics,Scandinavian,Sarang teams performed in the air show.
Please Wait while comments are loading...