ಬೆಂಗಳೂರಿನಲ್ಲಿ ವೆಂಕಯ್ಯ ನಾಯ್ಡು, ಎಲ್ಲೆಲ್ಲಿ ಓಡಾಡಿದ್ರು?

Posted By:
Subscribe to Oneindia Kannada

ಬೆಂಗಳೂರು, ಜೂನ್ 26: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಭಾನುವಾರ ನಮ್ಮ ಮೆಟ್ರೋ ರೈಲಿನಲ್ಲಿ ಕಾಣಿಸಿಕೊಂಡು, ಪ್ರಯಾಣಿಕರಿಗೆ ಅಚ್ಚರಿ ಮೂಡಿಸಿದರು. ಪ್ರಯಾಣಿಕರನ್ನು ಮಾತನಾಡಿಸಿ, ಸಾರಿಗೆ ವ್ಯವಸ್ಥೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ನಂತರ ತಮ್ಮ ಫೇಸ್ ಬುಕ್ ಪುಟದಲ್ಲಿ 'ನಮ್ಮ ಮೆಟ್ರೋ' ವ್ಯವಸ್ಥೆಯನ್ನು ಹಾಡಿ ಹೊಗಳಿದ್ದಾರೆ.

ಸಂಪಿಗೆ ರಸ್ತೆಯಿಂದ ನಾಗಸಂದ್ರ ಹಾಗೂ ನಾಗಸಂದ್ರದಿಂದ ಸಂಪಿಗೆ ರಸ್ತೆಯವರೆಗೆ ಬೆಳಗ್ಗೆ 7.30ರಿಂದ 9 ಗಂಟೆವರೆಗೆ ಪ್ರಯಾಣ ಮಾಡಿದರು. ಇದೇ ವೇಳೆ ಜನರಿಂದ ಅಹವಾಲುಗಳನ್ನು ಸ್ವೀಕರಿಸಿದರು, ಈ ಪೈಕಿ ಸಂಪಿಗೆ ರಸ್ತೆಯಿಂದ ಮೆಜೆಸ್ಟಿಕ್ ಮಾರ್ಗವಾಗಿ ಮೆಟ್ರೋ ಸಂಚಾರ ಆರಂಭಿಸಬೇಕು ಎಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಆಗ್ರಹಿಸಿದ್ದು ಕಂಡು ಬಂದಿತು.

Union Minister Venkaiah Naidu Namma Metro Bengaluru

ನಾಲ್ವರು ಅಧಿಕಾರಿಗಳೊಂದಿಗೆ ವೆಂಕಯ್ಯ ನಾಯ್ಡು ಈ ರೀತಿ ಮೆಟ್ರೋದಲ್ಲಿ ಸಂಚರಿಸಿದ್ದು ವಿಶೇಷವಾಗಿತ್ತು. ಇದಾದ ಬಳಿಕ ವೆಂಕಯ್ಯ ನಾಯ್ಡು ಅವರು ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೂ ಭೇಟಿ ನೀಡಿದರು.
ಬೆಂಗಳೂರಿನಲ್ಲಿ ಎಂ ವೆಂಕಯ್ಯ ನಾಯ್ಡು ಸಂಚಾರ

ಬೆಂಗಳೂರಿನಲ್ಲಿ ಎಂ ವೆಂಕಯ್ಯ ನಾಯ್ಡು ಸಂಚಾರ

-
-
-
-
ಬೆಂಗಳೂರಿನಲ್ಲಿ ಎಂ ವೆಂಕಯ್ಯ ನಾಯ್ಡು ಸಂಚಾರ

ಬೆಂಗಳೂರಿನಲ್ಲಿ ಎಂ ವೆಂಕಯ್ಯ ನಾಯ್ಡು ಸಂಚಾರ

ನಂತರ ತುರ್ತು ಪರಿಸ್ಥಿತಿ ಹೇರಿಕೆಯ 41ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡರು. ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಸೇರಿದಂತೆ ಸ್ಥಳೀಯ ಮುಖಂಡರು ಈ ಕಾರ್ಯಕ್ರಮದಲ್ಲಿ ಕಂಡು ಬಂದರು. ವೆಂಕಯ್ಯ ನಾಯ್ಡು ಅವರ ಬೆಂಗಳೂರು ಪ್ರವಾಸದ ಕೆಲ ಚಿತ್ರಗಳು ಗ್ಯಾಲರಿಯಲ್ಲಿ ಕಾಣಬಹುದು. ಚಿತ್ರಗಳ ಕೃಪೆ: @MVenkaiahNaidu.

ತುರ್ತು ಪರಿಸ್ಥಿತಿಯಲ್ಲಿ(1975-77) ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ ರಂಥ ಗಣ್ಯರ ಜೊತೆ ಕಾಲ ಕಳೆದ ನಾಯಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಒಂದೇ ಬ್ಯಾರಕ್ ನಲ್ಲಿ ನೂರಕ್ಕೂ ಅಧಿಕ ಜನರಿರುತ್ತಿದ್ದರು. ದಿನ ನಿತ್ಯ ಯೋಗ ತರಬೇತಿ ಪಡೆಯುತ್ತಿದ್ದೆವು, ಹಿರಿಯ ನಾಯಕರಿಂದ ಕಿರಿಯರಿಗೆ ಮಾರ್ಗದರ್ಶನ ಸಿಗುತ್ತಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Surprise visit to Namma Metro, Bangalore.. from Sampige road to Nagasandra..Found every thing neat, clean and well maintained...said one of the Facebook post from Union Minister M Venkaiah Naidu. Naidu is in town visited Namma Metro, Jindal Nature cure Institute and later attended 41st anniversary of imposing emergency in India.
Please Wait while comments are loading...