ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಗ್ಗಿಲ್ಲದೆ ವಿಜೃಂಭಿಸುತ್ತಿದೆ ಲೈವ್‌ಬ್ಯಾಂಡ್‌: ಪೊಲೀಸರ ಡೋಂಟ್ ಕೇರ್‌

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಬೆಂಗಳೂರಲ್ಲಿ ಪರವಾನಗಿ ಇಲ್ಲದ ಲೈವ್‌ಬ್ಯಾಂಡ್‌ಗಳು ಮತ್ತೆ ಸದ್ದುಮಾಡುತ್ತಿವೆ. ಪರವನಾಗಿ ಇಲ್ಲದ ಲೈವ್‌ ಬ್ಯಾಂಡ್‌ಗಳಿಗೆ ನೋಟಿಸ್ ನೀಡಿದ್ದರೂ ಕೂಡ ಮಾಲೀಕರು ತಲೆಕೆಡಿಸಿಕೊಳ್ಳುತ್ತಿಲ್ಲ. ಹಾಗೆಯೇ ಪೊಲೀಸರು ಹೇಳಿ ಹೇಳಿ ಸುಸ್ತಾದಂತಿದೆ.

ಈ ರೀತಿ ಲೈವ್‌ಬ್ಯಾಂಡ್‌ಗಳಲ್ಲಿ ಹಾಕುವ ಸಂಗೀತದಿಂದಾಗಿ ಅಕ್ಕ-ಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಲಿ ಬಂದಿತ್ತು ಹೀಗಾಗಿ ಇಂತಹ ಲೈವ್‌ಬ್ಯಾಂಡ್‌ಗಳಿಗೆ ನೋಟಿಸ್ ನೀಡಲಾಗಿತ್ತು.

ಬೆಂಗಳೂರು: ಲೈವ್‌ಬ್ಯಾಂಡ್‌ ಮೇಲೆ ಪೊಲೀಸರ ಹದ್ದಿನ ಕಣ್ಣು ಬೆಂಗಳೂರು: ಲೈವ್‌ಬ್ಯಾಂಡ್‌ ಮೇಲೆ ಪೊಲೀಸರ ಹದ್ದಿನ ಕಣ್ಣು

ಆದರೆ ಲೈವ್‌ಬ್ಯಾಂಡ್‌ನಿಂದ ಮಾಲೀಕರಿಗೆ ಸಾಕಷ್ಟು ಲಾಭವಿದೆ. ಪರವಾನಗಿಗೆ ಅರ್ಜಿ ಸಲ್ಲಿಸಿದರೂ ಇನ್ನೂ ಪರವಾನಗಿ ದೊರೆತಿಲ್ಲ ಎಂದು ಮಾಲೀಕರು ಸಬೂಬು ಹೇಳುತ್ತಿದ್ದಾರೆ. ಪರವಾನಗಿ ಪ್ರಕ್ರಿಯೆ ಮುಗಿಯಲು ಹೆಚ್ಚಿನ ಸಮಯ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಇಂತಹ ಪಬ್ ಗಳಲ್ಲಿ ಸಂಗೀತ ಹಾಕಲು ಅವಕಾಶ ನೀಡಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Uninterrupted live band harms citizens in Bengaluru

ಒಂದು ತಿಂಗಳ ಹಿಂದೆ ಕೆಲ ಪಬ್ ಗಳಿಗೆ ನೋಟಿಸ್ ನೀಡಲಾಗಿತ್ತು. ಬಳಿಕ ಪರವಾನಗಿ ಪಡೆಯಲು ಹೆಚ್ಚಿನ ಅರ್ಜಿಗಳು ಬಂದಿಲ್ಲ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಯಾವುದೇ ರೀತಿಯ ಸಂಗೀತ ಕೇಳಿಸುವ ಪಬ್ ಗಳು ಆ ಸ್ಥಳಕ್ಕೆ ಆಕ್ಯುಪೆನ್ಸಿ ಸರ್ಟಿಫೀಕೇಟ್, ಅಗ್ನಿಶಾಮಕ ಇಲಾಖೆಯಿಂದ, ಬಿಬಿಎಂಪಿ ಸೇರಿ ವಿವಿಧ ಇಲಾಖೆಯಿಂದ ಪರವಾನಗಿ ಮತ್ತು ನಿರಾಪೇಕ್ಷಣ ಪತ್ರ ಪಡೆಯಬೇಕು ಎಂಬ ನಿಯಮಗಳಿವೆ ಆದರೆ ಪಬ್ ಗಳನ್ನು ನಡೆಸಲು ಅವಕಾಶವಿಲ್ಲದ ಸ್ಥಳಗಳಲ್ಲಿಯೂ ಯಾವುದೇ ನಿರಾಪೇಕ್ಷಣ ಪತ್ರವಾಗಿರಲಿ, ಪರವಾನಗಿಯಾಗಿರಲಿ ತೆಗೆದುಕೊಳ್ಳದೆ ಎಗ್ಗಿಲ್ಲದೆ ಪಬ್ ನಡೆಸುತ್ತಿದ್ದಾರೆ.

English summary
Despite show cause notice issued by the police, illegal live band still harming residents of Indira Nagar in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X