ಸುರಂಗ ಮಾರ್ಗದ ನಮ್ಮ ಮೆಟ್ರೋ ಸಂಚಾರ ಹೇಗಿರುತ್ತದೆ?

Subscribe to Oneindia Kannada

ಬೆಂಗಳೂರು, ಏಪ್ರಿಲ್, 30: ಮೆಜೆಸ್ಟಿಕ್ ಗೆ ಮೆಟ್ರೋ ರೈಲು ಸಂಪರ್ಕ, ವಿಧಾನಸೌಧ ಮತ್ತು ಹೈಕೋರ್ಟ್ ಎದುರೇ ಸುರಂಗ ಮಾರ್ಗದಲ್ಲಿ ಮೆಟ್ರೋದಲ್ಲಿ ತೆರಳುವ ಅವಕಾಶ, ಬೈಯಪ್ಪನಹಳ್ಳಿಯಿಂದ-ನಾಯಂಡಹಳ್ಳಿಗೆ ಅರ್ಧ ಗಂಟೆಯಲ್ಲಿ ಬಂದಿಳಿಯುವ ಅನುಭವ.. ಎಲ್ಲವನ್ನು ಕಟ್ಟಿಕೊಡುವ ಮೆಟ್ರೋ ಸಂಚಾರ ಆರಂಭ ಮಾಡಿದೆ.

ಸವಾಲಾಗಿದ್ದ ಬೆಂಗಳೂರು ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್​ನ 4.82 ಕಿ.ಮೀ. (ಕಬ್ಬನ್ ಉದ್ಯಾನ ನಿಲ್ದಾಣದಿಂದ ನಗರ ರೈಲ್ವೆ ನಿಲ್ದಾಣ) ಸುರಂಗ ಮಾರ್ಗದಲ್ಲಿ ರೈಲ್ವೆ ಸಂಚಾರ ಆರಂಭವಾಗಿದ್ದು ಬೆಂಗಳೂರು ನಾಗರಿಕರ ಸಮಯದ ಉಳಿತಾಯದ ಬ್ಯಾಂಕ್ ಆರಂಭವಾದಂತಾಗಿದೆ.[ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್ ದರ ಪಟ್ಟಿ]

ನಮ್ಮ ಮೆಟ್ರೋ ಸುರಂಗ ಮಾರ್ಗದ ಮೆಟ್ರೋ ಉದ್ಘಾಟನೆ ವಿಡಿಯೋ:

ರಾಜಧಾನಿಯ ಹೃದಯ ಭಾಗಕ್ಕೆ ಮೆಟ್ರೋ ಸಂಚಾರ ಸಿಕ್ಕಿದ್ದು ಪ್ರತಿದಿನ 2 ಲಕ್ಷ ಜನ ಮೆಟ್ರೋ ಬಳಕೆ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮೆಟ್ರೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಡಿದ್ದು, ಸುರಂಗ ಮಾರ್ಗದಲ್ಲಿ ಮೆಟ್ರೋ ಸಂಚಾರದ ಅನುಭವ, ಎಲ್ಲವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಸವಾಲು ಗೆದ್ದ ಸುರಂಗ

ಸವಾಲು ಗೆದ್ದ ಸುರಂಗ

ಪೂರ್ವ-ಪಶ್ಚಿಮ ಕಾರಿಡಾರ್​ನ ಸುರಂಗ ಮಾರ್ಗ ಕಾರ್ಯ 2011ರ ಮೇ 12ಕ್ಕೆ ಕಾಮಗಾರಿ ಆರಂಭಗೊಂಡಿತು. ಮೆಜೆಸ್ಟಿಕ್​ನಿಂದ ಸೆಂಟ್ರಲ್ ಕಾಲೇಜು ಮಾರ್ಗವಾಗಿ ಸುರಂಗ ಕೆಲಸ ಆರಂಭವಾಯಿತು. ಇನ್ನು ಸೆಂಟ್ರಲ್ ಕಾಲೇಜಿನಿಂದ ವಿಧಾನಸೌಧ ಮಾರ್ಗದಲ್ಲಿ ಗಟ್ಟಿ ಕಲ್ಲು ಸಿಕ್ಕಿದ್ದು ಹೊರತುಪಡಿಸಿ ಉಳಿದ ಕಡೆ ಮೃದು ಮತ್ತು ಮಿಶ್ರಿತ ಮಣ್ಣು ದೊರೆಕಿತ್ತು.

 ಬರೋಬ್ಬರಿ 5 ವರ್ಷ

ಬರೋಬ್ಬರಿ 5 ವರ್ಷ

ಕಾಮಗಾರಿ ಆರಂಭವಾಗಿ 4 ವರ್ಷ 11 ತಿಂಗಳ ನಂತರ ನಮ್ಮ ಮೆಟ್ರೋ ಮೊದಲ ಸುರಂಗ ಮಾರ್ಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಂಡಿತು. ನಮ್ಮ ಮೆಟ್ರೋ ಮೊದಲನೇ ಹಂತದ 42.3 ಕಿ.ಮೀ. ಮಾರ್ಗದಲ್ಲಿ 32.49 ಕಿ.ಮೀ.ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದಂತಾಗಿದೆ. ಉಳಿದ 9.81 ಕಿ.ಮೀ. ಮಾರ್ಗ ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಐಷಾರಾಮಿ ನಿಲ್ದಾಣಗಳು

ಐಷಾರಾಮಿ ನಿಲ್ದಾಣಗಳು

ನೆಲ ಮಟ್ಟದಿಂದ 60 ಅಡಿ ಆಳದಲ್ಲಿನ ಮೆಟ್ರೋ ನಿಲ್ದಾಣಗಳು ಅತ್ಯಾಧುನಿಕ ವ್ಯವಸ್ಥೆಯನ್ನು ಒಳಗೊಂಡಿವೆ. ಸುಸಜ್ಜಿತ ಫ್ಲಾಟ್ ಫಾರ್ಮ್, ಸಿಸಿ ಕ್ಯಾಮರಾ ಕಣ್ಗಾವಲು, ಎಸ್ಕಿಲೇಟರ್, ಹವಾನಿಯಂತ್ರಿತ ವ್ಯವಸ್ಥೆ ನಿಲ್ದಾಣದ ವಿಶೇಷ.

 ಕತೆ ಹೇಳುವ ಚಿತ್ರಗಳು

ಕತೆ ಹೇಳುವ ಚಿತ್ರಗಳು

ವಿಧಾನ ಸೌಧದ ಎದುರಿಗಿನ ಡಾ. ಬಿ ಆರ್. ಅಂಬೇಡ್ಕರ್ ನಿಲ್ದಾಣದ ಒಳಗಿನ ಗೋಡೆಗಳ ಮೇಲೆ ಅಳವಡಿಸಿರುವ ಫೋಟೋಗಳು ಸುರಂಗ ಮಾರ್ಗದ ಸವಾಲಿನ ಕತೆಯನ್ನು ಬಿಚ್ಚಿಡುತ್ತವೆ. ಸುರಂಗ ಮಾರ್ಗದ ವಿವಿಧ ಹಂತಗಳ ಸ್ಥಿತಿಯ ಸ್ಪಷ್ಟ ಚಿತ್ರಣ ಇಲ್ಲಿ ಸಿಗುತ್ತದೆ.

 18.1 ಕಿ.ಮೀ=33 ನಿಮಿಷ

18.1 ಕಿ.ಮೀ=33 ನಿಮಿಷ

ಪೂರ್ವ-ಪಶ್ಚಿಮ ಕಾರಿಡಾರ್​ನಲ್ಲಿ ಈಗಾಗಲೆ ಎಂಜಿ ರಸ್ತೆಯಿಂದ ಬೈಯ್ಯಪ್ಪನಹಳ್ಳಿ, ನಾಯಂಡಹಳ್ಳಿಯಿಂದ ಮಾಗಡಿ ರಸ್ತೆವರೆಗಿನ 13.28 ಕಿ.ಮೀ. ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿದೆ. ಇದೀಗ 4.82 ಕಿ.ಮೀ. ಸುರಂಗ ಮಾರ್ಗದಲ್ಲೂ ಸಂಚಾರ ಆರಂಭಿಸುವ ಮೂಲಕ ಪೂರ್ವ-ಪಶ್ಚಿಮ ಕಾರಿಡಾರ್​ನ ಒಟ್ಟು 18.1 ಕಿ.ಮೀ. ಮಾರ್ಗದಲ್ಲಿ ಸಂಚಾರ ಆರಂಭವಾದಂತಾಗುತ್ತಿದೆ. ಇಷ್ಟು ಉದ್ದದ ಮಾರ್ಗದಲ್ಲಿ ಸಂಚಾರಕ್ಕೆ ಕೇಚಲ 33 ನಿಮಿಷ ಸಾಕು ಅಂದರೆ ನಂಬಲೇ ಬೇಕು.

 10 ನಿಮಿಷಕ್ಕೆ ಒಂದು ರೈಲು

10 ನಿಮಿಷಕ್ಕೆ ಒಂದು ರೈಲು

ನಮ್ಮ ಮೆಟ್ರೋ ರೈಲು ಈ ಮಾರ್ಗದಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ಸಂಚರಿಸಲಿದೆ. ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಓಡಾಡಲಿದ್ದು, ಪ್ರಯಾಣಿಕರ ಸೇವೆಗಾಗಿ 15 ರೈಲುಗಳು ನಿರಂತರವಾಗಿ ಚಾಲನೆಯಲ್ಲಿ ಇರಲಿವೆ.

 ವಿಧಾನ ಸೌಧದಿಂದ- ಮಾಗಡಿ ರಸ್ತೆ

ವಿಧಾನ ಸೌಧದಿಂದ- ಮಾಗಡಿ ರಸ್ತೆ

ಗಣ್ಯರನ್ನು ಒಳಗೊಂಡಂತೆ ಮಾಧ್ಯಮದವರನ್ನು ಹೊತ್ತ ರೈಲು ಶುಕ್ರವಾರ ರಾತ್ರಿ 8.08ಕ್ಕೆ ವಿಧಾನಸೌಧದ ಎದುರಿಗಿನಿಂದ ಪ್ರಯಾಣ ಆರಂಭಿಸಿ ಮಾಗಡಿ ರಸ್ತೆಗೆ 8.18ಕ್ಕೆ ತಲುಪಿ ಪುನಃ ವಿಧಾನಸೌಧಕ್ಕೆ 8.28ಕ್ಕೆ ಹಿಂದಿರುಗಿತು.

ಮೊಬೈಲ್ ನೆಟ್ ವರ್ಕ್ ಇಲ್ಲ

ಮೊಬೈಲ್ ನೆಟ್ ವರ್ಕ್ ಇಲ್ಲ

ಮೆಟ್ರೋ ಸುರಂಗ ಮಾರ್ಗದ ನಿಲ್ದಾಣಗಳಲ್ಲಿ ಇನ್ನೂ ಮೊಬೈಲ್ ನೆಟ್​ವರ್ಕ್ ಸಿಗುವಂತೆ ವ್ಯವಸ್ಥೆ ಮಾಡಲಾಗಿಲ್ಲ. ಈ ವ್ಯವಸ್ಥೆ ಅಳವಡಿಕೆಗೆ ಬಿಎಂಆರ್​ಸಿಎಲ್ ಇತ್ತೀಚೆಗಷ್ಟೇ ಟೆಂಡರ್ ಆಹ್ವಾನಿಸಿದೆ. ವೈಫೈ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದೆ.

ಸುರಂಗ ಮಾರ್ಗದಲ್ಲಿ 5 ನಿಲ್ದಾಣಗಳು

ಸುರಂಗ ಮಾರ್ಗದಲ್ಲಿ 5 ನಿಲ್ದಾಣಗಳು

ಕಬ್ಬನ್ ಪಾರ್ಕ್, ವಿಧಾನಸೌಧದ ಎದುರಿನ ಅಂಬೇಡ್ಕರ್ ನಿಲ್ದಾಣ, ಸೆಂಟ್ರಲ್ ಕಾಲೇಜಿನ ಬಳಿಯ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣ, ಮೆಜೆಸ್ಟಿಕ್ ಕೆಂಪೇಗೌಡ ನಿಲ್ದಾಣ ಮತ್ತು ಸಿಟಿ ರೈಲ್ವೆ ಸ್ಠೇಶನ್ ನಿಲ್ದಾಣಗಳನ್ನು ನಮ್ಮ ಮೆಟ್ರೋದ ಸುರಂಗ ಮಾರ್ಗ ಒಳಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Union Minister for Urban Development and Parliamentary Affairs M Venkaiah Naidu and Karnataka Chief Minister Siddaramaiah on Friday evening flagged off the first ever-operational underground metro of South India from the grand stairs of Vidhana Soudha in Bengaluru. Here are the Highlights of Underground corridor of Namma Metro Inauguration Highlights .
Please Wait while comments are loading...