ಮೆಟ್ರೋ ಉದ್ಘಾಟನೆಯಲ್ಲಿ ಗಣ್ಯರು ಹೇಳಿದ್ದು, ಕೇಳಿದ್ದು

Subscribe to Oneindia Kannada

ಬೆಂಗಳೂರು, ಏಪ್ರಿಲ್, 30: ಮೆಟ್ರೋ ಕಾಮಗಾರಿಯ ಉಳಿದ ಹಂತಗಳನ್ನು ಶೀಘ್ರವಾಗಿ ಪೂರ್ಣಮಾಡಲಾಗುವುದು, ಬೆಂಗಳೂರಿಗೂ ಸಬ್ ಅರ್ಬನ್ ರೈಲು, ಪರಿಸರ ಕಾಳಜಿಗೆ ಒತ್ತು, ಸೈಕಲ್ ಬಳಕೆ, ಪಾದಚಾರಿ ಮಾರ್ಗಕ್ಕೆ ಶಿಫಾರಸು, ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ, ಕೆರೆಗಳ ಸಂರಕ್ಷಣೆ ಮತ್ತು ಶುದ್ಧೀಕರಣಕ್ಕೆ ಕ್ರಮ, ಇವು ಸುರಂಗ ಮಾರ್ಗದ ಮೆಟ್ರೋ ಉದ್ಘಾಟನೆ ವೇಳೆ ಗಣ್ಯರ ಬಾಯಿಂದ ಕೇಳಿಬಂದ ಮಾತುಗಳು.

ಸಿಎಂ ಸಿದ್ದರಾಮಯ್ಯ, ಕೇಂದ್ರ ನಗರಾಭಿವೃದ್ಧಿ ಸಚಿವ ಎಂ ವೆಂಕಯ್ಯ ನಾಯ್ಡು, ಕೇಂದ್ರ ರಸಗೊಬ್ಬರ ಸಚಿವ ಅನಂತ ಕುಮಾರ್, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹಲವಾರು ವಿಚಾರಗಳನ್ನು ಜನತೆಯ ಮುಂದೆ ಇಟ್ಟರು.[ಸುರಂಗ ಮಾರ್ಗದ ನಮ್ಮ ಮೆಟ್ರೋ ಸಂಚಾರ ಹೇಗಿರುತ್ತದೆ?]

ತೀವ್ರವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಅಭಿವೃದ್ಧಿಗೆ ಮತ್ತು ಜನರ ನೆರವಿಗೆ ಬೇಕಾದ ಸಕಲ ಕ್ರಮ ತೆಗೆದುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕಾರ್ಯನಿರ್ವಹಿಸಲಿವೆ. ಅನುದಾನ ಬಿಡುಗಡೆಯಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ ಎಂಬ ಮಾತು ನಾಗರಿಕರಿಗೆ ನೆಮ್ಮದಿತಂದಿದ್ದು ಸುಳ್ಳಲ್ಲ. ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣ್ಯರು ಹೇಳಿದ ಪ್ರಮುಖ ಅಂಶಗಳು ನಿಮ್ಮ ಮುಂದೆ...

ಅನುದಾನಕ್ಕೆ ಕೊರತೆ ಇಲ್ಲ

ಅನುದಾನಕ್ಕೆ ಕೊರತೆ ಇಲ್ಲ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕಾರ್ಯನಿರ್ವಹಿಸುತ್ತಿವೆ. ಅನುದಾನಕ್ಕೆ ಯಾವ ಕೊರತೆಯನ್ನು ಮಾಡುವುದಿಲ್ಲ. ರಾಜ್ಯ ಸರ್ಕಾರ ತನ್ನ ಪಾಲನ್ನು ನೀಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

2020ಕ್ಕೆ ಪೂರ್ಣ

2020ಕ್ಕೆ ಪೂರ್ಣ

114 ಕಿ.ಮೀ. ಉದ್ದದ ಎರಡೂ ಹಂತಗಳು ನಿರೀಕ್ಷೆಯಂತೆ 2020ಕ್ಕೆ ಪೂರ್ಣಗೊಳ್ಳಲಿದ್ದು, 20 ಲಕ್ಷ ಜನರಿಗೆ ಅನುಕೂಲವಾಗಲಿದೆ. ವಿಮಾನ ನಿಲ್ದಾಣಕ್ಕೂ ಮೆಟ್ರೋ ಸಂಪರ್ಕ ಸಾಧ್ಯವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

 ಆಂಜನೇಯ ಹೋರಟೋದ್ರಾ!

ಆಂಜನೇಯ ಹೋರಟೋದ್ರಾ!

ಮಾತಿನ ಮಧ್ಯೆ ಸಿಎಂ ಸಚಿವ ಆಂಜನೇಯ ಹೆಸರನ್ನು ಉಲ್ಲೇಖ ಮಾಡಿದರು. ಎಲ್ಲಿ ಆಂಜನೇಯ...ಹೋರಟೋದ್ರಾ ಎಂದು ಕೇಳಿದ್ದು ಒಂದು ಕ್ಷಣ ಎಲ್ಲರೂ ಆಂಜನೇಯ ಅವರನ್ನು ಹುಡುಕುವಂತೆ ಮಾಡಿತು.

 ನಾನೊಬ್ಬ ಪ್ರಯಾಣಿಕ

ನಾನೊಬ್ಬ ಪ್ರಯಾಣಿಕ

ನಾನು ಇಲ್ಲಿ ಕೇಂದ್ರ ಸಚಿವನಾಗಿ ಬಂದಿಲ್ಲ. ನಾನೊಬ್ಬ ಮೆಟ್ರೋ ಪ್ರಯಾಣಿಕನಾಗಿ ಬಂದಿದ್ದೇನೆ. ದೆಹಲಿಗೆ ತೆರಳಿದರೆ ನಾನು ಬಳಸುವುದು ಮೆಟ್ರೋವನ್ನೇ. ಇಲ್ಲಿಯೂ ಸಹ ಅಂತಹ ದಿನಗಳು ಬರಲು ದೂರವಿಲ್ಲ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದರು.

4 ಸಾವಿರ ಕೋಟಿ

4 ಸಾವಿರ ಕೋಟಿ

ಖಾಸಗಿ ಸಂಸ್ಥೆಯೊಂದು ನೀಡುರುವ ಸಮೀಕ್ಷೆ ಪ್ರಕಾರ ಬೆಂಗಳೂರಿಗೆ ಸಬ್ ಅರ್ಬನ್ ರೈಲಿನ ಅಗತ್ಯವಿದೆ. ಅದಕ್ಕೆ ಬೇಕಾದ ಸಹಕಾರ ಕೊಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಅನಂತ್ ಕುಮಾರ್ ಹೇಳಿದರು.

ಮಳೆ ಕೊಯ್ಲು ಅಗತ್ಯ

ಮಳೆ ಕೊಯ್ಲು ಅಗತ್ಯ

ನೀರಿನ ಕಾಪಾಡುವಿಕೆ, ಮರು ಬಳಕೆ ಇಂದಿನ ಅಗತ್ಯ. ದೇಶವೇ ನೀರಿನ ಸಮಸ್ಯೆ ಎದುರಿಸುತ್ತಿದ್ದು ಪರಿಹಾರೋಪಾಯವಾಗಿ ಎಲ್ಲರೂ ಮಳೆ ನೀರು ಕೊಯ್ಲಿನ ಬಗ್ಗೆ ಗಮನ ನೀಡಬೇಕು ಎಂದು ವೆಂಕಯ್ಯ ನಾಯ್ಡು ಸಲಹೆ ನೀಡಿದರು.

 ಪ್ರಸ್ತಾವನೆ ನೀಡಿ

ಪ್ರಸ್ತಾವನೆ ನೀಡಿ

ಸಬ್ ಅರ್ಬನ್ ರೈಲಿನ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರ ಪ್ರಸ್ತಾವನೆ ನೀಡದರೆ ಕೇಂದ್ರ ಸರ್ಕಾರ ಸ್ಪಂದಿಸಲಿದೆ. ಕಾರ್ ಪೂಲಿಂಗ್ ಕ್ರಮ ತೆಗೆದುಕೊಂಡು ಟ್ರಾಫಿಕ್ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ನಾಯ್ಡು ಮನವಿ ಮಾಡಿಕೊಂಡರು.

 ಅಟಲ್ ನೆನೆದ ನಾಯ್ಡು

ಅಟಲ್ ನೆನೆದ ನಾಯ್ಡು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕನಸು ನನಸಾಗುತ್ತಿದೆ. ಅವರ ಕಲ್ಪನೆಯಂತೆ ದೇಶದ ಎಲ್ಲ ಮಹಾನಗರಗಳಲ್ಲಿ ಮೆಟ್ರೋ ವ್ಯವಸ್ಥೆ ಆರಂಭವಾಗುತ್ತಿದೆ. ರಾಜಕಾರಣ ಬದಿಗಿಟ್ಟು ಜನರ ಒಳಿತಿಗೆ ಶ್ರಮಿಸೋಣ ಎಂದು ನಾಯ್ಡು ಹೇಳಿದರು.

 ಸಾರ್ ಈ ಕಡೆ ಬನ್ನಿ

ಸಾರ್ ಈ ಕಡೆ ಬನ್ನಿ

ಕೇಂದ್ರ ಸಚಿವ ಅನಂತ್ ಕುಮಾರ್ ವೇದಿಕೆಯ ಬಲ ಭಾಗದ ಡಯಾಸ್ ಬಳಿ ಮಾತನಾಡಲು ತೆರಳಿದರು. ಆಗ ಮಾಧ್ಯಮದವರು ಸಾರ್ ಈ ಕಡೆ ಬನ್ನಿ(ಎಡ ಭಾಗದ ಡಯಾಸ್ ಬಳಿ) ಎಂದರು. ಕಾರಣ ಬಲಭಾಗದ ಡಯಾಸ್ ಬಳಿ ಬೆಳಕಿನ ವ್ಯವಸ್ಥೆ ಸರಿಯಾಗಿರಲಿಲ್ಲ.

ಗಣ್ಯರ ಪ್ರಯಾಣ

ಗಣ್ಯರ ಪ್ರಯಾಣ

ವೇದಿಕೆಯಲ್ಲಿದ್ದ ಎಲ್ಲ ಗಣ್ಯರು ಅಂಬೇಡ್ಕರ್ ನಿಲ್ದಾಣದ ಸುರಂಗ ಮಾರ್ಗಕ್ಕೆ ತೆರಳಿ ಹಸಿರು ನಿಶಾನೆ ತೋರಿಸಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದರು. ಮಾಗಡಿ ರಸ್ತೆವರೆಗೆ ತೆರಳಿದ ರೈಲು ತಿರುಗಿ ಅಂಬೇಡ್ಕರ್ ನಿಲ್ದಾಣಕ್ಕೆ ವಾಪಸಾಯಿತು.

ನಾಯ್ಡು ತಡೆದ ಸಿಎಂ

ನಾಯ್ಡು ತಡೆದ ಸಿಎಂ

ರೈಲಿನಿಂದ ಇಳಿದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಾಧ್ಯಮದವರ ಬಳಿ ಮಾತನಾಡಲು ಆಗಮಿಸಿದರು. ಈ ವೇಳೆ ಸ್ವಲ್ಪ ಮಟ್ಟಿನ ನೂಕು ನುಗ್ಗಲು ಉಂಟಾಯಿತು. ನಾಯ್ಡು ಅವರನ್ನು ತಡೆದ ಸಿದ್ದರಾಮಯ್ಯ ಮುಂದಕ್ಕೆ ಕರೆದುಕೊಂಡು ಹೋದರು.

 ಡಾ. ಜಿ. ಪರಮೇಶ್ವರ ಗೈರು

ಡಾ. ಜಿ. ಪರಮೇಶ್ವರ ಗೈರು

ಮೆಟ್ರೋ ಉದ್ಘಾಟನೆ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ. ಡಾ. ಜಿ. ಪರಮೇಶ್ವರ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗೈರಾಗಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅನಿವಾರ್ಯ ಕಾರಣದಿಂದ ಬಂದಿಲ್ಲ ಎಂಬ ಸಮಜಾಯಿಷಿ ಕೇಳಿಬಂತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister for Urban Development and Parliamentary Affairs M Venkaiah Naidu and Karnataka Chief Minister Siddaramaiah on Friday evening flagged off the first ever-operational underground metro of South India from the grand stairs of Vidhana Soudha in Bengaluru. Who said what about Underground corridor of Namma Metro Inauguration.
Please Wait while comments are loading...