ಕಟ್ಟಡದ ಅವಶೇಷಗಳಡಿ ಸಿಲುಕಿ ಇಬ್ಬರು ಸಾವು, 4 ಮಂದಿ ರಕ್ಷಣೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 05: ಬೆಳ್ಳಂದೂರು ಗೇಟ್ ಮಾರತ್ತಹಳ್ಳಿ ರಿಂಗ್ ರಸ್ತೆ, ಇಕೋ ಸ್ಪೇಸ್ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದು ಕುಸಿದಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

* ಪಕ್ಕದ ಕಟ್ಟಡದ ಭದ್ರತಾ ಸಿಬ್ಬಂದಿ ಸೇರಿದಂತೆ ಇಬ್ಬರ ಶವ ಪತ್ತೆ, ನಾಲ್ವರ ರಕ್ಷಣೆಗಾಗಿ ಶೋಧಕಾರ್ಯ ಮುಂದುವರಿಕೆ
* ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತ ಮುನಿವೀರಪ್ಪ ಅವರು ಕಟ್ಟಡದ ವಿವರಗಳನ್ನು ನೀಡಿದ್ದಾರೆ.
* 2015ರ ಆಗಸ್ಟ್ 13ರಂದು ಅನುಮತಿ ಪಡೆದಿರುವ ವಿನಯ್ ಕುಮಾರ್ ದೋಂಗಲು ಅವರು 6 ತಿಂಗಳ ಹಿಂದೆ ಕಾಮಗಾರಿ ಆರಂಭಿಸಿದ್ದರು.

* ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಪರಿಶೀಲನೆ ನಡೆಸಿದ ಪೊಲೀಸ್ ಅಧಿಕಾರಿ ಎಂಎನ್ ರೆಡ್ಡಿ , ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಹಾಗೂ ಬಿಬಿಎಂಪಿ ಮೇಯರ್ ಪದ್ಮಾವತಿ.
* ಓರ್ವ ಬಾಲಕ ಸೇರಿದಂತೆ ನಾಲ್ವರನ್ನು ರಕ್ಷಿಸಲಾಗಿದೆ.[ಕಟ್ಟಡ ಕುಸಿತ: ಅಧಿಕಾರಿಗಳನ್ನು ವಜಾ ಮಾಡಿದ ಮೇಯರ್]
* ಕಟ್ಟಡದ ಅವಶೇಷಗಳಡಿ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ.


* ಕಟ್ಟಡದ ಅವಶೇಷಗಳಿಂದ 8 ವರ್ಷದ ಬಾಲಕನ ರಕ್ಷಣೆ ಮಾಡಲಾಗಿದೆ. ರಕ್ಷಿಸಲಾದ ಮಗುವನ್ನು ಯಾದಗಿರಿ ಮೂಲದ ಕಾರ್ಮಿಕ ಬನ್ನಪ್ಪ ಎಂದು ಗುರುತಿಸಲಾಗಿದೆ.[ಗ್ಯಾಲರಿ: ಬೆಳ್ಳಂದೂರು ಕಟ್ಟಡ ಕುಸಿತದ ಅವಶೇಷಗಳು]

* ಸುಮಾರು 20ಕ್ಕೂ ಅಧಿಕ ಮಂದಿ ಕಟ್ಟಡ ಕೆಳಗೆ ಸಿಲುಕಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
* 3 ಅಗ್ನಿಶಾಮಕ ದಳ ತಂಡದ 50ಕ್ಕೂ ಅಧಿಕ ಮಂದಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
Under construction building collapse, Eco space Bellandur Gate, Bengaluru

ನಿರ್ಮಾಣದ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿರುವ ಶಂಕೆ ವ್ಯಕ್ತವಾಗಿದೆ.


2 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು 5 ಅಂತಸ್ತಿನ ಕಟ್ಟಡ ನಿರ್ಮಿಸಿದ್ದಾರೆ. ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತೇನೆ.

ಮೇಯರ್ ಜತೆಗೂ ಮಾತನಾಡುತ್ತೇನೆ ಎಂದು ಶಾಸಕ ರಘು ಆಚಾರ್ ಅವರು ಖಾಸಗಿ ವಾಹಿನಿ ಜತೆ ಮಾತನಾಡುತ್ತಾ ತಿಳಿಸಿದರು. ಸುಮಾರು 50ಕ್ಕೂ ಅಧಿಕ ಸಿಬ್ಬಂದಿ ಈಗ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Under Construction building collapse: Near eco space, Marathalli Ring road, B'luru. Five-storey under construction building in #Marathahalli Ring Road collapses. At least 20 feared trapped
Please Wait while comments are loading...