ಬೆಂಗಳೂರಲ್ಲಿ ಹೆಚ್ಚುತ್ತಿದೆ ವಾಹನ ಓಡಿಸುವ ಅಪ್ರಾಪ್ತ ಮಕ್ಕಳ ಸಂಖ್ಯೆ

Written By: Nayana Bj
Subscribe to Oneindia Kannada

ನಗರದಲ್ಲಿ ಈಗಾಗಲೇ ವಾಹನಗಳ ಸಂಖ್ಯೆ 70ಲಕ್ಷ ದಾಟಿದೆ, ಈ ಆತಂಕದ ಮಧ್ಯೆ ವಾಹನ ಓಡಿಸುವ ಅಪ್ರಾಪ್ತ ವಯಸ್ಸಿನ ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿರುವುದು ಆತಂಕಕಾರಿ ಸಂಗತಿಯಾಗಿದೆ.

ಈ ವರ್ಷ 2018ರ 59ದಿನಗಳಲ್ಲಿ 1,367 ಪ್ರಕರಣ ದಾಖಲಾಗಿದ್ದು, ಅಂದರೆ ಅಂದಾಜು ಸರಾಸರಿ 23 ಅಪ್ರಾಪ್ತರು ದಿನವೊಂದಕ್ಕೆ ಸಿಕ್ಕಿಬೀಳುತ್ತಿದ್ದಾರೆ.

ಅಪ್ರಾಪ್ತರು ವಾಹನ ಚಲಾಯಿಸುವ ಪ್ರಕರಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. 2016ರಲ್ಲಿ 2,102 ಪ್ರಕರಣ ದಾಖಲಾಗಿತ್ತು. 2017ರಲ್ಲಿ ಪ್ರಕರಣಗಳ ಸಂಖ್ಯೆ 5,333ಕ್ಕೆ ಏರಿದೆ. ಅಂದರೆ ಶೇ.150ರಷ್ಟು ಹೆಚ್ಚಳವಾಗಿದೆ.

ಅಪ್ರಾಪ್ತರು ವಾಹನ ಚಲಾಯಿಸುವ ಪ್ರಕರಣ ವರ್ಷದಿಂದ ವರ್ಷಕ್ಕೆ ಹೆಚ್ಚಳಕ್ಕೆ ಪೋಷಕರ ನಿರ್ಲಕ್ಷ್ಯ ಒಂದು ಕಾರಣವಾಗಿದೆ. ಸಹಪಾಠಿಗಳು, ಇತರರ ಎದುರು ಶೋಕಿಗಾಗಿಯೂ ಕೆಲ ಅಪ್ರಾಪ್ತರು ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವುದುಂಟು ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.

vehicle

ಅಪ್ರಾಪ್ತ ಮಕ್ಕಳು ವಾಹನ ಚಾಲಾಯಿಸಿ ಸಿಕ್ಕಿಬಿದ್ದಾಗ ಅವರ ಪೋಷಕರನ್ನು ನಾವು ಕೋರ್ಟಿಗೆ ಹಾಜರುಪಡಿಸುತ್ತೇವೆ. ಅಲ್ಲಿ ಜೈಲಿಗೆ ಕಳುಹಿಸುವುದೋ ಅಥವಾ ದಂಡ ವಿಧಿಸುವುದೋ ಎಂಬುದು ತೀರ್ಮಾನವಾಗುತ್ತದೆ. ಜೈಲಿಗೆ ಹಾಕುವ ಆಯ್ಕೆ ಕೆಲವೊಮ್ಮೆ ಮಾತ್ರ ಬರುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ತಿಳಿಸಿದ್ದಾರೆ.

ವಾಹನದ ಕೀಲಿಕೈ ಅಪ್ರಾಪ್ತ ಮಕ್ಕಳಿಗೆ ಸಿಗುವಂತೆ ಇಟ್ಟು ಕೆಲ ಪಾಲಕರು ತಪ್ಪು ಮಾಡುತ್ತಾರೆ. ಕೀಲಿಕೈ ಕದ್ದು ವಾಹನ ಚಲಾಯಿಸುವ ಮಕ್ಕಳಿಗೆ ಕೌನ್ಸೆಲಿಂಗ್ ಅಗತ್ಯವಿರುತ್ತದೆ.

ಕಿರಿಯ ವಯಸ್ಸಿನಲ್ಲಿರುವಾಗಲೇ ವಾಹನ ಚಾಲನೆಯನ್ನು ಮಕ್ಕಳಲ್ಲಿ ಪ್ರೋತ್ಸಾಹಿಸುವ ಉದ್ದೇಶವಿದ್ದರೆ, ನಿಯಂತ್ರಣ ಹೊಂದಿರುವ ಕೇಂದ್ರಗಳಾದ ಗೋ ಕಾರ್ಟಿಂಗ್ ಅಥವಾ ಡೈವಿಂಗ್ ಸ್ಕೂಲ್ ಸಿಮ್ಯುಲೇಟರ್ ನೆರವು ಪಡೆಯುವುದು ಸೂಕ್ತ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Around 1,367 cases have been booked by Bengaluru traffic police in last 60 days as minors were driving their vehicles in Bengaluru. There was huge increasing in violations as children were driving their parents vehicles without license as they can't get the same in under age

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ