{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"https://kannada.oneindia.com/news/bengaluru/umashree-pramod-muthalik-opposes-kiss-love-089290.html" }, "headline": "ಬಗೆಹರಿಯದ ಕಿಸ್ ಆಫ್ ಲವ್ ಆಯೋಜನೆ ಗೊಂದಲ", "url":"https://kannada.oneindia.com/news/bengaluru/umashree-pramod-muthalik-opposes-kiss-love-089290.html", "image": { "@type": "ImageObject", "url": "http://kannada.oneindia.com/img/1200x60x675/2014/11/21-19-17-1405568160-umashree.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/11/21-19-17-1405568160-umashree.jpg", "datePublished": "2014-11-21T10:33:53+05:30", "dateModified": "2014-11-21T10:43:49+05:30", "author": { "@type": "Person", "url": "https://kannada.oneindia.com/authors/gururajks.html", "name": "Gururaj" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Bangalore", "description": "Kannada & Culture Minister Umashree and Sri Ram Sene chief Pramod Muthalik opposed 'Kiss of Love' campaign in Bengalur. Minister Umashree send a letter to Home Minister K.J. George on this issue.", "keywords": "Kiss Of Love, Kiss, Bengaluru, Moral Policing, Umashree, Pramod Muthalik, Umashree, Pramod muthalik opposes Kiss of Love, ಬಗೆಹರಿಯದ ಕಿಸ್ ಆಫ್ ಲವ್ ಆಯೋಜನೆ ಗೊಂದಲ, ಮುತ್ತು, ಚುಂಬನ, ಬೆಂಗಳೂರು, ಕಿಸ್ ಆಫ್ ಲವ್, ಉಮಾಶ್ರೀ, ಪ್ರಮೋದ್ ಮುತಾಲಿಕ್", "articleBody":"ಬೆಂಗಳೂರು, ನ.21 : ಬೆಂಗಳೂರಿನಲ್ಲಿ ಕಿಸ್& zwnj ಆಫ್ ಲವ್ ಆಯೋಜನೆ ಕುರಿತ ಗೊಂದಲಗಳು ಮುಂದುವರೆದಿದ್ದು, ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸಚಿವೆ ಉಮಾಶ್ರೀ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಕಿಸ್& zwnj ಆಫ್& zwnj ಲವ್ ಕಾರ್ಯಕ್ರಮಕ್ಕೆ ಅವಕಾಶ ನೀಡುವ ಕುರಿತು ಎರಡು ದಿನದಲ್ಲಿ ಪೊಲೀಸರು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು, ಗೃಹ ಸಚಿವ ಕೆ.ಜೆಜಾರ್ಜ್ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿ ಕಿಸ್ ಆಫ್& zwnj ಲವ್ ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕವಾಗಿ ಯುವಕ-ಯುವತಿ ಚುಂಬಿಸುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದು, ಇಂತಹ ಪ್ರತಿಭಟನೆಗೆ ಅವಕಾಶ ಕೊಡಬೇಡಿ ಎಂದು ಆಗ್ರಹಿಸಿದ್ದಾರೆ.ಕಿಸ್ ಆಫ್ ಲವ್ ಕಾರ್ಯಕ್ರಮವನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರನ್ನು ಗುರುವಾರ ಭೇಟಿ ಮಾಡಿ, ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ. ಕಿಸ್ ಆಫ್ ಲವ್, ವಿದ್ಯಾರ್ಥಿಗಳು ಏನಂತಾರೆ?ಕೇರಳದಲ್ಲಿ ನೈತಿಕ ಪೊಲೀಸ್& zwnj ಗಿರಿ ಹೆಸರಿನಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಕಿಸ್ ಆಫ್ ಲವ್ ಕಾರ್ಯಕ್ರಮವನ್ನು ಆಯೋಜಿಸಲು ರಚಿತಾ ತನೇಜಾ ಮುಂದಾಗಿದ್ದಾರೆ. ನ.30ರಂದು ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.ಪೊಲೀಸರು ಪ್ರತಿಭಟನೆ ಉದ್ದೇಶದ ಬಗ್ಗೆ ರಚಿತಾ ತನೇಜಾ ಅವರಿಗೆ ಹಲವು ಸ್ಪಷ್ಟನೆಗಳನ್ನು ಕೇಳಿದ್ದು, ಈ ಬಗ್ಗೆ ಅವರು ಉತ್ತರ ನೀಡಿದ ನಂತರ ಪೊಲೀಸರು ಅನುಮತಿ ನೀಡಲಿದ್ದಾರೆಯೇ? ಎಂಬ ಬಗ್ಗೆ ನಿರ್ಧಾರ ಹೊರಬೀಳಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಕಾನೂನು ಪರಿಮಿತಿಯಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಹೇಳಿದ್ದಾರೆ. ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿಎರಡು ದಿನದಲ್ಲಿ ನಿರ್ಧಾರ : ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬೇಕೆಂದು ಮನವಿ ಬಂದಿದೆ. ಸುಮಾರು 150 ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡುವ ಕುರಿತು ಎರಡು ದಿನದಲ್ಲಿ ತೀರ್ಮಾನಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರಿಗೂ ಬಂತು ಕಿಸ್ ಆಫ್ ಲವ್!" }
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಗೆಹರಿಯದ ಕಿಸ್ ಆಫ್ ಲವ್ ಆಯೋಜನೆ ಗೊಂದಲ

|
Google Oneindia Kannada News

ಬೆಂಗಳೂರು, ನ.21 : ಬೆಂಗಳೂರಿನಲ್ಲಿ 'ಕಿಸ್‌ ಆಫ್ ಲವ್' ಆಯೋಜನೆ ಕುರಿತ ಗೊಂದಲಗಳು ಮುಂದುವರೆದಿದ್ದು, ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸಚಿವೆ ಉಮಾಶ್ರೀ ಅವರು ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. 'ಕಿಸ್‌ ಆಫ್‌ ಲವ್' ಕಾರ್ಯಕ್ರಮಕ್ಕೆ ಅವಕಾಶ ನೀಡುವ ಕುರಿತು ಎರಡು ದಿನದಲ್ಲಿ ಪೊಲೀಸರು ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು, ಗೃಹ ಸಚಿವ ಕೆ.ಜೆಜಾರ್ಜ್ ಅವರಿಗೆ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿ 'ಕಿಸ್ ಆಫ್‌ ಲವ್' ನಡೆಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಸಾರ್ವಜನಿಕವಾಗಿ ಯುವಕ-ಯುವತಿ ಚುಂಬಿಸುವುದು ನಮ್ಮ ಸಂಸ್ಕೃತಿಗೆ ವಿರುದ್ಧವಾಗಿದ್ದು, ಇಂತಹ ಪ್ರತಿಭಟನೆಗೆ ಅವಕಾಶ ಕೊಡಬೇಡಿ ಎಂದು ಆಗ್ರಹಿಸಿದ್ದಾರೆ.

'ಕಿಸ್ ಆಫ್ ಲವ್' ಕಾರ್ಯಕ್ರಮವನ್ನು ಮೊದಲಿನಿಂದಲೂ ವಿರೋಧಿಸುತ್ತಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು, ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ಅವರನ್ನು ಗುರುವಾರ ಭೇಟಿ ಮಾಡಿ, ಇಂತಹ ಕಾರ್ಯಕ್ರಮಕ್ಕೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದ್ದಾರೆ. [ಕಿಸ್ ಆಫ್ ಲವ್, ವಿದ್ಯಾರ್ಥಿಗಳು ಏನಂತಾರೆ?]

ಕೇರಳದಲ್ಲಿ ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ನಡೆಯುವ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು 'ಕಿಸ್ ಆಫ್ ಲವ್' ಕಾರ್ಯಕ್ರಮವನ್ನು ಆಯೋಜಿಸಲು ರಚಿತಾ ತನೇಜಾ ಮುಂದಾಗಿದ್ದಾರೆ. ನ.30ರಂದು ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.

Pramod Muthalik

ಪೊಲೀಸರು ಪ್ರತಿಭಟನೆ ಉದ್ದೇಶದ ಬಗ್ಗೆ ರಚಿತಾ ತನೇಜಾ ಅವರಿಗೆ ಹಲವು ಸ್ಪಷ್ಟನೆಗಳನ್ನು ಕೇಳಿದ್ದು, ಈ ಬಗ್ಗೆ ಅವರು ಉತ್ತರ ನೀಡಿದ ನಂತರ ಪೊಲೀಸರು ಅನುಮತಿ ನೀಡಲಿದ್ದಾರೆಯೇ? ಎಂಬ ಬಗ್ಗೆ ನಿರ್ಧಾರ ಹೊರಬೀಳಲಿದೆ. ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಕಾನೂನು ಪರಿಮಿತಿಯಲ್ಲಿ ಪ್ರತಿಭಟನೆ ನಡೆಸಬಹುದು ಎಂದು ಹೇಳಿದ್ದಾರೆ. [ಕಿಸ್ ಆಫ್ ಲವ್ ವಿರುದ್ಧ ಒನಕೆ ಚಳವಳಿ]

ಎರಡು ದಿನದಲ್ಲಿ ನಿರ್ಧಾರ : 'ಕಿಸ್ ಆಫ್ ಲವ್' ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬೇಕೆಂದು ಮನವಿ ಬಂದಿದೆ. ಸುಮಾರು 150 ಜನರು ಇದರಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡುವ ಕುರಿತು ಎರಡು ದಿನದಲ್ಲಿ ತೀರ್ಮಾನಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. [ಬೆಂಗಳೂರಿಗೂ ಬಂತು 'ಕಿಸ್ ಆಫ್ ಲವ್'!]

English summary
Kannada & Culture Minister Umashree and Sri Ram Sene chief Pramod Muthalik opposed 'Kiss of Love' campaign in Bengalur. Minister Umashree send a letter to Home Minister K.J. George on this issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X