ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೋಕಲ್ ವಾರ್: ಉ.ಕದಲ್ಲಿ ಜೆಡಿಎಸ್ ಝಗಮಗ, ಕಾಂಗ್ರೆಸ್‌ ಕಿಲಕಿಲ

By Nayana
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 6: ಈಗಾಗಲೇ ರಾಜ್ಯದಲ್ಲಿ 22 ಜಿಲ್ಲೆಗಳಲ್ಲಿ ಮೂರು ಮಹಾನಗರ ಪಾಲಿಕೆಗಳು ಮತ್ತು 102 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದೆ. ಜೆಡಿಎಸ್ ಹಳೇ ಮೈಸೂರು ಭಾಗದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೂ ಉತ್ತರ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿದೆ.

ಒಟ್ಟು 105 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಪೈಕಿ ಕಾಂಗ್ರೆಸ್‌ ಶೇ.33.52ರಷ್ಟು ಅತಿ ಹೆಚ್ಚು ಮತಗಳಿಸಿದರೆ, ಬಿಜೆಪಿ ಶೇ.31.07ರಷ್ಟು ಮತ ಪಡೆದು ಎರಡನೇ ಸ್ಥಾನದಲ್ಲಿದೆ ಎಂದಿನಂತೆ ಜೆಡಿಎಸ್ ಶೇ.6.53 ಮತಗಳನ್ನು ಪಡೆದು ಖುಷಿ ಪಟ್ಟಿದೆ. ಆದರೆ ಉತ್ತರ ಕರ್ನಾಟಕದಲ್ಲಿ ತಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ.

ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ತನ್ನ ಭದ್ರಕೋಟೆಯಾದ ಮಂಡ್ಯ, ಹಾಸನ ಸೇರಿ ಹಳೆ ಮೈಸೂರು ಭಾಗದಲ್ಲಿ ಸಹಜವಾಗಿ ಮುನ್ನಡೆ ಕಾಯ್ದುಕೊಂಡಿದೆ.

ಉತ್ತರ ಕರ್ನಾಟಕದಲ್ಲಿ ಗಣನೀಯ ಸಾಧನೆ ಮಾಡಿದ ಜೆಡಿಎಸ್

ಉತ್ತರ ಕರ್ನಾಟಕದಲ್ಲಿ ಗಣನೀಯ ಸಾಧನೆ ಮಾಡಿದ ಜೆಡಿಎಸ್

ಉತ್ತರ ಕರ್ನಾಟಕ ಭಾಗದಲ್ಲಿ ಗಣನೀಯ ಸಾಧನೆ ಮಾಡಿದೆ. ಜೆಡಿಎಸ್ ಗೆದ್ದಿರುವ 375 ಸ್ಥಾನಗಳ ಪೈಕಿ 99 ಸ್ಥಾನಗಳನ್ನು ಉತ್ತರ ಕರ್ನಾಟಕದಲ್ಲಿ ಗೆದ್ದಿದೆ. ಜೆಡಿಎಸ್ ಪಡೆದಿರುವ ಒಟ್ಟು 5.04 ಲಕ್ಷ ಮತಗಳಲ್ಲಿ ಉತ್ತರ ಕರ್ನಾಟಕದಲ್ಲಿ 1.44 ಲಕ್ಷ ಮತಗಳನ್ನು ಗಳಿಸಿದೆ.

ಚುನಾವಣೆ ನಡೆದ 22 ಜಿಲ್ಲೆಗಳ ಪೈಕಿ ಮುಂಬೈ ಕರ್ನಾಟಕದ 6 ಮತ್ತು ಹೈದರಾಬಾದ್‌ ಕರ್ನಾಟಕದ 6 ಸೇರಿ ಉತ್ತರ ಕರ್ನಾಟಕ ಭಾಗದ ಒಟ್ಟು 12 ಜಿಲ್ಲೆಗಳಲ್ಲಿ ಚುನಾವಣೆ ನಡೆದ 1,731 ವಾರ್ಡ್ ಗಳಲ್ಲಿ 1.44 ಲಕ್ಷ ಮತಗಳನ್ನು ಪಡೆದು 99 ಸ್ಥಾನಗಳನ್ನು ಜೆಡಿಎಸ್ ಗೆದ್ದಿದೆ.

ಕಾಂಗ್ರೆಸ್‌ಗೆ ಶೇ.33 ಮತ

ಕಾಂಗ್ರೆಸ್‌ಗೆ ಶೇ.33 ಮತ

ಒಟ್ಟು 48.43 ಲಕ್ಷ ಮತದಾರರ ಪೈಕಿ 30.50 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ ಶೇ. 63.80ರಷ್ಟು ಮತದಾನವಾಗಿದೆ. ಚಲಾವಣೆಯಾದ ಒಟ್ಟು ಮತಗಳಲ್ಲಿ 10.23 ಲಕ್ಷ ಮತಗಳನ್ನು ಕಾಂಗ್ರೆಸ್‌ ಪಡೆದುಕೊಂಡಿದ್ದರೆ, ಬಿಜೆಪಿ 9.48 ಲಕ್ಷ ಮತ್ತು ಜೆಡಿಎಸ್ 5.04 ಲಕ್ಷ ಮತಗಳನ್ನು ಪಡೆದುಕೊಂಡಿವೆ. ಶೇ.15.09ರಂತೆ ಪಕ್ಷೇತರರು 4.60ಲಕ್ಷ ಮತಗಳನ್ನು ಪಡೆದಿದ್ದಾರೆ. ಉಳಿದಂತೆ ಎಸ್‌ಡಿಪಿಐ 29 ಸಾವಿರ, ಬಿಎಸ್ ಪಿ 26 ಸಾವಿರ, ಕೆಪಿಜೆಪಿ 16 ಸಾವಿರ, ಸಮಾಜವಾದಿ ಪಕ್ಷ 5,276, ಎಡಪಕ್ಷಗಳು ನಾಲ್ಕು ಸಾವಿರ ಮತಗಳನ್ನು ಗಳಿಸಿವೆ.

ಮಾಜಿ ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್‌ 1.38 ಲಕ್ಷ ಮತಗಳನ್ನು ಪಡೆದಿದೆ. ಮಹಾನಗರ ಪಾಲಿಕೆ ಸೇರಿ ಚುನಾವಣೆ ನಡೆದ 4 ಸ್ಥಳೀಯ ಸಂಸ್ಥೆಗಳ 134 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ. 27 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ 1.08 ಲಕ್ಷ ಮತಗಳನ್ನು ಗಳಿಸಿದೆ. 43 ಸ್ಥಾನಗಳನ್ನು ಪಡೆದಿರುವ ಜೆಡಿಎಸ್ 1.03 ಲಕ್ಷ ಮತಗಳನ್ನು ಗಳಿಸಿದೆ.

ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018 ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ : 2013 v/s 2018

ವಿಜಯಪುರ, ಬೆಳಗಾವಿಯಲ್ಲಿ ಜೆಡಿಎಸ್ 35 ಸ್ಥಾನಗಳನ್ನು ಗೆದ್ದಿದೆ

ವಿಜಯಪುರ, ಬೆಳಗಾವಿಯಲ್ಲಿ ಜೆಡಿಎಸ್ 35 ಸ್ಥಾನಗಳನ್ನು ಗೆದ್ದಿದೆ

ಮುಂಬೈ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ 1,137 ವಾರ್ಡ್ ಗಳಲ್ಲಿ 55,300 ಮತಗಳನ್ನು ಗಳಿಸಿ ಜೆಡಿಎಸ್ 35 ಸ್ಥಾನಗಳನ್ನು ಗೆದ್ದಿದೆ. ಅದೇ ರೀತಿ ಹೈ ಕದ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯಲ್ಲಿ 594 ವಾರ್ಡ್‌ಗಳಲ್ಲಿ 89,349 ಮತಗಳನ್ನು ಪಡೆದು 6 ಸ್ಥಾನಗಳನ್ನು ಜೆಡಿಎಸ್ ಗಳಿಸಿದೆ. ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ 89 ವಾರ್ಡ್ಗಳಲ್ಲಿ 16, ದಾವಣಗೆರೆ ಜಿಲ್ಲೆಯ 59 ವಾರ್ಡ್‌ಗಳಲ್ಲಿ 5 ಸ್ಥಾನಗಳನ್ನು ಗೆದ್ದಿದೆ. ಬಳ್ಳಾರಿ, ಚಾಮರಾಜನಗರ, ಉಡುಪಿ ಜಿಲ್ಲೆಗಳಲ್ಲಿ 5 ಸಾವಿರ ಮತಗಳನ್ನು ಪಡೆದಿದ್ದರೂ ಜೆಡಿಎಸ್‌ ಇಲ್ಲಿ ಒಂದು ಸ್ಥಾನವೂ ಗೆದ್ದಿಲ್ಲ.

ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ: ಖಾದರ್ ನೀಡಿದ ಕಾರಣವೇನು?ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆ ಹೀನಾಯ ಪರಿಸ್ಥಿತಿ: ಖಾದರ್ ನೀಡಿದ ಕಾರಣವೇನು?

26 ಸಾವಿರ ನೋಟಾ ಚಲಾವಣೆ

26 ಸಾವಿರ ನೋಟಾ ಚಲಾವಣೆ

ಚುನಾವಣೆ ನಡೆದ 22 ಜಿಲ್ಲೆಗಳ 105 ಸ್ಥಳೀಯ ಸಂಸ್ಥೆಗಳ 2,662 ವಾರ್ಡ್ ಗಳಲ್ಲಿ ಒಟ್ಟು 26,896 ಮಂದಿ "ನೋಟಾ' ಚಲಾಯಿಸಿದ್ದಾರೆ. ಇದು ಒಟ್ಟು ಮತದಾನದ ಶೇ.0.88ರಷ್ಟಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು 5,242 ಮಂದಿ ನೋಟಾ ಚಲಾಯಿಸಿದ್ದು, ಮೈಸೂರಿನಲ್ಲಿ 3,155, ಬೆಳಗಾವಿಯಲ್ಲಿ 2,453 ನೋಟಾ ಚಲಾವಣೆಯಾಗಿದೆ. ಈ ಜಿಲ್ಲೆಗಳಲ್ಲಿ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ವಾರ್ಡ್ ಗಳಲ್ಲಿ ಚುನಾವಣೆ ನಡೆದಿತ್ತು. ಹಾಗಾಗಿ ಸಹಜವಾಗಿ ನೋಟಾ ಸಹ ಹೆಚ್ಚಾಗಿದೆ.

English summary
An interesting revelation of the ULB poll results data, JDS party has improved its strength in north Karnataka as it was won 99 seats in the region.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X