ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ 'ಕ್ರೈಸ್ಟ್ ಯೂನಿವರ್ಸಿಟಿ' ಹೆಸರಿಗೆ ಕತ್ತರಿ

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 13 : ನಗರದ ಪ್ರತಿಷ್ಟಿತ ಕಾಲೇಜು ಕ್ರೈಸ್ಟ್ ಯುನಿವರ್ಸಿಟಿ ತನ್ನ ಹೆಸರಲ್ಲಿರುವ 'ಯೂನಿವರ್ಸಿಟಿ' ಪದ ಕೈಬಿಡಬೇಕಿದೆ.

ಹೌದು, ಯುಜಿಸಿ (ಯೂನಿವರ್ಸಿಟಿ ಗ್ರಾಂಟ್ ಕಮಿಷನ್) ನೀಡಿರುವ ಆದೇಶದ ಅನ್ವಯ ದೇಶದ 123 ಕಾಲೇಜುಗಳು ತಮ್ಮ ಹೆಸರಿನಲ್ಲಿರುವ 'ಯೂನಿವರ್ಸಿಟಿ' ಪದವನ್ನು ಕೈಬಿಡಬೇಕಿದೆ ಅವುಗಳಲ್ಲಿ ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯೂ ಒಂದು.

UGC asks 123 deemed-to-be varsities to drop ‘university’ from names

ನವೆಂಬರ್ 10 ರಂದು 'ಯೂನಿವರ್ಸಿಟಿ' ಹೆಸರು ಹೊಂದಿರುವ ಎಲ್ಲ ಕಾಲೇಜುಗಳಿಗೆ ಯು.ಜಿ.ಸಿಯು ಸೂತ್ತೊಲೆ ರವಾನಿಸಿದ್ದು. ಸುತ್ತೋಲೆಗೆ ನವೆಂಬರ್ 3ರಂದು ಸುಪ್ರೀಂ ಕೋರ್ಟ್ ಆದೇಶವನ್ನು ಲಗತ್ತಿಸಲಾಗಿದೆ. ಒಂದು ತಿಂಗಳ ಒಳಗಾಗಿ ತಮ್ಮ ಕಾಲೇಜಿನ ಹೆಸರಿನಲ್ಲಿರುವ "ಯೂನಿವರ್ಸಿಟಿ' ಪದವನ್ನು ಕೈಬಿಡಬೇಕು ಎಂದು ಆದೇಶಿಸಲಾಗಿದೆ. ಯುಜಿಸಿಯ ಸುತ್ತೋಲೆ ಕ್ರೈಸ್ಟ್ ಯೂನಿವರ್ಸಿಟಿಗೂ ತಲುಪಿದೆ ಎನ್ನಲಾಗುತ್ತಿದೆ.

ಯು.ಜಿ.ಸಿ ಸುತ್ತೋಲೆ ಪಡೆದಿರುವ ಕಾಲೇಜುಗಳು ಇನ್ನು ಮುಂದೆ ಯಾವುದೇ ಕಾರಣಕ್ಕೂ 'ಯೂನಿವರ್ಸಿಟಿ' ಪದ ಬಳಸಿ ಯಾವುದೇ ಪತ್ರವ್ಯವಹಾರ ಮಾಡುವಂತಿಲ್ಲ. ನಾಮಫಲಕಗಳನ್ನು ಹಾಕಿಕೊಳ್ಳುವಂತಿಲ್ಲ.

ಆದೇಶ ತಪ್ಪಿದರೆ ಯು.ಜಿ.ಸಿ 1996 ಕಾಯ್ದೆಯನ್ನು ಮೀರದಂತೆ ಎಂದು ಭಾವಿಸಿ ಯು.ಜಿ.ಸಿ ತನ್ನ ಅನುದಾನವನ್ನು ಖಡಿತಗೊಳಿಸುವುದಾಗಿ ಹೇಳಿದೆ.

ಕ್ರೈಸ್ಟ್ ಯೂನಿವರ್ಸಿಟಿ ಜೊತೆಗೆ ರಾಷ್ಟ್ರದ ಪ್ರಮುಖ ಕಾಲೇಜುಗಳು ಎನಿಸಿಕೊಂಡಿರುವ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್, ಪುಣೆಯ ಸಿಂಬಿಯೋಸಿಸ್ ಯುನಿವರ್ಸಿಟಿ, ಇಂಡಿಯನ್ ಅಗ್ರಿಕಲ್ಚರ್ ರಿಸರ್ಚ್ ಯುನಿಟ್ ಗಳಿಗೂ ಯು.ಜಿ.ಸಿ ಸುತ್ತೋಲೆ ಕಳಿಸಿದೆ.

English summary
As many as 123 institutions of higher education which are deemed to be universities have been directed by the University Grants Commission (UGC) to refrain from using the word 'university' in their names.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X